
ತೆಲುಗು ಚಿತ್ರರಂಗವನ್ನು ಹಲವು ವರ್ಷಗಳ ಕಾಲ ಆಳಿದ ನಟಿಯರಲ್ಲಿ ಕಾಜಲ್ ಅಗರ್ವಾಲ್ ಸಹ ಒಬ್ಬರು.

ಅನುಷ್ಕಾ ಶೆಟ್ಟಿ ರೀತಿಯಲ್ಲಿಯೇ ಕಾಜಲ್ ಅಗರ್ವಾಲ್ ಸಹ ತೆಲುಗಿನ ಬಹು ಬೇಡಿಕೆಯ ನಟಿಯಾಗಿದ್ದವರು.

ಮದುವೆಯಾದ ಬಳಿಕ ಕಾಜಲ್ ಅಗರ್ವಾಲ್ ನಟನೆಯಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿತ್ತು, ಆದರೆ ಅದು ಸುಳ್ಳಾಗಿದೆ.

ಮದುವೆಯಾಗಿ, ಮಗುವಿನ ತಾಯಿ ಆದ ಬಳಿಕವೂ ಕಾಜಲ್ ಅಗರ್ವಾಲ್ ನಟನೆ ಮುಂದುವರೆಸಿದ್ದಾರೆ.

ಕೆಲವು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ. ತೆಲುಗು ಹಾಗೂ ಹಿಂದಿ ಎರಡರಲ್ಲೂ ಬ್ಯುಸಿಯಾಗಿದ್ದಾರೆ ಕಾಜಲ್.

ಮದುವೆಯಾದ ಬಳಿಕ ಕಾಜಲ್ ಅಗರ್ವಾಲ್ ಗ್ಲಾಮರ್ ಸಹ ಕಡಿಮೆಯಾಗಿಲ್ಲ, ಮುಂಚಿನಂತೆಯೂ ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ.

ಕಾಜಲ್ ಅಗರ್ವಾಲ್ ಮೂರು ವರ್ಷಗಳ ಹಿಂದೆ ಗೌತಮ್ ಕಿಚಲು ಎಂಬ ಉದ್ಯಮಿಯನ್ನು ವಿವಾಹವಾಗಿದ್ದಾರೆ.