- Kannada News Photo gallery Sanya Iyer Shares Saree Look On social Media After Gauri Movie Shoot Begins
ಮೊದಲ ಸಿನಿಮಾ ಸೆಟ್ಟೇರಿದ ಖುಷಿಯಲ್ಲಿ ಹೊಸ ಫೋಟೋಶೂಟ್ ಮಾಡಿಸಿದ ಸಾನ್ಯಾ ಅಯ್ಯರ್
ಸಾನ್ಯಾ ಅಯ್ಯರ್ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ಆ ಬಳಿಕ ಅವರು ಬಿಗ್ ಬಾಸ್ ರಿಯಾಲಿಟಿ ಶೋಗೆ ಕಾಲಿಟ್ಟರು. ಅಲ್ಲಿಂದ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಈಗ ಸಾನ್ಯಾ ಅಯ್ಯರ್ ಅವರು ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ.
Updated on:Sep 04, 2023 | 9:45 AM

ನಟಿ ಸಾನ್ಯಾ ಅಯ್ಯರ್ ಅವರು ಈಗ ಸಖತ್ ಖುಷಿಯಲ್ಲಿದ್ದಾರೆ. ಅವರ ನಟನೆಯ ಮೊದಲ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಈ ಖುಷಿಯಲ್ಲಿ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾನ್ಯಾ ಅಯ್ಯರ್ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ಆ ಬಳಿಕ ಅವರು ಬಿಗ್ ಬಾಸ್ ರಿಯಾಲಿಟಿ ಶೋಗೆ ಕಾಲಿಟ್ಟರು. ಅಲ್ಲಿಂದ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಈಗ ಸಾನ್ಯಾ ಅಯ್ಯರ್ ಅವರು ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ.

ಸಾನ್ಯಾ ನಟನೆಯ ಮೊದಲ ಸಿನಿಮಾ ಸೆಟ್ಟೇರಿದೆ. ಈ ಚಿತ್ರಕ್ಕೆ ‘ಗೌರಿ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವರ ಮಗ ಸಮರ್ಜಿತ್ ಅವರು ಈ ಚಿತ್ರಕ್ಕೆ ಹೀರೋ.

ಇಂದ್ರಜಿತ್ ಅವರು ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ನಿರ್ದೇಶನದಲ್ಲಿ ನಟಿಸೋಕೆ ಅವಕಾಶ ಸಿಕ್ಕಿರುವುದಕ್ಕೆ ಸಾನ್ಯಾ ಅಯ್ಯರ್ ಅವರು ಖುಷಿಯಾಗಿದ್ದಾರೆ. ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ಸಾನ್ಯಾ ಅಯ್ಯರ್ ಅವರು ಮೊದಲ ಸಿನಿಮಾ ಸೆಟ್ಟೇರಿದ ಖುಷಿಯಲ್ಲಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಇಕ್ಕಿದೆ. ಸೀರೆ ಉಟ್ಟು ಅವರು ಗಮನ ಸೆಳೆದಿದ್ದಾರೆ.

ಸಾನ್ಯ ಅವರು ಆಗಾಗ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈ ವಿಚಾರದಲ್ಲಿ ಅವರು ಮಡಿವಂತಿಕೆ ಇಟ್ಟುಕೊಂಡಿಲ್ಲ. ಬೋಲ್ಡ್ ಫೋಟೋಗಳಿಗೆ ಫ್ಯಾನ್ಸ್ ಕಡೆಯಿಂದ ನೆಗೆಟಿವ್ ಕಮೆಂಟ್ಗಳು ಬಂದಿವೆ. ಆದರೆ, ಇದಕ್ಕೆ ಅವರು ತಲೆಕೆಡಿಸಿಕೊಂಡಿಲ್ಲ.

ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಬಿಗ್ ಬಾಸ್ನಲ್ಲಿ ಒಳ್ಳೆಯ ಫ್ರೆಂಡ್ಸ್ ಆದರು. ಅವರು ಒಟ್ಟಾಗಿ ಸಿನಿಮಾ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಆದರೆ, ಸಿನಿಮಾ ಸದ್ಯಕ್ಕಂತೂ ಸೆಟ್ಟೇರುವುದು ಅನುಮಾನ ಎಂದು ಹೇಳಲಾಗುತ್ತಿದೆ.
Published On - 9:30 am, Mon, 4 September 23




