ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ತಾಯ್ತನದ ಸಂಭ್ರಮದಲ್ಲಿದ್ದಾರೆ.
ಇತ್ತೀಚೆಗೆ ಕಾಜಲ್ ಹಾಗೂ ಗೌತಮ್ ಕಿಚ್ಲು ದಂಪತಿ ಪೋಷಕರಾಗಿದ್ದರು. ಪುತ್ರ ನೀಲ್ ಕಿಚ್ಲುಗೆ ಕಾಜಲ್ ಜನ್ಮನೀಡಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಕಾಜಲ್, ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇತ್ತೀಚೆಗೆ ನಟಿ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಅದರಲ್ಲಿ ಅವರು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಫ್ಯಾಶನ್ ಪ್ರಿಯರ ಗಮನ ಸೆಳೆದಿದ್ದಾರೆ.
ಕಾಜಲ್ ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗಿದೆ.
ಸದ್ಯ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿರುವ ನಟಿ, ಸಂಪೂರ್ಣವಾಗಿ ಪುತ್ರನ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.