‘ಸಿಕಂದರ್’ ಸಿನಿಮಾ ಟ್ರೇಲರ್​ನಲ್ಲಿ ಮಿಂಚಿದ ಕನ್ನಡದ ಕಲಾವಿದರು

|

Updated on: Mar 24, 2025 | 10:29 AM

SIKANDAR Trailer: ಮಾಸ್ ಅಂಶಗಳು ಸಲ್ಮಾನ್ ಖಾನ್ ಸಿನಿಮಾಗಳಲ್ಲಿ ಸ್ವಲ್ಪ ಹೆಚ್ಚೇ ಇರುತ್ತವೆ. ಅದೇ ರೀತಿ ‘ಸಿಕಂದರ್’ ಸಿನಿಮಾದಲ್ಲೂ ಭರ್ಜರಿ ಆ್ಯಕ್ಷನ್ ಇದೆ ಅನ್ನೋದು ಟ್ರೇಲರ್ ಮೂಲಕ ಗೊತ್ತಾಗಿದೆ. ರಶ್ಮಿಕಾ ಜೊತೆಗಿನ ಲವ್ ಸ್ಟೋರಿ ಕೂಡ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ಕನ್ನಡದ ಕಲಾವಿದರು ಇದ್ದಾರೆ.

1 / 7
ಸಲ್ಮಾನ್ ಖಾನ್ ಅವರು ‘ಸಿಕಂದರ್’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಈ ಸಿನಿಮಾ ಭರ್ಜರಿ ಯಶಸ್ಸು ಕಾಣುವ ಸೂಚನೆ ಸಿಕ್ಕಿದೆ. ಸಲ್ಮಾನ್ ಖಾನ್ ಅವರ ಗೆಟಪ್, ಲುಕ್ ಎಲ್ಲರಿಗೂ ಇಷ್ಟ ಆಗಿದೆ.

2 / 7
ಸಲ್ಮಾನ್ ಖಾನ್ ಅವರು ಇಷ್ಟು ವರ್ಷಗಳ ಕಾಲ ಒಂದೇ ಪ್ಯಾಟರ್ನ್​ ಸಿನಿಮಾ ಮಾಡುತ್ತಿದ್ದರು. ಅಲ್ಲದೆ, ಬಾಲಿವುಡ್ ನಿರ್ದೇಶಕರಿಗೆ ಹೆಚ್ಚು ಒತ್ತು ನೀಡುತ್ತಿದ್ದರು. ಈ ಬಾರಿ ಅವರು ದಕ್ಷಿಣದ ನಿರ್ದೇಶಕ ಜೊತೆ ಕೈ ಜೋಡಿಸಿರುವುದು ವಿಶೇಷ.

3 / 7
ಈ ಚಿತ್ರದಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಚಿತ್ರದಲ್ಲಿ ಸಾಕಷ್ಟು ಸ್ಕ್ರೀನ್​ಸ್ಪೇಸ್ ಇರುವ ಸೂಚನೆ ಸಿಕ್ಕಿದೆ. ಟ್ರೇಲರ್​ನಲ್ಲಿ ಸಾಕಷ್ಟು ಹೊತ್ತು ರಶ್ಮಿಕಾ ಅವರು ಕಾಣಿಸಿಕೊಂಡಿದ್ದಾರೆ.

4 / 7
ಕನ್ನಡದ ಖ್ಯಾತ ನಟ ಕಿಶೋರ್ ಕೂಡ ‘ಸಿಕಂದರ್’ ಸಿನಿಮಾದಲ್ಲಿ ನಟಿಸಿದ್ದಾರೆ. ನಟನೆಯ ಮೂಲಕ ಕಿಶೋರ್ ಅವರು ತಮ್ಮ ಕೈ ಚಳಕ ತೋರಿಸಿದ್ದಾರೆ. ಅವರ ಖ್ಯಾತಿ ಭರ್ಜರಿ ಹೆಚ್ಚಿದೆ. ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದಾರೆ.

5 / 7
ಬಹುಭಾಷಾ ನಟಿ ಕಾಜಲ್ ಅಗರ್​ವಾಲ್ ಕೂಡ ಚಿತ್ರದ ಭಾಗವಾಗಿದ್ದಾರೆ. ಅವರಿಗೆ ಹೆಚ್ಚಿನ ಸ್ಕ್ರೀನ್​ಸ್ಪೇಸ್ ಸಿಕ್ಕ ರೀತಿ ಕಾಣುತ್ತಿಲ್ಲ. ಅವರು ಎರಡನೇ ನಟಿಯಾಗಿ ಚಿತ್ರದಲ್ಲಿ ಅಭಿನಯಿಸಿದ್ದಾರೆ.

6 / 7
ರಶ್ಮಿಕಾ ಹಾಗೂ ಕಿಶೋರ್ ಅವರು ನಟಿಸಿರೋದರಿಂದ ‘ಸಿಕಂದರ್’ ರಂಗು ಮತ್ತಷ್ಟು ಹೆಚ್ಚಿದೆ. ಕನ್ನಡಿಗರು ಸಿನಿಮಾನ ನೋಡಲು ಇದೂ ಒಂದು ಕಾರಣ ಆಗಬಹುದು. ಈ ಚಿತ್ರ ಮಾರ್ಚ್ 30ರಂದು ತೆರೆಗೆ ಬರುತ್ತಿದೆ.

7 / 7
ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ‘ರಶ್ಮಿಕಾಗೆ ವಿವಾಹ ಆದರೂ ನಾನು ಅವರ ಜೊತೆ ಸಿನಿಮಾ ಮಾಡುತ್ತೇನೆ’ ಎಂದು ಸಲ್ಮಾನ್ ಖಾನ್ ಅವರು ಹೇಳಿದ್ದಾರೆ.