‘ಚೆಲುವಿನ ಚಿತ್ತಾರ’ ಬೆಡಗಿ, ನಟಿ ಅಮೂಲ್ಯ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ಕ್ಷಣಗಳಲ್ಲಿ ಸುಂದರವಾದ ಫೋಟೋಶೂಟ್ ಮಾಡಿಸುವ ಮೂಲಕ ಅಮೂಲ್ಯ ಸಂಭ್ರಮಿಸಿದ್ದಾರೆ. ಅವರಿಗೆ ಎಲ್ಲರೂ ಶುಭ ಹಾರೈಸಿದ್ದಾರೆ.
ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಹಂಚಿಕೊಂಡ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನೆಚ್ಚಿನ ನಟಿಯ ಫೋಟೋಗಳಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
ತಾಯಿ ಆಗುತ್ತಿರುವ ಸಂಭ್ರಮದಲ್ಲಿರುವ ಅಮೂಲ್ಯ ಅವರನ್ನು ಅನೇಕ ಗೆಳತಿಯರು ಬಂದು ಭೇಟಿ ಮಾಡಿದ್ದಾರೆ. ಕಿರುತೆರೆ ನಟಿ ವೈಷ್ಣವಿ ಸೇರಿದಂತೆ ಹಲವರು ಅಮೂಲ್ಯ ಜೊತೆ ಕ್ಲಿಕ್ಕಿಸಿಕೊಂಡ ಫೋಟೋಗಳು ವೈರಲ್ ಆಗುತ್ತಿವೆ.
ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇರುವಾಗಲೇ ನಟಿ ಅಮೂಲ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜಗದೀಶ್ ಜೊತೆ 2017ರಲ್ಲಿ ಅವರ ಮದುವೆ ನೆರವೇರಿತು. ಈಗ ಈ ದಂಪತಿ ಮೊದಲ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ.
ಮದುವೆ ಬಳಿಕ ಕುಟುಂಬದ ಕಡೆಗೆ ಅಮೂಲ್ಯ ಹೆಚ್ಚು ಗಮನ ಹರಿಸಿದರು. ಹಾಗಾಗಿ ಅವರು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಯಿತು. ಅಮೂಲ್ಯ ಮತ್ತೆ ಕಮ್ಬ್ಯಾಕ್ ಮಾಡಲಿ ಎಂಬುದು ಅಭಿಮಾನಿಗಳ ಬಯಕೆ.