ಏನೆಂದು ಹೆಸರಿಡುವುದು? ಮೊದಲ ಬಾರಿ ಮಗು ಫೋಟೋ ಹಂಚಿಕೊಂಡ ನಟಿ ಭಾವನಾ

Updated on: Sep 21, 2025 | 11:35 AM

ನಟಿ ಭಾವನಾ ರಾಮಣ್ಣ ಅವರು ಇತ್ತೀಚೆಗೆ ಮಗುವಿನ ಜನ್ಮ ನೀಡಿದ್ದರು. ಈಗ ಅವರು ಫೋಟೋ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಒಂದು ಸುಂದರವಾದ ಕ್ಯಾಪ್ಷನ್ ಕೂಡ ನೀಡಿದ್​ದಾರೆ. ತಾಯ್ತನದ ಅನುಭವವನ್ನು ಅವರು ಪದಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. ಭಾವನಾ ಅವರ ಮನೆಯಲ್ಲೀಗ ಪುಟ್ಟ ಕಂದನ ಕಲರವ ಕೇಳುತ್ತಿದೆ.

1 / 5
ಭಾವನಾ ರಾಮಣ್ಣ ಅವರು ಮದುವೆ ಆಗದೆಯೇ ಐವಿಎಫ್ ತಂತ್ರಜ್ಞಾನದ ಮೂಲಕ ಮಗು ಪಡೆದಿದ್ದಾರೆ. ಮಗುವಿನ ಕೈ ಇರುವ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

2 / 5
ತಾಯಿ ಆಗಿರುವ ಭಾವನಾ ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ‘ದೊಡ್ಡ ಮನೆ, ಪುಟ್ಟ ಕುಟುಂಬ… ಈಗ ನಮ್ಮ ಗೂಡಿಗೆ ಬಂದ ಹೊಸ ಪುಟ್ಟ ಹಕ್ಕಿಯ ಚುಯ್ ಚುಯ್ ನಾದ’ ಎಂದು ಅವರು ಬರೆದುಕೊಂಡಿದ್ದಾರೆ.

3 / 5
‘ನಾನು ಮತ್ತು ನನ್ನ ತಂದೆ, ಬೆಳಗ್ಗೆ ಎದ್ದು ಮನೆಯಂಗಳದಲ್ಲಿ ಕಾಫಿ ಹೀರುತ್ತಾ ಕೂತರೆ, ಇಲ್ಲಿ ಹಕ್ಕಿಗಳದ್ದೇ ನಾದ ನಿನಾದ. ಹಕ್ಕಿಗಳ ಹಾಡು ಪಾಡು ಕೇಳುತ್ತಿದ್ದ ಮನೆಯಲ್ಲೀಗ, ಹೊಸದೊಂದು ಪುಟ್ಟ ಹಕ್ಕಿಯ ಸರಿಗಮ’ ಎಂದಿದ್ದಾರೆ ಭಾವನಾ.

4 / 5
‘ಮನೆಯ ಗೂಡಲ್ಲಿ ಚುಯ್ ಚುಯ್ ಸದ್ದು ಮಾಡುತ್ತಿರುವ ಈ ಪುಟ್ಟ ಹಕ್ಕಿಗೆ ಏನೆಂದು ಹೆಸರಿಡುವುದು? ನಮ್ಮನ್ನು ನಯವಾಗಿ ಬಂಧಿಸಿದ ಸುಂದರ ಬಲೆ, ಇದು ಹೊಸ ಪ್ರೀತಿಯ ಅಲೆ. ವಿನೂತನ ವಿಸ್ಮಯ’ ಎಂದು ಭಾವನಾ ಪೋಸ್ಟ್ ಮಾಡಿದ್ದಾರೆ.

5 / 5
ಭಾವನಾ ಅವರು ‘ಏನೆಂದು ಹೆಸರಿಡಲಿ’ ಅಂತ ಬರೆದುಕೊಂಡಿರುವುದರಿಂದ ಕಮೆಂಟ್ ಮೂಲಕ ಅಭಿಮಾನಿಗಳು ಒಂದಷ್ಟು ಹೆಸರುಗಳನ್ನು ಸೂಚಿಸುತ್ತಿದ್ದಾರೆ. ಫೋಟೋ ನೋಡಿದ ಎಲ್ಲರಿಗೂ ಖುಷಿ ಆಗಿದೆ.