
ನಟಿ ತಾನ್ಯಾ ಹೋಪ್ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅವರು ಹಂಚಿಕೊಂಡಿರುವ ಮಿರರ್ ಸೆಲ್ಫಿ ಫೋಟೋ ಸಖತ್ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ತಾನ್ಯಾ ಹೋಪ್ ಶ್ರೀಮಂತ ಹಿನ್ನೆಲೆಯಿಂದ ಬಂದವರು. ಅವರನ್ನು ಚಿತ್ರರಂಗ ಸೆಳೆಯಿತು. ಹೀಗಾಗಿ ಬಣ್ಣದ ಲೋಕದಲ್ಲಿ ಅವರು ಬ್ಯುಸಿ ಆದರು. ‘ಅಮರ್’ ಚಿತ್ರದಿಂದ ಅವರ ಖ್ಯಾತಿ ಕನ್ನಡದಲ್ಲಿ ಹೆಚ್ಚಾಯಿತು.

ತಾನ್ಯಾ ಹೋಪ್ ಅವರ ಆಗಾಗ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಲಕ್ಷಾಂತರ ಹಿಂಬಾಲಕರಿದ್ದಾರೆ.

2022ರಲ್ಲಿ ರಿಲೀಸ್ ಆದ ‘ಹೋಂ ಮಿನಿಸ್ಟರ್’ ಸಿನಿಮಾ ಬಳಿಕ ಅವರು ಯಾವುದೇ ಕನ್ನಡ ಸಿನಿಮಾ ಒಪ್ಪಿಕೊಂಡಿಲ್ಲ.

ತಾನ್ಯಾ ನಟನೆ ಜೊತೆಗೆ ಮಾಡೆಲ್ ಲೋಕದಲ್ಲೂ ಬ್ಯುಸಿ ಇದ್ದಾರೆ. ವಿವಿಧ ಬಗೆಯ ಫೋಟೋಶೂಟ್ ಮಾಡಿ ಗಮನಸೆಳೆಯುತ್ತಾರೆ.