ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿ ಕವಿತಾ ಲಂಕೇಶ್ ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇಂದು (ಡಿ.13) ಅವರಿಗೆ ಜನ್ಮದಿನದ ಸಂಭ್ರಮ. ಅವರಿಗೆ ಆಪ್ತರು ವಿಶ್ ಮಾಡುತ್ತಿದ್ದಾರೆ.
ಕವಿತಾ ಲಂಕೇಶ್ ಅವರು ಮೊದಲು ನಿರ್ದೇಶಿಸಿದ ಸಿನಿಮಾ ‘ದೇವೀರಿ’. 1999ರಲ್ಲಿ ಆ ಚಿತ್ರ ತೆರೆಕಂಡಿತು. ಮೊದಲ ಪ್ರಯತ್ನದಲ್ಲೇ ಕವಿತಾ ಲಂಕೇಶ್ ಅವರು ಎಲ್ಲರ ಗಮನ ಸೆಳೆದರು. ಹಲವು ಪ್ರಶಸ್ತಿಗಳನ್ನು ಆ ಚಿತ್ರ ಪಡೆಯಿತು.
ತಮ್ಮ ಪ್ರತಿ ಸಿನಿಮಾದಲ್ಲೂ ಭಿನ್ನ ವಿಷಯವನ್ನು ಹೇಳಲು ಕವಿತಾ ಲಂಕೇಶ್ ಪ್ರಯತ್ನಿಸುತ್ತಾ ಬಂದಿದ್ದಾರೆ. ‘ಪ್ರೀತಿ ಪ್ರೇಮ ಪ್ರಣಯ’, ‘ತನನಂ ತನನಂ’, ‘ಅವ್ವ’ ಮುಂತಾದ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದ್ದಾರೆ.
ಚಿತ್ರರಂಗದಲ್ಲಿ ಕವಿತಾ ಲಂಕೇಶ್ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಅನೇಕ ಸಿನಿಮೋತ್ಸವಗಳಲ್ಲಿ ಅವರು ಭಾಗವಹಿಸಿದ್ದಾರೆ. ಜ್ಯೂರಿ ಸಮಿತಿ ಸದಸ್ಯೆ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಕವಿತಾ ಲಂಕೇಶ್ ಅವರ ಕುಟುಂಬಕ್ಕೂ ಸಿನಿಮಾಗೂ ಹತ್ತಿರದ ನಂಟು. ಅವರ ಸಹೋದರ ಇಂದ್ರಜಿತ್ ಲಂಕೇಶ್ ಕೂಡ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕವಿತಾ ಪುತ್ರಿ ಇಶಾ ಅವರು ‘ಸಮ್ಮರ್ ಹಾಲಿಡೇಸ್’ ಚಿತ್ರದಲ್ಲಿ ನಟಿಸಿದ್ದಾರೆ.
Published On - 9:58 am, Tue, 13 December 22