
ಡಾ ರಾಜ್ಕುಮಾರ್, ಬಿ ಸರೋಜಾದೇವಿ ಇನ್ನಿತರೆ ಕೆಲವು ಮಹಾನ್ ನಟ ನಟಿಯರು ನಟಿಸಿರುವ ಕಿತ್ತೂರ ಚೆನ್ನಮ್ಮ ಸಿನಿಮಾ ದೇಶಪ್ರೇಮ ಸಾರುವ ಹಳೆಯ ಸಿನಿಮಾಗಳಲ್ಲಿ ಒಂದು. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆಯಡಿ ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಮುಂದಾದಾಗ ರಾಣಿ ಚೆನ್ನಮ್ಮ ಮಾಡಿದ ಹೋರಾಟದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. 1961 ರಲ್ಲಿ ಬಿಡುಗಡೆ ಆದ ಈ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿಯೂ ಲಭಿಸಿದೆ.

1977 ರಲ್ಲಿ ಬಿಡುಗಡೆ ಆದ ‘ವೀರ ಸಿಂಧೂರ ಲಕ್ಷ್ಮಣ’ ಸಿನಿಮಾ ಸಹ ಸ್ವಾತಂತ್ರ್ಯ ಹೋರಾಟದ ಕುರಿತಾದ ಕತೆಯನ್ನು ಒಳಗೊಂಡಿದೆ. ಹುಣಸೂರು ಕೃಷ್ಣಮೂರ್ತಿ ನಿರ್ದೇಶನ ಮಾಡಿರುವ ಈ ಸಿನಿಮಾ ಕ್ರಾಂತಿಕಾರಿ ಸಿಂಧೂರ ಲಕ್ಷ್ಮಣನ ಹೋರಾಟದ ಕತೆಯನ್ನು ಒಳಗೊಂಡಿದೆ.

ಗಿರೀಶ್ ಕಾಸರವಳ್ಳಿ ನಿರ್ದೇಶನದ ಕಾದಂಬರಿ ಆಧರಿತ ಸಿನಿಮಾ ‘ತಾಯಿ ಸಾಹೇಬ’ ಸಹ ಸ್ವಾತಂತ್ರ್ಯ ಹೋರಾಟದ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಅಪ್ಪ ಸಾಹೇಬ ಹೆಸರಿನ ಸ್ವಾತಂತ್ರ್ಯ ಹೋರಾಟಗಾರ ಮತ್ತು ಆತನ ಪತ್ನಿಯ ಕತೆಯನ್ನು ಒಳಗೊಂಡಿದೆ. ಸಿನಿಮಾವು ಸ್ವಾತಂತ್ರ್ಯ ಹೋರಾಟ ಮತ್ತು ಭೂ ಚಳುವಳಿಯ ಕತೆಯನ್ನು ಒಳಗೊಂಡಿದೆ.

ವಿಷ್ಣುವರ್ಧನ್ ನಟನೆಯ ‘ಮುತ್ತಿನ ಹಾರ’ ಸಿನಿಮಾ ಸಹ ದೇಶಪ್ರೇಮ ಸಾರುವ ಸಿನಿಮಾ. ಈ ಸಿನಿಮಾದಲ್ಲಿ ಸೈನಿಕರ ದೇಶಪ್ರೇಮ, ಅವರ ತ್ಯಾಗ ಬಲಿದಾನಗಳ ಕತೆಯನ್ನು ಹೇಳಲಾಗಿದೆ. ಜೊತೆಗೆ ಕೌಟುಂಬಿಕ ಮೌಲ್ಯಗಳ ಕತೆಯನ್ನೂ ಸಹ ಸಿನಿಮಾದಲ್ಲಿ ಬೆರೆಸಲಾಗಿದೆ. ಇದು ಕನ್ನಡದ ಆಲ್ಟೈಮ್ ಹಿಟ್ ಸಿನಿಮಾಗಳಲ್ಲಿ ಒಂದು.

ಶಿವರಾಜ್ ಕುಮಾರ್ ನಟನೆಯ ‘ಹಗಲುವೇಷ’ ಸಿನಿಮಾ ಸಹ ಅತ್ಯುತ್ತಮ ದೇಶಭಕ್ತಿ ಸಿನಿಮಾ. ಬ್ರಿಟೀಷ್ ಆಡಳಿತದ ವಿರುದ್ಧ ದಂಗೆ ಏಳುವ ಸಾಮಾನ್ಯ ವ್ಯಕ್ತಿಯ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದ ಹಾಡುಗಳು ಅದ್ಭುತವಾಗಿವೆ.

ವಿಷ್ಣುವರ್ಧನ್ ನಟನೆಯ ‘ವೀರಪ್ಪ ನಾಯ್ಕ’ ಸೂಪರ್ ಹಿಟ್ ಆದ ದೇಶಪ್ರೇಮ ಹೊಂದಿದ ಸಿನಿಮಾ. ಈ ಸಿನಿಮಾವನ್ನು ಎಸ್ ನಾರಾಯಣ್ ನಿರ್ದೇಶನ ಮಾಡಿದ್ದರು. ಉಗ್ರಗಾಮಿಯಾದ ಮಗನನ್ನು ಕೊಲ್ಲುವ ದೇಶಪ್ರೇಮಿ ತಂದೆಯ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದ ಹಾಡುಗಳು ಅದ್ಭುತವಾಗಿವೆ.

ಸಿಪಿ ಯೋಗೀಶ್ವರ್ ನಟಿಸಿರುವ ‘ಸೈನಿಕ’ ಸಿನಿಮಾ ಸಹ ದೇಶಪ್ರೇಮ ಸಾರುವ ಸಿನಿಮಾ. ಇದು ಬ್ರಿಟೀಷರ ವಿರುದ್ಧದ ಹೋರಾಟದ ಕತೆ ಅಲ್ಲದಿದ್ದರೂ ಈ ಸಿನಿಮಾ ಸೈನಿಕರ ದೇಶಪ್ರೇಮ ಅವರ ಹೊರಾಟ, ತ್ಯಾಗ-ಬಲಿದಾನಗಳನ್ನು ಸಾರುವ ಸಿನಿಮಾ. ಈ ಬ್ಲಾಕ್ ಬಸ್ಟರ್ ಸಿನಿಮಾದ ಹಾಡುಗಳು ಸಹ ಬಹಳ ಜನಪ್ರಿಯ.