ನೆರವೇರಿತು ಕಿರುತೆರೆ ನಟಿ ವೈಷ್ಣವಿ ಗೌಡ ಮದುವೆ; ಇಲ್ಲಿವೆ ಸಂಭ್ರಮದ ಫೋಟೋಗಳು

Updated on: Jun 06, 2025 | 6:02 PM

ಸೀರಿಯಲ್ ನಟಿ ವೈಷ್ಣವಿ ಗೌಡ ಅವರು ಸಪ್ತಪದಿ ತುಳಿದಿದ್ದಾರೆ. ಅನುಕೂಲ್ ಮಿಶ್ರಾ ಜೊತೆ ಅವರ ಮದುವೆ ನೆರವೇರಿದೆ. ಈ ವಿವಾಹ ಸಮಾರಂಭಕ್ಕೆ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಅನೇಕರು ಸಾಕ್ಷಿ ಆಗಿದ್ದಾರೆ. ಮದುವೆ ಬಳಿಕ ವೈಷ್ಣವಿ ಗೌಡ ಅವರು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

1 / 5
‘ಅಗ್ನಿಸಾಕ್ಷಿ’, ‘ಸೀತಾರಾಮ’ ಧಾರಾವಾಹಿ ಮೂಲಕ ಮನೆಮಾತಾದ ನಟಿ ವೈಷ್ಣವಿ ಗೌಡ ಅವರು ಹಸೆಮಣೆ ಏರಿದ್ದಾರೆ. ಬಹಳ ಗ್ರ್ಯಾಂಡ್​ ಆಗಿ ಅವರ ಮದುವೆ ನೆರವೇರಿದೆ. ಮದುವೆಯ ಫೋಟೋಗಳು ವೈರಲ್ ಆಗಿವೆ. ಫ್ಯಾನ್ಸ್ ಅಭಿನಂದನೆ ತಿಳಿಸುತ್ತಿದ್ದಾರೆ.

‘ಅಗ್ನಿಸಾಕ್ಷಿ’, ‘ಸೀತಾರಾಮ’ ಧಾರಾವಾಹಿ ಮೂಲಕ ಮನೆಮಾತಾದ ನಟಿ ವೈಷ್ಣವಿ ಗೌಡ ಅವರು ಹಸೆಮಣೆ ಏರಿದ್ದಾರೆ. ಬಹಳ ಗ್ರ್ಯಾಂಡ್​ ಆಗಿ ಅವರ ಮದುವೆ ನೆರವೇರಿದೆ. ಮದುವೆಯ ಫೋಟೋಗಳು ವೈರಲ್ ಆಗಿವೆ. ಫ್ಯಾನ್ಸ್ ಅಭಿನಂದನೆ ತಿಳಿಸುತ್ತಿದ್ದಾರೆ.

2 / 5

ವೈಷ್ಣವಿ ಗೌಡ ಅವರು ಮದುವೆ ಆಗಿರುವ ಹುಡುಗನ ಹೆಸರು ಅನುಕೂಲ್ ಮಿಶ್ರಾ. ಏರ್​ಫೋರ್ಸ್​ ಆಫೀಸರ್ ಆಗಿ ಅವರು ಕೆಲಸ ಮಾಡುತ್ತಿದ್ದಾರೆ. ಅನುಕೂಲ್ ಮಿಶ್ರಾ ಮತ್ತು ವೈಷ್ಣವಿ ಗೌಡ ಅವರದ್ದು ಲವ್ ಮ್ಯಾರೇಜ್ ಅಲ್ಲ, ಅಪ್ಪಟ ಅರೇಂಜ್ ಮ್ಯಾರೇಜ್.

3 / 5

ಅಮೂಲ್ಯ, ವಿಜಯ್ ಸೂರ್ಯ, ನಿವೇದಿತಾ ಗೌಡ, ಅಲೋಕ್, ಕಾರುಣ್ಯ ರಾಮ್ ಮುಂತಾದ ಸೆಲೆಬ್ರಿಟಿಗಳು ಈ ಮದುವೆಗೆ ಹಾಜರಿ ಹಾಕಿದ್ದಾರೆ. ಮದುವೆಯಲ್ಲಿ ಸೆಲೆಬ್ರಿಟಿಗಳೆಲ್ಲ ಕುಣಿದು ಕುಪ್ಪಳಿಸಿದ್ದಾರೆ. ವೈಷ್ಣವಿ ಗೌಡ ವಿವಾಹ ಅದ್ದೂರಿಯಾಗಿ ನಡೆದಿದೆ.

4 / 5

ಅನೇಕ ವರ್ಷಗಳಿಂದ ವೈಷ್ಣವಿ ಗೌಡ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಸೀರಿಯಲ್​ನಲ್ಲಿ ನಟಿಸುವ ಮೂಲಕ ಅಪಾರ ಖ್ಯಾತಿ ಗಳಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 8’ ರಿಯಾಲಿಟಿ ಶೋನಲ್ಲೂ ವೈಷ್ಣವಿ ಗೌಡ ಅವರು ಸ್ಪರ್ಧಿಸಿದ್ದರು.

5 / 5

ವೈಷ್ಣವಿ ಗೌಡ ಅವರಿಗೆ ಮೊದಲಿನಿಂದಲೂ ಮದುವೆ ಪ್ರಪೋಸಲ್ ಬರುತ್ತಿದ್ದವು. ಆದರೆ ಯಾವುದನ್ನೂ ಅವರು ಒಪ್ಪಿಕೊಂಡಿರಲಿಲ್ಲ. ಅಂತಿಮವಾಗಿ ಉತ್ತರ ಭಾರತದ ಅನುಕೂಲ್ ಮಿಶ್ರಾ ಜೊತೆ ವೈಷ್ಣವಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us