ಮಂಗಳಮುಖಿಯರಿಗೆ ಕಿರಣ್ ರಾಜ್ ಸಹಾಯ; ಮನಸಾರೆ ನಟನಿಗೆ ಹರಸಿದ ತೃತೀಯ ಲಿಂಗಿಗಳು

Edited By:

Updated on: Feb 14, 2022 | 3:33 PM

ಕಳದೆರಡು ವರ್ಷಗಳಿಂದ ಕೊರೊನಾದಿಂದ ಆದ ಸಮಸ್ಯೆಗಳು ಒಂದೆರಡಲ್ಲ.ಅನೇಕರಿಗೆ ದಿನನಿತ್ಯದ ಜೀವನ ನಡೆಸುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಕೈಲಾದಷ್ಟು ಸಹಾಯ ಮಾಡುವ ಕಾಯಕವನ್ನು ಕಿರಣ್​ ರಾಜ್ ಮಾಡುತ್ತಿದ್ದಾರೆ.

1 / 6
ನಟ ಕಿರಣ್​ ರಾಜ್​ ಅವರು ‘ಕಿರಣ್​ ರಾಜ್​ ಫೌಂಡೇಷನ್​’ ಸ್ಥಾಪಿಸಿ ಅದರ ಅಡಿಯಲ್ಲಿ ಎಲ್ಲರಿಗೂ ಸಹಾಯ ಮಾಡುತ್ತಿದ್ದಾರೆ. ಕೊವಿಡ್​ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಕಿರಣ್​ ಸಹಾಯ ಮಾಡಿದ್ದರು. ನಟನೆಯ ಜತೆಗೆ ಅವರು ಮಾಡುವ ಸಾಮಾಜಿಕ ಕಾರ್ಯಗಳಿಂದಲೂ ಕಿರಣ್​ ರಾಜ್​ ಇಷ್ಟವಾಗುತ್ತಿದ್ದಾರೆ. ಈ ಬಾರಿ ಅವರು ಮಂಗಳಮುಖಿಯರಿಗೆ ಸಹಾಯ ಮಾಡಿದ್ದಾರೆ.

ನಟ ಕಿರಣ್​ ರಾಜ್​ ಅವರು ‘ಕಿರಣ್​ ರಾಜ್​ ಫೌಂಡೇಷನ್​’ ಸ್ಥಾಪಿಸಿ ಅದರ ಅಡಿಯಲ್ಲಿ ಎಲ್ಲರಿಗೂ ಸಹಾಯ ಮಾಡುತ್ತಿದ್ದಾರೆ. ಕೊವಿಡ್​ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಕಿರಣ್​ ಸಹಾಯ ಮಾಡಿದ್ದರು. ನಟನೆಯ ಜತೆಗೆ ಅವರು ಮಾಡುವ ಸಾಮಾಜಿಕ ಕಾರ್ಯಗಳಿಂದಲೂ ಕಿರಣ್​ ರಾಜ್​ ಇಷ್ಟವಾಗುತ್ತಿದ್ದಾರೆ. ಈ ಬಾರಿ ಅವರು ಮಂಗಳಮುಖಿಯರಿಗೆ ಸಹಾಯ ಮಾಡಿದ್ದಾರೆ.

2 / 6

ಕಳದೆರಡು ವರ್ಷಗಳಿಂದ ಕೊರೊನಾದಿಂದ ಆದ ಸಮಸ್ಯೆಗಳು ಒಂದೆರಡಲ್ಲ. ಈ ವೈರಸ್​ನಿಂದ ಎಷ್ಟೋ ‌ಜನರ ಜೀವನ‌ ಏರುಪೇರಾಗಿದೆ. ಅನೇಕರಿಗೆ ದಿನನಿತ್ಯದ ಜೀವನ ನಡೆಸುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಕೈಲಾದಷ್ಟು ಸಹಾಯ ಮಾಡುವ ಕಾಯಕವನ್ನು ಕಿರಣ್​ ರಾಜ್ ಮಾಡುತ್ತಿದ್ದಾರೆ.

3 / 6

ಮಂಗಳಮುಖಿಯರಿಗೆ ಕಿರಣ್​ ರಾಜ್​ ಸಹಾಯ ಮಾಡಿದ್ದಾರೆ. ಕೊರೊನ ಸಮಯದಲ್ಲಿ ಅವರಿಗೆ ಕಿರಣ್​ ರಾಜ್​ ಆಹಾರದ ಕಿಟ್ ನೀಡಿದ್ದರು. ಈಗ ಅವರಿಗೆ ಹೊದಿಕೆಗಳನ್ನು ನೀಡಿದ್ದಾರೆ. ಅವರಿಗೆ ಬಾಳೆಎಲೆಯಲ್ಲಿ ಊಟ ಹಾಕಿಸಿ, ತಾವು ಅವರೊಂದಿಗೆ ಊಟ ಮಾಡಿದ್ದಾರೆ.

4 / 6

‘ಮಂಗಳಮುಖಿಯರು ಈಗ ಯಾವುದರಲ್ಲೂ ಕಡಿಮೆ ಇಲ್ಲ. ನಮ್ಮ ಸಮಾಜ ಅವರನ್ನು ನೋಡುವ ರೀತಿ ಬದಲಾಗಬೇಕು. ಅವರು ನಮ್ಮ ಹಾಗೆ ಎಂದು ನೋಡಬೇಕು’ ಎಂಬುದು ‌ಕಿರಣ್ ರಾಜ್ ಮನವಿ.

5 / 6

‘ದೇವರು ಎಲ್ಲಾ ಕಡೆ ಇರುವುದಿಲ್ಲ. ಹೀಗಾಗಿ ಕಿರಣ್ ರಾಜ್ ಅವರಂತಹ ಒಳ್ಳೆಯ ‌ಗುಣ ಇರುವವರನ್ನು ಈ ಭೂಮಿಗೆ ಕಳುಹಿಸಿರುತ್ತಾನೆ. ದೇವರು ಅವರಿಗೆ ಒಳ್ಳೆಯದು ಮಾಡಲಿ’ ಎಂದು  ಮಂಗಳಮುಖಿಯರು ಮನಸಾರೆ‌ ಹಾರೈಸಿದ್ದಾರೆ.

6 / 6

ಕಿರಣ್​ ರಾಜ್​ ಮಾಡಿರುವ ಈ ಕಾರ್ಯಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷನ ಪಾತ್ರದ ಮೂಲಕ ಕಿರಣ್​ ಮಿಂಚುತ್ತಿದ್ದಾರೆ. ಇದಲ್ಲದೆ, ಹಲವು ಸಿನಿಮಾ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ‘ಭರ್ಜರಿ ಗಂಡು’ ಚಿತ್ರದ ಶೂಟಿಂಗ್ ಮುಕ್ತಾಯ ಹಂತದಲ್ಲಿದೆ.

Loading...
Unable to load recommendations.
Follow Us