
ನಟ ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ’ ಚಿತ್ರದಿಂದ ದೊಡ್ಡ ಮಟ್ಟದ ಗೆಲುವು ಸಿಕ್ಕಿದೆ. ದೇಶಾದ್ಯಂತ ಈ ಸಿನಿಮಾ ಸೂಪರ್ ಹಿಟ್ ಆಗಿರುವುದರಿಂದ ರಿಷಬ್ ಈಗ ಪ್ಯಾನ್ ಇಂಡಿಯಾ ಹೀರೋ ಆಗಿದ್ದಾರೆ. ಈ ಚಿತ್ರದಲ್ಲಿ ಅವರ ಮಾಡಿದ ‘ಶಿವ’ ಎಂಬ ಪಾತ್ರ ಸಖತ್ ಫೇಮಸ್ ಆಗಿದೆ.

‘ಕಾಂತಾರ’ ಚಿತ್ರ ಗೆದ್ದಿದೆ ಎಂದು ರಿಷಬ್ ಶೆಟ್ಟಿ ಸುಮ್ಮನೆ ಕೂತಿಲ್ಲ. ದೇಶದ ವಿವಿಧ ನಗರಗಳಿಗೆ ತೆರಳಿ ಅವರು ಪ್ರಚಾರ ಮಾಡುತ್ತಿದ್ದಾರೆ. ಹಲವು ಕಡೆಗಳಲ್ಲಿ ಅವರು ಸಕ್ಸಸ್ ಮೀಟ್ ಮಾಡುತ್ತಿದ್ದಾರೆ.

ಚೆನ್ನೈ, ವಿಶಾಖಪಟ್ಟಣ, ತಿರುಪತಿ, ಮುಂಬೈ ಸೇರಿದಂತೆ ಅನೇಕ ಊರುಗಳಿಗೆ ರಿಷಬ್ ಶೆಟ್ಟಿ ತೆರಳಿದ್ದಾರೆ. ಪ್ರೈವೇಟ್ ಜೆಟ್ ಮೂಲಕ ಅವರು ಎಲ್ಲ ಕಡೆಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ.

ನಟನಾಗಿ ಹಾಗೂ ನಿರ್ದೇಶಕನಾಗಿ ರಿಷಬ್ ಶೆಟ್ಟಿ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಎಲ್ಲ ರಾಜ್ಯಗಳಲ್ಲೂ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಎಲ್ಲ ಕಡೆಗಳಲ್ಲೂ ‘ಕಾಂತಾರ’ ಚಿತ್ರದ ಚರ್ಚೆ ಆಗುತ್ತಿದೆ.

ರಿಷಬ್ ಶೆಟ್ಟಿ ಅವರಿಗೆ ಹೋದಲ್ಲೆಲ್ಲ ಜನರ ಪ್ರೀತಿ ಸಿಗುತ್ತಿದೆ. ಕನ್ನಡದ ಈ ನಟ-ನಿರ್ದೇಶಕನ ಮೇಲೆ ಪರಭಾಷೆಯ ಪ್ರೇಕ್ಷಕರಿಗೂ ಸಖತ್ ಭರವಸೆ ಮೂಡಿದೆ. ಅವರ ಮುಂದಿನ ಚಿತ್ರಕ್ಕಾಗಿ ಎಲ್ಲರೂ ಕಾಯುವಂತಾಗಿದೆ.