ಕನ್ಯಾಕುಮಾರಿ ಟು ಕಾಶ್ಮೀರ: ಸ್ಕೂಟಿಲಿ 8033 ಕಿಮೀ ರೈಡ್​ ಮಾಡಿದ ಬಾಗಲಕೋಟೆ ಯುವತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 17, 2025 | 9:18 PM

ನಾಗರತ್ನಾ ಮೇಟಿ ಎಂಬ ಡಿಪ್ಲೋಮಾ ವಿದ್ಯಾರ್ಥಿನಿ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಏಕಾಂಗಿ ಬೈಕ್ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. 8033 ಕಿಮೀ ದೂರವನ್ನು ಬೈಕಿನಲ್ಲಿ ಪ್ರಯಾಣಿಸಿ, ಕಾಶ್ಮೀರದಲ್ಲಿ ಕನ್ನಡ ಧ್ವಜವನ್ನು ಹಾರಿಸಿದ್ದಾರೆ. ಈ ಸಾಹಸಯಾತ್ರೆಯಲ್ಲಿ ಎದುರಾದ ಸವಾಲುಗಳನ್ನು ಎದುರಿಸಿ ಅವರು ತಮ್ಮ ಗುರಿಯನ್ನು ತಲುಪಿದ್ದಾರೆ.

1 / 5
ಬಾಗಲಕೋಟೆಯ ಯುವತಿ ಕೊನೆಗೂ ತಾನು ಕಂಡ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ಬೈಕ್​ನಲ್ಲಿ ಸೋಲೋ ರೈಡಿಂಗ್ ಮೂಲಕ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸಾವಿರಾರು ಕಿಲೋಮೀಟರ್ ಪ್ರಯಾಣಿಸಿ ದಾಖಲೆ ಬರೆದಿದ್ದಾಳೆ.

2 / 5
ಈ ಯುವತಿ ಹೆಸರು ನಾಗರತ್ನಾ ಮೇಟಿ. ಸದ್ಯ ಡಿಪ್ಲೊಮಾ ಅಂತಿಮ ವರ್ಷದ ವಿದ್ಯಾರ್ಥಿನಿ. ಈಕೆ ಇದೀಗ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಬೈಕ್ ರೈಡ್‌ ಮಾಡಿ ಸಾಧನೆ ಮಾಡಿದ್ದಾಳೆ. ಅದು ಸ್ಕೂಟಿಯಲ್ಲಿ ಸೋಲೋ ರೈಡ್ ಮಾಡಿ ದಾಖಲೆ‌ ಮಾಡಿದ್ದಾಳೆ. ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ 8033 ಕಿಮೀ ಸೋಲೋ ರೈಡ್ ಮಾಡಿ ಕಾಶ್ಮೀರದಲ್ಲಿ ಕನ್ನಡ ಧ್ವಜ ಹಾರಿಸಿದ್ದಾಳೆ.

3 / 5
ನಾಗರತ್ನಾ ಡಿಸೆಂಬರ್ 24 ರಂದು ಬಾಗಲಕೋಟೆಯಿಂದ ತನ್ನ ಪ್ರಯಾಣ ಆರಂಭಿಸಿದ್ದಳು. ಅಲ್ಲಿಂದ ಕನ್ಯಾಕುಮಾರಿ ಹೋಗಿ ಬಳಿಕ ಗುಜರಾತ್, ರಾಜಸ್ಥಾನ, ಜಯಪುರ, ಉದಯಪುರ, ದೆಹಲಿ, ಅಮೃತಸರ ಮಾರ್ಗವಾಗಿ ಕಾಶ್ಮೀರದ ಶ್ರೀನಗರ ತಲುಪಿದ್ದರು. ಇದೀಗ ಪ್ರವಾಸ ‌ಮುಗಿಸಿ ಜನವರಿ 14ರಂದು ವಾಪಸ್ ಆಗಿದ್ದಾರೆ.

4 / 5
ಈಕೆಯ ಮೊಬೈಲ್ ನಿರಂತರವಾಗಿ ಟ್ರ್ಯಾಕ್​​ನಲ್ಲಿತ್ತು. ರೂಟ್ ಮ್ಯಾಪ್ ಮೂಲಕ ಸವಾರಿ ಮಾಡಿದ್ದು, ಕಾಶ್ಮೀರದಲ್ಲಿ ಕೊರೆಯುವ ಚಳಿಯಲ್ಲಿ ರೈಡ್ ಮಾಡಿದ್ದಾಳೆ. ಸವಾರಿ ವೇಳೆ ಒಂದು ಸಾರಿ ಬೈಕ್​ನಿಂದ ಬಿದ್ದಿದ್ದು, ಎಲ್ಲಾ ಅಡಚಣೆಗಳನ್ನು ಎದುರಿಸಿ ವಾಪಸ್ ಬಂದಿದ್ದಾಳೆ.

5 / 5
ನಾಗರತ್ನಾ ಊರಿಗೆ ಬರುತ್ತಿದ್ದಂತೆ ಸ್ಥಳೀಯರು ಸನ್ಮಾನ ಮಾಡಿ ಬರಮಾಡಿಕೊಂಡಿದ್ದಾರೆ. ಯುವತಿಯ ತಾಯಿ ಹಾಗೂ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಯುವತಿ ಚಿಕ್ಕ ವಯಸ್ಸಲ್ಲಿ ಮಹಾನ್ ಸಾಧನೆ ಮಾಡಿದ್ದು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Published On - 9:17 pm, Fri, 17 January 25