ಇದಕ್ಕೆ ಪೂರಕವಾಗಿ ರಾಜ್ಯ ತಂಡದ ಅಭ್ಯಾಸ ಶಿಭಿರಕ್ಕೆ ಗೈರಾಗಿರುವ ಸಂಜು ದುಬೈನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ವಿಜಯ್ ಹಜಾರೆ ಟ್ರೋಫಿಯಿಂದ ಹಿಂದೆ ಸರಿಯಲು ಸಂಜು, ಆಯ್ಕೆದಾರರು ಮತ್ತು ಮಂಡಳಿಗೆ ಯಾವುದೇ ಕಾರಣವನ್ನು ನೀಡಿಲ್ಲ. ಇದು ಬಿಸಿಸಿಐ ಕೋಪಕ್ಕೆ ಕಾರಣವಾಗಿದ್ದು, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸುವ ಮೊದಲು ಈ ವಿಚಾರದ ಬಗ್ಗೆ ತನಿಖೆ ನಡೆಸಲು ಬಿಸಿಸಿಐ ಬಯಸಿದೆ ಎಂದು ವರದಿಯಾಗಿದೆ.