AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜು ಸ್ಯಾಮ್ಸನ್ ಮೇಲೆ ಬಿಸಿಸಿಐ ಗರಂ; ಏಕದಿನ ಸರಣಿಗೆ ಆಯ್ಕೆ ಅನುಮಾನ

Sanju Samson: ವಿಜಯ್ ಹಜಾರೆ ಟ್ರೋಫಿಯಿಂದ ಹಿಂದೆ ಸರಿದಿರುವ ಸಂಜು ಸ್ಯಾಮ್ಸನ್ ಮೇಲೆ ಬಿಸಿಸಿಐ ಗರಂ ಆಗಿದೆ. ಪ್ರತಿಯೊಬ್ಬರು ದೇಶೀ ಟೂರ್ನಿ ಆಡಬೇಕೆಂಬ ಕಡ್ಡಾಯ ನಿಯಮಿದ್ದರೂ ಸಂಜು ಏಕದಿನ ಟೂರ್ನಿಯಿಂದ ಹಿಂದೆ ಸರಿದಿದ್ದು, ಇದೀಗ ಅವರ ವಿರುದ್ಧ ಕ್ರಮಕ್ಕೆ ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ. ಇದರ ಪರಿಣಾಮವಾಗಿ ಸಂಜು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೆ ತಂಡದಲ್ಲಿ ಆಯ್ಕೆಯಾಗುವುದು ಅನುಮಾನ ಎನ್ನಲಾಗುತ್ತಿದೆ.

ಪೃಥ್ವಿಶಂಕರ
|

Updated on: Jan 17, 2025 | 7:12 PM

Share
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾವನ್ನು ಇನ್ನು ಪ್ರಕಟಿಸಿಲ್ಲ. ಇದಲ್ಲದೇ ಚಾಂಪಿಯನ್ಸ್ ಟ್ರೋಫಿಗೂ ತಂಡವನ್ನು ಇನ್ನಷ್ಟೇ ಆಯ್ಕೆ ಮಾಡಬೇಕಿದೆ. ಈ ಸಲುವಾಗಿ ಬಿಸಿಸಿಐ ಶೀಘ್ರದಲ್ಲೇ ಸಭೆ ನಡೆಸಲಿದ್ದು, ಎರಡೂ ಟೂರ್ನಿಗಳಿಗೆ ತಂಡವನ್ನು ಪ್ರಕಟಿಸಲಿದೆ. ಆದರೆ ಅದಕ್ಕೂ ಮುನ್ನ ಸಂಜು ಸ್ಯಾಮ್ಸನ್‌ಗೆ ಸಂಬಂಧಿಸಿದಂತೆ ಆಘಾತಕ್ಕಾರಿ ಸುದ್ದಿಯೊಂದು ಹೊರಬಿದ್ದಿದೆ.

1 / 6
ವಾಸ್ತವವಾಗಿ ಸಂಜು ಸ್ಯಾಮ್ಸನ್​ರನ್ನು ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಆಯ್ಕೆ ಮಾಡಬಹುದು ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ದೇಶೀಯ ಏಕದಿನ ಪಂದ್ಯಾವಳಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಸಂಜು ಭಾಗವಹಿಸದಿರುವುದಕ್ಕೆ ಬಿಸಿಸಿಐ ಅಸಮಾಧಾನಗೊಂಡಿದ್ದು, ದೇಶೀ ಟೂರ್ನಿಯಿಂದ ಹಿಂದೆ ಸರಿಯಲು ಕಾರಣ ಏನು ಎಂಬುದನ್ನು ತಿಳಿಸುವಂತೆ ಸಂಜು ಸ್ಯಾಮ್ಸನ್​ಗೆ ತಾಕಿತು ಮಾಡಲಿದೆ ಎಂದು ವರದಿಯಾಗಿದೆ.

2 / 6
ತಂಡದ ಸತತ ಸೋಲುಗಳಿಂದ ಕಂಗೆಟ್ಟಿರುವ ಬಿಸಿಸಿಐ ಕೆಲವು ತಿಂಗಳುಗಳಿಂದ ಟೀಂ ಇಂಡಿಯಾ ಆಟಗಾರರು ದೇಶೀ ಟೂರ್ನಿಯಲ್ಲಿ ಆಡಲೇಬೇಕೆಂಬ ನಿಯಮ ವಿಧಿಸಿದೆ. ಅದನ್ನು ಪಾಲಿಸದ ಶ್ರೇಯಸ್ ಅಯ್ಯರ್​ ಹಾಗೂ ಇಶಾನ್​ ಕಿಶನ್​ಗೆ ಬಿಸಿಸಿಐ ನೀಡಿದ ಶಿಕ್ಷೆ ಏನೆಂಬುದನ್ನು ಈಗಾಗಲೇ ಎಲ್ಲಾ ಆಟಗಾರರು ನೋಡಿದ್ದಾರೆ. ಆದಾಗ್ಯೂ ಸಂಜು ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಿಂದ ಹಿಂದೆ ಸರಿದಿದ್ದರು.

3 / 6
ಮಾಧ್ಯಮ ವರದಿಗಳ ಪ್ರಕಾರ, ವಿಜಯ್ ಹಜಾರೆ ಟ್ರೋಫಿಗೆ ತಯಾರಿ ನಡೆಸಲು ಶಿಬಿರಕ್ಕೆ ಬರಲು ಸಾಧ್ಯವಿಲ್ಲ ಎಂದು ಸಂಜು ಸ್ಯಾಮ್ಸನ್ ಕೇರಳ ಕ್ರಿಕೆಟ್ ಸಂಸ್ಥೆಗೆ ತಿಳಿಸಿದ್ದರು. ಇದಾದ ನಂತರ ಕೆಸಿಎ ಅವರನ್ನು ಪಂದ್ಯಾವಳಿಯಿಂದ ಕೈಬಿಟ್ಟಿತ್ತು. ವಾಸ್ತವವಾಗಿ ಕೆಸಿಎ ಮತ್ತು ಸ್ಯಾಮ್ಸನ್ ನಡುವೆ ಬಹಳ ದಿನಗಳ ಹಿಂದೆಯೇ ಬಿರುಕು  ಮೂಡಿದೆ.

4 / 6
ಇದಕ್ಕೆ ಪೂರಕವಾಗಿ ರಾಜ್ಯ ತಂಡದ ಅಭ್ಯಾಸ ಶಿಭಿರಕ್ಕೆ ಗೈರಾಗಿರುವ ಸಂಜು ದುಬೈನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ವಿಜಯ್ ಹಜಾರೆ ಟ್ರೋಫಿಯಿಂದ ಹಿಂದೆ ಸರಿಯಲು ಸಂಜು, ಆಯ್ಕೆದಾರರು ಮತ್ತು ಮಂಡಳಿಗೆ ಯಾವುದೇ ಕಾರಣವನ್ನು ನೀಡಿಲ್ಲ. ಇದು ಬಿಸಿಸಿಐ ಕೋಪಕ್ಕೆ ಕಾರಣವಾಗಿದ್ದು, ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸುವ ಮೊದಲು ಈ ವಿಚಾರದ ಬಗ್ಗೆ ತನಿಖೆ ನಡೆಸಲು ಬಿಸಿಸಿಐ ಬಯಸಿದೆ ಎಂದು ವರದಿಯಾಗಿದೆ.

5 / 6
ವಿಜಯ್ ಹಜಾರೆ ಟ್ರೋಫಿಯಿಂದ ಹಿಂದೆ ಸರಿಯಲು ಕಾರಣ ಏನು ಎಂಬುದನ್ನು ಸಂಜು ಆಯ್ಕೆಗಾರರಿಗೆ ಮನವರಿಕೆ ಮಾಡುವಲ್ಲಿ ವಿಫಲರಾದರೆ ಅವರಿಗೆ ಮುಂಬರುವ ಏಕದಿನ ಪಂದ್ಯಗಳಲ್ಲಿ ಅವಕಾಶ ನೀಡುವುದು ಅನುಮಾನವಾಗಿದೆ. ಬಿಸಿಸಿಐ ಮೂಲಗಳ ಪ್ರಕಾರ, ಕೇರಳ ಕ್ರಿಕೆಟ್ ಮಂಡಳಿ ಹಾಗೂ ಸಂಜು ನಡುವೆ ಏನೇ ಮನಸ್ತಾಪವಿದ್ದರೂ ಅದನ್ನು ಸರಿಪಡಿಸಿಕೊಂಡು ಆಡಬೇಕು. ಇದನ್ನು ಬಿಟ್ಟು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವವರಿಗೆ ಸರಿಯಾದ ಪಾಠ ಕಲಿಸಲು ಮಂಡಳಿ ಯೋಚಿಸಿದೆ ಎಂದು ಹೇಳಲಾಗುತ್ತಿದೆ.

6 / 6
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!