
ಸಿನಿಮಾದಲ್ಲಿ ಕಾಮಿಡಿ ಪಾತ್ರಗಳಿಗೆ ಸಾಕಷ್ಟು ಬೇಡಿಕೆ ಇದೆ. ಇದರ ಜತೆಗೆ ಕೆಲವರು ತಮ್ಮದೇ ಕಾಮಿಡಿ ಶೋ ಮಾಡಿ ಫೇಮಸ್ ಆಗಿದ್ದಾರೆ. ಬಾಲಿವುಡ್ನ ಖ್ಯಾತ ಕಾಮಿಡಿಯನ್ಗಳ ನೆಟ್ವರ್ತ್ ಬಗ್ಗೆ ಇಲ್ಲಿದೆ ಮಾಹಿತಿ.

ಕಪಿಲ್ ಶರ್ಮಾ: ಕಪಿಲ್ ಶರ್ಮಾ ಅವರು ಭಾರತ ಟಾಪ್ ಕಾಮಿಡಿಯನ್ಗಳ ಸಾಲಿನಲ್ಲಿ ನಿಲ್ಲುತ್ತಾರೆ. ಇವರ ಅಭಿಮಾನಿ ಬಳಗ ಸಾಕಷ್ಟು ದೊಡ್ಡದಿದೆ. ಹಲವು ಕಾಮಿಡಿ ಶೋಗಳನ್ನು ಇವರು ನಡೆಸಿಕೊಟ್ಟಿದ್ದಾರೆ. ಇವರ ಒಟ್ಟೂ ಆಸ್ತಿ ಸುಮಾರು 245 ಕೋಟಿ ರೂಪಾಯಿ ಎನ್ನಲಾಗಿದೆ.

ಸುನಿಲ್ ಗ್ರೋವರ್: ಸುನಿಲ್ ಗ್ರೋವರ್ ಅವರ ಮಿಮಿಕ್ರಿ, ಕಾಮಿಡಿಗೆ ನಗದೆ ಇರುವವರೇ ಇಲ್ಲ. ಅವರನ್ನು ಕಂಡರೆ ಅನೇಕರಿಗೆ ಇಷ್ಟ. ಕಪಿಲ್ ಶರ್ಮಾ ಶೋನಿಂದ ಅವರ ಖ್ಯಾತಿ ಹೆಚ್ಚಿತು. ಕಾರಣಾಂತರಗಳಿಂದ ಇಬ್ಬರೂ ಬೇರೆ ಆದರು. ಹಾಗಂದ ಮಾತ್ರಕ್ಕೆ ಸುನಿಲ್ ಅವರ ಜನಪ್ರಿಯತೆ ಕಡಿಮೆ ಆಗಿಲ್ಲ. ಇವರ ಆಸ್ತಿ 30-45 ಕೋಟಿ ರೂ. ಆಸುಪಾಸಿನಲ್ಲಿದೆ.

ರಾಜ್ಪಾಲ್ ಯಾದವ್: ರಾಜ್ಪಾಲ್ ಅವರು ಬಾಲಿವುಡ್ನ ಫೇಮಸ್ ಕಾಮಿಡಿಯನ್. ಇವರ ಹಲವು ಕಾಮಿಡಿ ದೃಶ್ಯಗಳೂ ಈಗಲೂ ಚಾಲ್ತಿಯಲ್ಲಿವೆ. ಹಲವು ಮೀಮ್ಗಳಲ್ಲಿ ಇದು ಬಳಕೆ ಆಗುತ್ತಿದೆ. ಇವರ ಆಸ್ತಿ 50 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ.

ಭಾರತಿ ಸಿಂಗ್: ಹಲವು ಶೋಗಳಲ್ಲಿ ಕಾಮಿಡಿ ಪಾತ್ರ ಮಾಡಿ ಗಮನ ಸೆಳೆದವರು ಭಾರತಿ ಸಿಂಗ್. ಪ್ರತಿ ಶೋಗೆ ಇವರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಇವರ ಆಸ್ತಿ 30 ಕೋಟಿ ರೂಪಾಯಿಯಷ್ಟಿದೆ.

ಜಾನಿ ಲಿವರ್: ಜಾನಿ ಲಿವರ್ ಅವರು ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರ ಕಾಮಿಡಿ ಪಂಚ್ ಅನೇಕರಿಗೆ ಇಷ್ಟ ಆಗುತ್ತದೆ. ಇವರ ಒಟ್ಟೂ ಆಸ್ತಿ 227 ಕೋಟಿ ರೂಪಾಯಿ ಇದೆ.

ಪರೇಶ್ ರಾವಲ್: ಪರೇಶ್ ರಾವಲ್ ಅವರು ಓರ್ವ ಅದ್ಭುತ ನಟ. ಇವರು ಕಾಮಿಡಿಯನ್ ಆಗಿಯೂ ಹೆಚ್ಚು ಗುರುತಿಸಿಕೊಂಡಿದ್ದಾರೆ. ಇವರು 100 ಕೋಟಿ ರೂಪಾಯಿಯಷ್ಟು ಆಸ್ತಿ ಹೊಂದಿದ್ದಾರೆ.