Updated on:Apr 17, 2023 | 3:58 PM
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ.
ಇಂದು (ಏ.17) ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಸಮಯದಲ್ಲಿ ನಾಮಪತ್ರ ಸಲ್ಲಿಸಲು ಬಿಜೆಪಿ ಹಾಗು ಕಾಂಗ್ರೆಸ್ ಅಭ್ಯರ್ಥಿಗಳು ಆಗಮಿಸಿದ್ದರು.
ಮೊದಲು ಬಸವನಗುಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯುಬಿ ವೆಂಕಟೇಶ್ ಸಾವಿರಾರು ಕಾರ್ಯಕರ್ತರ ಜೊತೆ ಬಂದು ನಾಮಪತ್ರ ಸಲ್ಲಿಸಿದರು.
ಇದೇ ವೇಳೆ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ರವಿ ಸುಬ್ರಹ್ಮಣ್ಯ ಕೂಡ ಆಗಮಿಸಿ ನಾಮಪತ್ರ ಸಲ್ಲಿಸಿದರು. ಸಂಸದ ತೇಜಸ್ವಿ ಸೂರ್ಯ ಸಾಥ್ ನೀಡಿದರು.
ನಾಮಪತ್ರ ಸಲ್ಲಿಸಿ ಆಚೆ ಬಂದ ರವಿ ಸುಬ್ರಮಣ್ಯ ಅವರು ಯುಬಿ ವೆಂಕಟೇಶ್ ಅವರಿಗಾಗಿ ಕಾಯುತ್ತಾ ನಿಂತಿದ್ದರು. ಈ ವೇಳೆ ಇಬ್ಬರು ಅಭ್ಯರ್ಥಿಗಳು ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.
ಈ ವೇಳೆ ಒಂದು ಕಡೆ ಒಂದು ಕಡೆ ಕಾಂಗ್ರೆಸ್ ಕಾರ್ಯಕರ್ತರು ಜೋರಾಗಿ ವೋಟ್ ಫಾರ್ ಕಾಂಗ್ರೆಸ್ ಎಂದು ಕೂಗುತ್ತಿದ್ದರೇ ಮತ್ತೊಂದು ಕಡೆ ಬಿಜೆಪಿ ಅವರು ಜೋರಾಗಿ ವೋಟ್ ಫಾರ್ ಬಿಜೆಪಿ ಎಂದು ಜೋರಾಗಿ ಕೂಗುತ್ತಿದ್ದರು.
Published On - 3:57 pm, Mon, 17 April 23