
ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯಾದ್ಯಂತ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಬೆಳಗ್ಗೆಯೇ ಅನೇಕ ಸೆಲೆಬ್ರಿಟಿಗಳು ವೋಟ್ ಮಾಡಿದ್ದಾರೆ. ನಟ ಡಾಲಿ ಧನಂಜಯ್ ಕೂಡ ಮತ ಚಲಾಯಿಸಿದ್ದಾರೆ.

ಅರಸಿಕೇರಿಯ ಕಾಳೇನಹಳ್ಳಿಯಲ್ಲಿ ಧನಂಜಯ್ ಅವರು ಮತದಾನ ಮಾಡಿದ್ದಾರೆ. ತಮ್ಮ ಜೊತೆ ಇಡೀ ಕುಟುಂಬದವರನ್ನು ಅವರು ಮತಗಟ್ಟೆಗೆ ಕರೆತಂದಿದ್ದಾರೆ. ಆ ಮೂಲಕ ಎಲ್ಲರಿಗೂ ಅವರು ಸ್ಫೂರ್ತಿ ಆಗಿದ್ದಾರೆ.

ಮತದಾನ ಮಾಡಿದ ಬಳಿಕ ಕುಟುಂಬ ಸಮೇತರಾಗಿ ಫೋಟೋಗೆ ಪೋಸ್ ನೀಡಿದ್ದಾರೆ ಧನಂಜಯ್. ಆ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ನಾವೆಲ್ಲ ವೋಟ್ ಮಾಡಿದ್ವಿ. ನೀವೂ ವೋಟ್ ಮಾಡಿ. ವೋಟ್ ಮಾಡುವವರೇ ಡೇರ್ ಡೆವಿಲ್’ ಎಂದು ಡಾಲಿ ಧನಂಜಯ್ ಅವರು ಕ್ಯಾಪ್ಷನ್ ನೀಡುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಡಾಲಿ ಧನಂಜಯ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಇತ್ತೀಚೆಗೆ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆಗ ಅವರ ಬಗ್ಗೆ ಇಡೀ ಕುಟುಂಬದವರು ಮಾತನಾಡಿದ್ದರು.
Published On - 11:40 am, Wed, 10 May 23