AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2024: ಟಿ20 ವಿಶ್ವಕಪ್ ಗೆದ್ದು ಬೀಗಿದ ಭಾರತ, ರಾಜ್ಯದ ಗಲ್ಲಿ ಗಲ್ಲಿಯಲ್ಲೂ ಸಂಭ್ರಮ

ಅದು 10 ವರ್ಷದ ಕನಸು. ಈ ಹತ್ತು ವರ್ಷಗಳಲ್ಲಿ ಐಸಿಸಿ ನಡೆಸುವ ಟೂರ್ನಿಯ ಬರೋಬ್ಬರಿ ಐದು ಫೈನಲ್​ನಲ್ಲಿ ಭಾರತ ಸೋತಿತ್ತು. ಆದ್ರೆ ಈ ಬಾರಿ ಛಲ ಬಿಡದೇ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನ ಭಾರತ ಬಗ್ಗು ಬಡಿದಿದೆ. ಸತತವಾಗಿ ಎದುರಾಗುತ್ತಿರುವ ಸೋಲನ್ನು ಅರಗಿಸಿಕೊಂಡಿದ್ದ ಅಭಿಮಾನಿಗಳು ನಿನ್ನೆ ಬ್ಲ್ಯೂ ಬಾಯ್ಸ್ ಟ್ರೋಫಿ ಎತ್ತಿ ಹಿಡಿಯುತ್ತಿದ್ದಂತೆ ಬೀದಿಗೆ ಬಂದು ಮುಗಿಲು ಕಿತ್ತಿಹೋಗುವಂತೆ ಸಂಭ್ರಮಾಚರಿಸಿದ್ರು.

TV9 Web
| Edited By: |

Updated on: Jun 30, 2024 | 8:12 AM

Share
ಬೆಂಗಳೂರಿನಲ್ಲಂತೂ ಬೀದಿ ಬೀದಿಯಲ್ಲೂ ಗೆಲುವಿನ ಸಂಭ್ರಮ ಮುಗಿಲುಮುಟ್ಟಿತ್ತು. ಪ್ರಮುಖ ಏರಿಯಾಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಭಾರತ, ಕೊಹ್ಲಿ, ರೋಹಿತ್‌ ಪರ ಘೋಷಣೆ ಕೂಗಿದ್ರು. ಕೋರಮಂಗಲದಲ್ಲಿ ರಸ್ತೆಯನ್ನೇ ಬಂದ್ ಮಾಡಿ ಸಂಭ್ರಮಾಚರಿಸಿದ್ರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಇಂಡಿಯಾ. ಇಂಡಿಯಾ ಅಂತಾ ಘೋಷಣೆ ಕೂಗಿ ಡ್ಯಾನ್ಸ್ ಮಾಡಿದ್ರು.

1 / 10
ಕೋರಮಂಗಲದ ಪಬ್​ ಒಂದರಲ್ಲಿ ಕೊನೆಯ ಓವರ್​ನ ರೋಚಕತೆ ಸವಿದ ಅಭಿಮಾನಿಗಳು ಭಾರತ ಗೆಲುವಿನ ನಗಾರಿ ಬಾರಿಸುತ್ತಿದ್ದಂತೆ ಚಾವಣಿ ಕಿತ್ತೋಗುವಂತೆ ಜೈಕಾರ ಕೂಗಿದ್ರು. ಬಳಿಕ ಡಿಜೆ ಹಾಡಿಗೆ ಭರ್ಜರಿ ಡ್ಯಾನ್ಸ್​ ಮಾಡಿ ಗೆಲುವಿನ ಸಂಭ್ರಮವನ್ನ ಪರಸ್ಪರ ಹಂಚಿಕೊಂಡ್ರು.

2 / 10
ಚರ್ಚ್​​ಸ್ಟ್ರೀಟ್​ನಲ್ಲೂ ರಸ್ತೆ ಮಧ್ಯೆಯೇ ದೊಡ್ಡಪರದೆ ಮೇಲೆ ಕೊನೆಯ ಓವರ್​ಗಳನ್ನ ಅಭಿಮಾನಿಗಳು ಕಣ್ತುಂಬಿಕೊಂಡ್ರು. ಪಂದ್ಯದ ಕೊನೆಯ ಬಾಲ್ ಎಸೆಯುತ್ತಿದ್ದಂತೆ ಭಾರತ ಗೆದ್ದು ಬೀಗಿದ ಬಳಿಕ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

3 / 10
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಪಟಾಕಿ ಹೊಡೆದು ಸೆಲೆಬ್ರೇಷನ್ ಮಾಡಲಾಯ್ತು. ಈ ವೇಳೆ ವರ್ಲ್ಡ್​ಕಪ್ ಮಾದರಿಯ ಕಲಾಕೃತಿ ತಂದು ಜೈ ಶ್ರೀರಾಮ್​ ಅಂತಾ ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದ್ರು.

4 / 10
ಮೈಸೂರಿನಲ್ಲೂ ಕೂಡ ಕ್ರಿಕೆಟ್​ ಪ್ರಿಯರ ಸಂಭ್ರಮ ಮುಗಿಲು ಮುಟ್ಟಿತ್ತು. ಭಾರತ ಗೆಲ್ಲುತ್ತಿದ್ದಂತೆ ರಸ್ತೆಯಲ್ಲಿ ಪಟಾಕಿ ಹೊಡೆದು, ಭರ್ಜರಿ ಕುಣಿತ ಹಾಕಿದ್ರು. ಬಿರುಸು ಬಾಣ ಹಚ್ಚಿ ಟೀಂ ಇಂಡಿಯಾ ಪರ ಘೋಷಣೆ ಕೂಗಿದ್ರು.

5 / 10
ಮಂಗಳೂರಿನಲ್ಲೂ ಕೂಡ ಟೀಂ ಇಂಡಿಯಾದ ಗೆಲುವಿನ ಸಂಭ್ರಮ ಕಳೆಗಟ್ಟಿತ್ತು. ಭಾರತ ಗೆಲುವಿನ ಕೇಕೆ ಹಾಕ್ತಿದ್ದಂತೆ ಯುವತಿಯರು ಕುಣಿದು ಕುಪ್ಪಳಿಸಿದ್ರು. ಇಂಡಿಯಾ ಇಂಡಿಯಾ ಅಂತಾ ಘೋಷಣೆ ಕೂಗಿದ್ರು.

6 / 10
ಶಿವಮೊಗ್ಗದ ಗೋಪಿ ವೃತ್ತದಲ್ಲಿ ಯುವಕರು ಭಾರತದ ಪರ ಜಯ ಘೋಷ ಕೂಗಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದ್ರು. ಅಲ್ದೇ ಚಕ್ ದೇ ಇಂಡಿಯಾ ಹಾಡಿಗೆ ಭಾರತ ಧ್ವಜ ಹಿಡಿದು ಹೆಜ್ಜೆ ಹಾಕಿದ್ರು.

7 / 10
ಕಲಬುರಗಿ ನಗರದ ಎಸ್ ವಿಪಿ ವೃತ್ತದಲ್ಲಿ ಪಟಾಕಿ ಸಿಡಿಸಿ ಡ್ಯಾನ್ಸ್ ಮಾಡಿದ ಅಭಿಮಾನಿಗಳು ಭಾರತ ತಂಡದ ಟಿ-20 ವಿಶ್ವಕಪ್ ಗೆಲುವಿನ ಸಂಭ್ರಮ ಆಚರಿಸಿದ್ರು.

8 / 10
ಗದಗ ನಗರದ ದಾಸರ ಓಣಿ ಸೇರಿದಂತೆ ಅವಳಿ ನಗರದಲ್ಲೂ ಸಂಭ್ರಮ ಮನೆ ಮಾಡಿತ್ತು. ಪಟಾಕಿ ಹೊಡೆದು, ಭಾರತದ ಧ್ವಜ ಹಿಡಿದು ಜೈಕಾರ ಹಾಕಿದ್ರು. ಬೆಳಗಾವಿಯಲ್ಲೂ ಕೂಡ ಭಾರತ ಗೆಲ್ಲುತ್ತಿದ್ದಂತೆ ಕುಣಿದು ಕುಪ್ಪಳಿಸಿ ಅಭಿಮಾನಿಗಳು ಸಂಭ್ರಮಾಚರಿಸಿದ್ರು. ಭಾರತ ಮಾತಾಕೀ ಜೈ ಎಂದು ಘೋಷಣೆ ಕೂಗಿ ಶಿಳ್ಳೆ ಹೊಡೆದು ಭರ್ಜರಿ ಸ್ಟೆಪ್ಸ್​ ಹಾಕಿದ್ರು.

9 / 10
ಹಾಸನದ ಪಬ್​ ಒಂದ್ರಲ್ಲಿ ಭಾರತದ ಗೆಲುವು ಕಂಡು ಅಭಿಮಾನಿಗಳು ಶಿಳ್ಳೆ ಹಾಕಿ ಸಂಭ್ರಮಿಸಿದ್ರು.

10 / 10