- Kannada News Photo gallery Karnataka Congress finalises names for three MLC posts Full details In Kannada
ರಾಜ್ಯಪಾಲರ ಅಂಗಳದಲ್ಲಿ MLC ನಾಮ ನಿರ್ದೇಶನದ ಚೆಂಡು, ಬಂಡಾಯಕ್ಕೆ ದಾರಿ ಮಾಡುತ್ತಾ ಸಿಎಂ ನಿರ್ಧಾರ?
ವಿಧಾನ ಪರಿಷತ್ನ ಮೂವರ ಸದಸ್ಯರ ನಾಮನಿರ್ದೇಶನ ವಿಚಾರ ರಾಜ್ಯ ಕಾಂಗ್ರೆಸ್ನಲ್ಲಿ ಹಲ್ಚಲ್ ಸೃಷ್ಟಿಸಿದೆ. ಮಾಜಿ ಸಚಿವೆ ಉಮಾಶ್ರೀ, ಸೀತಾರಾಮ್, ಸುಧಾಮ್ ದಾಸ್ ಹೆಸರು ಫೈನಲ್ ಆಗಿದ್ದು, ಪಕ್ಷದೊಳಗೆ ತೀವ್ರ ವಿರೋಧವಿದ್ದರೂ ಸಿಎಂ ಸಿದ್ದರಾಮಯ್ಯ ಮೂವರ ಪಟ್ಟಿಯನ್ನ ರಾಜಭವನಕ್ಕೆ ಪಟ್ಟಿ ರವಾನಿಸಿದ್ದಾರೆ. ಸಮಾಜಸೇವೆ ಕೋಟಾದಡಿ ಸುಧಾಮ್ ದಾಸ್‌ಗೆ ಅವಕಾಶ ನೀಡಿದ್ದರೆ, ಶಿಕ್ಷಣ ಕ್ಷೇತ್ರದ ಕೋಟಾದಡಿ ಸೀತಾರಾಂಗೆ ಸ್ಥಾನ ಕಲ್ಪಿಸಲಾಗಿದೆ. ಆದ್ರೆ, ಇವರಿಬ್ಬರ ಆಯ್ಕೆಗೆ ಕಾಂಗ್ರೆಸ್ನಲ್ಲೆ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಇವರ ವಿರುದ್ಧ ದೂರು ಸಲ್ಲಿಕೆಯಾಗಿದೆ. ಹೀಗಾಗಿ ರಾಜ್ಯಪಾಲರಿಗೆ ತೃಪ್ತಿ ತರದಿದ್ದರೇ ಇಬ್ಬರ ಹೆಸರನ್ನ ತಡೆ ಹಿಡಿಯುವ ಸಾಧ್ಯತೆ ಎನ್ನಲಾಗಿದೆ.
Updated on: Aug 16, 2023 | 7:25 AM

ವಿಧಾನ ಪರಿಷತ್ನ ಮೂವರ ಸದಸ್ಯರ ನಾಮನಿರ್ದೇಶನ ವಿಚಾರ ರಾಜ್ಯ ಕಾಂಗ್ರೆಸ್ನಲ್ಲಿ ಹಲ್ಚಲ್ ಸೃಷ್ಟಿಸಿದೆ. ಮಾಜಿ ಸಚಿವೆ ಉಮಾಶ್ರೀ, ಸೀತಾರಾಮ್, ಸುಧಾಮ್ ದಾಸ್ ಹೆಸರು ಫೈನಲ್ ಆಗಿದ್ದು, ಪಕ್ಷದೊಳಗೆ ತೀವ್ರ ವಿರೋಧವಿದ್ದರೂ ಸಿಎಂ ಸಿದ್ದರಾಮಯ್ಯ ಮೂವರ ಪಟ್ಟಿಯನ್ನ ರಾಜಭವನಕ್ಕೆ ಪಟ್ಟಿ ರವಾನಿಸಿದ್ದಾರೆ.

ಸಮಾಜಸೇವೆ ಕೋಟಾದಡಿ ಸುಧಾಮ್ ದಾಸ್‌ಗೆ ಅವಕಾಶ ನೀಡಿದ್ದರೆ, ಶಿಕ್ಷಣ ಕ್ಷೇತ್ರದ ಕೋಟಾದಡಿ ಸೀತಾರಾಂಗೆ ಸ್ಥಾನ ಕಲ್ಪಿಸಲಾಗಿದೆ. ಆದ್ರೆ, ಇವರಿಬ್ಬರ ಆಯ್ಕೆಗೆ ಕಾಂಗ್ರೆಸ್ನಲ್ಲೆ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಇವರ ವಿರುದ್ಧ ದೂರು ಸಲ್ಲಿಕೆಯಾಗಿದೆ. ಹೀಗಾಗಿ ರಾಜ್ಯಪಾಲರಿಗೆ ತೃಪ್ತಿ ತರದಿದ್ದರೇ ಇಬ್ಬರ ಹೆಸರನ್ನ ತಡೆ ಹಿಡಿಯುವ ಸಾಧ್ಯತೆ ಎನ್ನಲಾಗಿದೆ.

ನಾಮ ನಿರ್ದೇಶನದ ಚೆಂಡು ಇದೀಗ ರಾಜ್ಯಪಾಲರ ಅಂಗಳ ತಲುಪಿದೆ. ಇನ್ನೂ ಸೀತಾರಾಂ, ಸುಧಾಮ್ ದಾಸ್ ವಿರುದ್ಧ ಈಗಾಗಲೇ ದೂರು ಸಲ್ಲಿಕೆಯಾಗಿದ್ದು, ಈ ಬಗ್ಗೆ ಸರ್ಕಾರದಿಂದ ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದಾರೆ. ಇಂದು(ಆಗಸ್ಟ್ 16) ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ರಾಜ್ಯಪಾಲರಿಗೆ ವಿವರಣೆ ನೀಡಲಿದ್ದು, ಈ ವಿವರಣೆ ರಾಜ್ಯಪಾಲರಿಗೆ ತೃಪ್ತಿ ತರದಿದ್ದರೇ ಇಬ್ಬರ ಹೆಸರನ್ನ ತಡೆ ಹಿಡಿಯುವ ಸಾಧ್ಯತೆ ಎನ್ನಲಾಗಿದೆ.

ಕಲಾವಿದರ ಕೋಟಾದ ಅಡಿಯಲ್ಲಿ ಉಮಾಶ್ರೀಗೆ ಸ್ಥಾನ ನೀಡಲಾಗಿದೆ. ಉಮಾಶ್ರೀಯವರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಬಾಗಲಕೋಟೆಯ ತೇರದಾಳ ಕ್ಷೇತ್ರದ ಮಾಜಿ ಶಾಸಕಿಯಾಗಿದ್ದು, 2013ರಿಂದ 2018ರಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು.

ಇನ್ನೂ ಶಿಕ್ಷಣ ಕ್ಷೇತ್ರದ ಕೋಟಾದಡಿ ಸೀತಾರಾಂಗೆ ಸ್ಥಾನ ನೀಡಲಾಗಿದೆ. ಇವರು MS ರಾಮಯ್ಯ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ನಿರ್ದೇಶಕರಾಗಿದ್ದು, ಸೀತಾರಾಂನವರು 2012ರಲ್ಲಿ ವಿಧಾನ ಪರಿಷತ್‌ಗೆ ನಾಮಾಂಕಿತರಾಗಿದ್ದು, 2013-2018ರಲ್ಲಿ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ಜಾರಿ ನಿರ್ದೇಶನಾಲದ ಮಾಜಿ ಅಧಿಕಾರಿ ಸುಧಾಮ್ ದಾಸ್‌ಗೆ ಸಮಾಜಸೇವೆ ಕೋಟಾದಡಿ ಅವಕಾಶ ನೀಡಲಾಗಿದೆ. ಸುಧಾಮ್ ದಾಸ್ ಅವರು ಮಾಜಿ ಶಾಸಕ ಹೆಚ್.ಪುಟ್ಟದಾಸ ಅವರ ಪುತ್ರರಾಗಿದ್ದಾರೆ. ಕೆಪಿಸಿಸಿ ಕಾರ್ಯದರ್ಶಿಯೂ ಆಗಿದ್ದ ಪುಟ್ಟದಾಸ, ಸಾತನೂರು ಕ್ಷೇತ್ರದಿಂದ 2 ಬಾರಿ ಶಾಸಕರಾಗಿದ್ದರು. ಇನ್ನೂ ಸುಧಾಮ್ ದಾಸ್ ಐದು ತಿಂಗಳ ಹಿಂದಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಸಿದ್ದರಾಮಯ್ಯ ಅವರು ಉಮಾಶ್ರೀ ಅವರನ್ನು ತಮ್ಮ ಕಡೆಯಿಂದ ಶಿಫಾರಸು ಮಾಡಿದ್ದರೆ ಇನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜಾರಿ ನಿರ್ದೇಶನಾಲದ ಮಾಜಿ ಅಧಿಕಾರಿ ಸುಧಾಮ್ ದಾಸ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಹೀಗೆ ಸಿಎಂ ಹಾಗೂ ಡಿಸಿಎಂ ತಮಗೆ ಬೇಕಾದ ಒಬ್ಬೊಬ್ಬರನ್ನು ನಾಮನಿರ್ದೇಶನ ಮಾಡಿದ್ದಾರೆ.

M.R.ಸೀತಾರಾಂ ಹಾಗೂ ಸುಧಾಮ ದಾಸ್ ಹೆಸರಿಗೆ ಹಲವು ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಐದು ತಿಂಗಳ ಹಿಂದಷ್ಟೇ ಪಕ್ಷ ಸೇರಿರುವ ಸುಧಾಮ ದಾಸ್ ಹೆಸರಿಗೆ ಪರಮೇಶ್ವರ್, ಹೆಚ್.ಸಿ. ಮಹದೇವಪ್ಪ, ಕೆ.ಹೆಚ್. ಮುನಿಯಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ M.R.ಸೀತಾರಾಂ ವಿರುದ್ಧ ಮನಿ ಲಾಂಡ್ರಿಂಗ್ ತನಿಖೆ ನಡೆಯುತ್ತಿದ್ದು, ಸೀತಾರಾಂ ಹೆಸರಿಗೆ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

Another Brawl Rises In Karnataka Congress As Minister Muniyappa Made 2.5 Year Prediction

ಇಂದು(ಆಗಸ್ಟ್ 16) ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ರಾಜ್ಯಪಾಲರಿಗೆ ವಿವರಣೆ ನೀಡಲಿದ್ದು, ಈ ವಿವರಣೆ ರಾಜ್ಯಪಾಲರಿಗೆ ತೃಪ್ತಿ ತರದಿದ್ದರೇ ಇಬ್ಬರ ಹೆಸರನ್ನ ತಡೆ ಹಿಡಿಯುವ ಸಾಧ್ಯತೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪರಿಷತ್ ನಾಮನಿರ್ದೇಶ ಏನಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.




