ಲೋಕಾಯುಕ್ತ ದಾಳಿ: ಕೇಜಿಗಟ್ಟಲೇ ಚಿನ್ನ-ಬೆಳ್ಳಿ, ಕಂತೆ-ಕಂತೆ ಹಣ, ಅಪಾರ ಪ್ರಮಾಣದ ಆಸ್ತಿ ಪತ್ತೆ
ಕರ್ನಾಟಕದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಅಧಿಕಾರಿಗಳ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಮತ್ತು ನಗದು ಪತ್ತೆಯಾಗಿದೆ.ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಅನೇಕ ಜಿಲ್ಲೆಗಳ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆದಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.
ರಾಜ್ಯಾದ್ಯಂತ ಲೋಕಾಯುಕ್ತ ದಾಳಿಯಲ್ಲಿ ಕಾಳಧನಿಕರ ಮನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ ಪತ್ತೆ
ಶಿವಮೊಗ್ಗದ ಅರ್ಗ್ಯಾನಿಕ್ ಫಾರ್ಮಿಂಗ್ ಸಹಾಯಕ ನಿರ್ದೇಶಕ ಪ್ರದೀಪ್, ಚಿಕ್ಕಮಗಳೂರು ನಗರಸಭೆ ಅಧಿಕಾರಿ ಲತಾಮಣಿ ಮನೆ ಮೇಲೆ ಸೇರಿದಂತೆ ಕರ್ನಾಟಕದ ವಿವಿಧ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಮುಂಜಾನೆಯೇ ದಾಳಿ ಮಾಡಿದ್ದರು. ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಅಪರಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿದೆ.
1 / 9
ಬೆಳಗಾವಿಯ ಮಲಪ್ರಭಾ ಯೋಜನೆಯ ಮುಖ್ಯ ಇಂಜಿನಿಯರ್ ಅಶೋಕ್ ವಾಲ್ಸಂದ್ ಅವರ ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಮನೆಯಲ್ಲಿ 92 ಲಕ್ಷ 70 ಸಾವಿರ ಮೌಲ್ಯದ 1 ಕೆಜಿ 80 ಗ್ರಾಂ ಚಿನ್ನ, 3 ಲಕ್ಷ 96 ಸಾವಿರ ಮೌಲ್ಯದ ಮೂರೂವರೆ ಕೆಜಿ ಬೆಳ್ಳಿ ಪತ್ತೆಯಾಗಿದೆ. ಜೊತೆಗೆ ಒಂದೂವರೆ ಲಕ್ಷ ನಗದು ಪತ್ತೆಯಾಗಿದೆ. ಅಪಾರ ಪ್ರಮಾಣದ ಆಸ್ತಿ ಪತ್ರಗಳು ಕೂಡ ಮನೆಯಲ್ಲಿ ಸಿಕ್ಕಿವೆ.
2 / 9
ಗದಗ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಡಿ.ಬಿ.ಪಾಟೀಲ್ಗೆ ಸಂಬಂಧಿಸಿದ
ಸ್ಥಿರಾಸ್ತಿ- 1,00,00,000 ರೂ.
ಚರಾಸ್ತಿ- 48,96,794 ರೂ.
ಒಟ್ಟು ಆಸ್ತಿ ಮೌಲ್ಯ- 1,48,96,794 ರೂ. ಇದೆ.
3 / 9
ಅನೇಕಲ್ ಪುರಸಭೆ ಮುಖ್ಯ ಅಧಿಕಾರಿ ಕೆ.ಜಿ.ಅಮರ್ ನಾಥ್ಗೆ ಸಂಬಂಧಿಸಿದ
ಸ್ಥಿರಾಸ್ತಿ- 2,80,91,000 ರೂ.
ಚರಾಸ್ತಿ- 1,04,75,000 ರೂ.
ಒಟ್ಟು ಆಸ್ತಿ ಮೌಲ್ಯ- 3,85,66,000 ರೂ. ಇದೆ.
4 / 9
ಕಲಬುರಗಿ ಪಂಚಾಯತ್ ರಾಜ್ ಇಲಾಖೆ ಇಇ ಮಲ್ಲಿಕಾರ್ಜುನ ಅಲ್ಲಿಪುರು ಅವರ ಬೆಂಗಳೂರಿನ ಮನೆಯಲ್ಲಿ 1 ಕೆಜಿ 330 ಗ್ರಾಂ ಚಿನ್ನಾಭರಣ, 6 ಕೆಜಿ ಬೆಳ್ಳಿ ವಸ್ತುಗಳು, ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿದೆ. ಇಬ್ಬರು ಮಕ್ಕಳ ಬ್ಯಾಂಕ್ ಅಕೌಂಟ್ನಲ್ಲಿ 40 ಲಕ್ಷ ಹಣ ಇದೆ. ಅಲ್ಲದೆ, ಬೆಂಗಳೂರಿನ ಯಲಹಂಕದಲ್ಲಿ 5 ಕೋಟಿ ರೂ. ಮೌಲ್ಯದ ಮನೆ ಇದೆ. ಒಟ್ಟು ಆಸ್ತಿ ಮೌಲ್ಯ- 6,32,55,000 ರೂ. ಇದೆ.
5 / 9
ಚಿಕ್ಕಮಗಳೂರು ನಗರಸಭೆ ಲೆಕ್ಕಾಧೀಕ್ಷಕಿ ಲತಾಮಣಿ, ಡಿ.ಬಿಗೆ ಸಂಬಂಧಿಸಿದ
ಸ್ಥಿರಾಸ್ತಿ-1,78,58,000 ರೂ.
ಚರಾಸ್ತಿ -1,11,01,000 ರೂ.
ಒಟ್ಟು ಆಸ್ತಿ ಮೌಲ್ಯ- 2,89,59,000 ರೂ. ಇದೆ.
6 / 9
ಧಾರವಾಡದ ಕ.ನೀ.ನಿ.ನಿ ಚೀಫ್ ಇಂಜಿನಿಯರ್ ಅಶೋಕ್ ಲಕ್ಷ್ಮಪ್ಪಗೆ ಸಂಬಂಧಿಸಿದ
ಸ್ಥಿರಾಸ್ತಿ- 3,15,37,977 ರೂ.
ಚರಾಸ್ತಿ- 2,95,68,303 ರೂ.
ಒಟ್ಟು ಆಸ್ತಿ ಮೌಲ್ಯ- 6,11,06,280 ರೂ. ಇದೆ
7 / 9
ಕಲಬುರಗಿ ಸಣ್ಣೂರು ಗ್ರಾ.ಪಂ ಪಿಡಿಒ ರಾಮಚಂದ್ರ ಮಸರಕಲ್ಗೆ ಸಂಬಂಧಿಸಿದ
ಸ್ಥಿರಾಸ್ತಿ-1,70,10,000 ರೂ.
ಚರಾಸ್ತಿ-48,45,000 ರೂ.
ಒಟ್ಟು ಆಸ್ತಿ ಮೌಲ್ಯ -2,18,55,000 ರೂ. ಇದೆ.
8 / 9
ಶಿವಮೊಗ್ಗ KSAHU ಪ್ರಾಧ್ಯಾಪಕ ಡಾ.ಪ್ರದೀಪ್ಗೆ ಸಂಬಂಧಿಸಿದ
ಸ್ಥಿರಾಸ್ತಿ-4,45,00,000 ರೂ.
ಚರಾಸ್ತಿ-1,89,10,000 ರೂ.
ಒಟ್ಟು ಆಸ್ತಿ ಮೌಲ್ಯ- 6,34,10,000 ರೂ. ಇದೆ.