- Kannada News Photo gallery Karnataka News in Kannada: Heavy rain in Vijayapura, Historic Mehetar Mahal collapsed due to lightning strike
ವಿಜಯಪುರದಲ್ಲಿ ಭಾರೀ ಮಳೆ: ಸಿಡಿಲಿನ ಹೊಡೆತಕ್ಕೆ ನೆಲಕ್ಕುರುಳಿದ ಐತಿಹಾಸಿಕ ಮೆಹೆತರ್ ಮಹಲ್
ರಣ ಬಿಸಿಲಿಗೆ ನಲುಗಿದ್ದ ಜನರಿಗೆ ವರುಣದೇವ ಕೃಪೆ ತೋರಿದ್ದು, ರಾಜ್ಯದ ಹಲವೆಡೆ ಮಳೆಯಾಗಿದೆ. ಅದರಂತೆ ವಿಜಯಪುರ ನಗರದಲ್ಲೂ ಭರ್ಜರಿ ಗುಡುಗು ಸಹಿತ ಮಳೆಯಾಗಿದೆ. ಈ ಹಿನ್ನಲೆ ನಗರದ ಜುಮ್ಮಾ ಮಸೀದ್ ರಸ್ತೆಯಲ್ಲಿರುವ ಐತಿಹಾಸಿಕ ಮೆಹೆತರ್ ಮಹಲ್‌ಗೆ ಸಿಡಿಲು ಬಡಿದು ಮಹಲ್‌ನ ಮಿನಾರ್ ನಿಂತಿದ್ದ ಕಾರಿನ ಮೇಲೆ ಬಿದ್ದಿದೆ. ಇದನ್ನು ಆದಿಲ್ ಶಾಹಿ ಕಾಲದಲ್ಲಿ ನಿರ್ಮಾಣ ಮಾಡಲಾಗಿತ್ತು.
Updated on: Apr 18, 2024 | 8:57 PM
Share

ಬಿಸಿಲಿನ ಬೇಗಗೆ ಬಳಲಿದ್ದ ಜನಕ್ಕೆ ವರುಣದೇವ ತಂಪರೆದಿದ್ದಾನೆ. ಹೌದು, ಕಳೆದ ಕೆಲ ದಿನಗಳಿಂದ ರಾಜ್ಯದ ಹಲವೆಡೆ ಮಳೆಯ ಸಿಂಚನ ಮೂಡಿದೆ.

ಇನ್ನು ವಿಜಯಪುರ ಜಿಲ್ಲೆಯಲ್ಲೂ ಇಂದು(ಏ.18) ಗಾಳಿ, ಗುಡುಗು, ಸಿಡಿಲು ಸಹಿತ ಭರ್ಜರಿ ಮಳೆಯಾಗಿದ್ದು, ಜನರಲ್ಲಿ ಮಂದಹಾಸ ಮೂಡಿದೆ.

ವಿಜಯಪುರ ಸೇರಿದಂತೆ ರಾಜ್ಯದ ಬಾಗಲಕೋಟೆ, ಹಾವೇರಿ, ಶಿವಮೊಗ್ಗ, ಗದಗ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದೆ.

ಇನ್ನು ವಿಜಯಪುರ ಜಿಲ್ಲೆಯ ಬಬಲೇಶ್ವರ ನಾಕಾ ರಸ್ತೆಯಲ್ಲಿ ಮಳೆಯ ಅಬ್ಬರಕ್ಕೆ ಬೃಹತ್ ಮರಗಳು ಧರೆಗುರುಳಿದಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ.

ಇತ್ತ ಸಿಡಿಲು ಬಡಿದು ವಿಜಯಪುರದ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಐತಿಹಾಸಿಕ ಮೆಹೆತರ್ ಮಹಲ್‌ಗೆ ಹಾನಿಯಾಗಿದೆ.

ಆದಿಲ್ ಶಾಹಿ ಕಾಲದಲ್ಲಿ ನಿರ್ಮಿಸಲಾಗಿದ್ದ ಈ ಐತಿಹಾಸಿಕ ಮೆಹೆತರ್ ಮಹಲ್‌ನ ಮಿನಾರ್‌ಗೆ ಬಡಿದಿರುವ ಸಿಡಿಲ ಹೊಡೆತಕ್ಕೆ ಮಿನಾರ್ ತುಂಡಾಗಿ ಮೆಹರತ್ ಮೆಹಲ್ ಬಳಿ ನಿಂತಿದ್ದ ಕಾರಿನ ಮೇಲೆ ಬಿದ್ದಿದೆ.
Related Photo Gallery
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್: ಟಾರ್ಗೆಟ್ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ



