Rain: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದುವರೆದ ಮಳೆ ಆರ್ಭಟ: ಧಾರಾಕಾರ ಮಳೆಗೆ ಜನರು ಸುಸ್ತೋ ಸುಸ್ತು

|

Updated on: Jun 08, 2024 | 9:46 PM

ಕರ್ನಾಟಕ ರಾಜ್ಯದಲ್ಲಿ ಇಂದು ವ್ಯಾಪಕ ಮಳೆಯಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ತಜ್ಞ ಸಿ.ಎಸ್.ಪಾಟೀಲ್‌ ಹೇಳಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೂನ್​​ 11ರವರೆಗೆ ಗುಡುಗು, ಮಿಂಚು, ಗಾಳಿ ಸಹಿತ ಮಳೆ ಆಗಲಿದೆ. ಹಾಗಾದ್ರೆ ಇಂದು ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಆಗಿದೆ ಇಲ್ಲಿದೆ ಮಾಹಿತಿ.

1 / 6

2 / 6
ಬೆಳಗಾವಿ ಜಿಲ್ಲೆಯಾದ್ಯಂತ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ನಗರದ ಗ್ಲೋಬ್ ಚಿತ್ರಮಂದಿರಕ್ಕೆ ಮಳೆ ನೀರು ನುಗ್ಗಿತ್ತು. ಚಿತ್ರಮಂದಿರದ ಟಿಕೆಟ್ ಕೌಂಟರ್, ಪಾರ್ಕಿಂಗ್ ಸ್ಥಳ ಜಲಾವೃತವಾಗಿತ್ತು. ಬೆಳಗಾವಿಯ ಖಾನಾಪುರ ರಸ್ತೆ ಮೇಲೆ 2 ಅಡಿಯಷ್ಟು ನೀರು ನಿಂತಿದ್ದರಿಂದ ಸಂಚಾರ ದಟ್ಟಣೆ, ಸವಾರರ ಪರದಾಡಿದ್ದಾರೆ. ವಿಜಯಪುರ, ಕಲಬುರಗಿಯಲ್ಲೂ ಇಂದು ಧಾರಾಕಾರ ಮಳೆ ಸುರಿದಿದೆ.

3 / 6
ಬೀದರ್ ಪಟ್ಟಣದಲ್ಲಿ ಅರ್ಧಗಂಟೆ ಭಾರೀ ಮಳೆ ಸುರಿದಿದೆ. ಮಳೆಯಿಂದಾಗಿ ರಸ್ತೆ ತುಂಬೆಲ್ಲ ನೀರು ತುಂಬಿಕೊಂಡಿದ್ದು ವಾಹನ ಸವಾರರು ಪರದಾಡಿದ್ದಾರೆ. ಇತ್ತ ತರಕಾರಿ ಅಂಗಡಿಗಳಿಗೆ ನುಗ್ಗಿದ ಮಳೆ ನೀರು ತರಕಾರಿ ನೀರು ಪಾಲಾಗಿದೆ. ಓಲ್ಡ್ ಆರ್​ಟಿಓ ಕಚೇರಿ ಬಳಿ ರಸ್ತೆಯಲ್ಲಿ ನೀರು ತುಂಬಿ ಹರಿದಿದೆ.

4 / 6
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಭಾರೀ ಮಳೆ ಅಬ್ಬರಿಸಿದೆ. ಕೇವಲ ಅರ್ಧ ಗಂಟೆ ಸುರಿದ ನಿರಂತರ ಮಳೆಗೆ ರಸ್ತೆ ಜಲಾವೃತವಾಗಿದ್ದು ಜನರು ಹಾಗೂ ವಾಹನ ಸವಾರರು ಪರದಾಡಿದ್ದಾರೆ.

5 / 6
ಮಂಗಳೂರು ನಗರ ಸೇರಿದಂತೆ ವಿವಿಧೆಡೆ ಭಾರೀ ಮಳೆ ಆರ್ಭಟಿಸಿದ್ದು, ನಗರ ಹೊರವಲಯದ ತೊಕ್ಕೊಟ್ಟು ಫ್ಲೈ ಓವರ್ ಕೆಳಭಾಗದ ರಸ್ತೆಗೆ ಮಳೆ ನೀರು ನುಗ್ಗಿದೆ. ಅವೈಜ್ಞಾನಿಕ ಚರಂಡಿಯಿಂದ ರಸ್ತೆಗೆ ನುಗ್ಗಿದ್ದು, ಅರ್ಧ ಗಂಟೆ ಸುರಿದ ಭಾರೀ‌ ಮಳೆಗೆ ರಸ್ತೆಗಳು ಹೊಳೆಯಂತಾಗಿದ್ದವು.

6 / 6
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದು ಭರ್ಜರಿ ಮಳೆ ಆಗಿದೆ. ಸುಮಾರು ಅರ್ಧಗಂಟೆ ಮಳೆ ಸುರಿದಿದೆ. ಪರಿಣಾಮ ಜನ ಜೀವನ ಅಸ್ತವ್ಯಸ್ತವಾಗಿದೆ. ಕಳೆದ ಕೆಲ ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಇಂದು ಮತ್ತೆ ಆಗಮಿಸುವ ಮೂಲಕ ವಾಣಿಜ್ಯ ನಗರಿ ಮಲೆನಾಡಿನಂತಾಗಿದೆ.