- Kannada News Photo gallery Karnataka Rain Updates Rain Effect in karnataka Falls Created Rain Water Enters House And Police Station Kannada News
ರಾಜ್ಯದಲ್ಲಿ ಮಳೆಯಿಂದಾಗಿ ಭಾರೀ ಅವಾಂತರ; ಮನೆ, ಠಾಣೆಗಳಿಗೆ ನುಗ್ಗಿದ ನೀರು, ಜಲ ಮೂಲಗಳಿಗೆ ಜೀವ ಕಳೆ
ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಮಳೆಯಿಂದಾಗಿ ನಾನಾ ಅವಾಂತರಗಳು ಸಂಭವಿಸಿವೆ. ಠಾಣೆಗೆ ನುಗ್ಗಿರುವ ನೀರು ಹೊರಹಾಕಲು ಪೊಲೀಸರ ಹರಸಾಹಸ. ಕೆರೆಯಂತಾದ ಬಸ್ ನಿಲ್ದಾಣ. ದೇವರಿಗೂ ಜಲದಿಗ್ಬಂಧನ. ಜನಸಾಮಾನ್ಯರಿಗೂ ಸಂಕಷ್ಟ. ಹೀಗೆ ರಾಜ್ಯದಲ್ಲಿ ಧೋ ಅಂತ ಸುರಿಯುತ್ತಿರುವ ಮಳೆಯಿಂದಾಗಿ ಶುರುವಾಗಿರುವ ಅವಾಂತರ ಒಂದೆರಡಲ್ಲ.
Updated on: Jun 08, 2024 | 7:11 AM

ಕೊಪ್ಪಳ ಜಿಲ್ಲೆಯಾದ್ಯಂತ ಮಳೆ ಆರ್ಭಟ ಅಷ್ಟಿಷ್ಟಿಲ್ಲ. ಗಂಗಾವತಿ ತಾಲೂಕಿನ ಬೈಪಾಸ್ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸವಾರರು ಹೈರಾಣಾಗಿ ಹೋದ್ರು. ಕುಷ್ಟಗಿ ತಾಲೂಕಿನ ಬೀಳಗಿಯಲ್ಲಿ ಜಲಪಾತ ಸೃಷ್ಟಿಯಾಗಿದೆ. ಎತ್ತರವಾದ ಗುಡ್ಡದಿಂದ ಜಲಧಾರೆ ಧುಮ್ಮುಕ್ಕುತ್ತಿದೆ. ಬೀಳಗಿಯ ಬಸವೇಶ್ವರ ದಿಡಿಗು ಎಂದು ಕರೆಯುವ ಜಲಪಾತ ಭಾರಿ ಮಳೆಯಾದಗೊಮ್ಮೆ ಕಾಣಿಸಿಕೊಳ್ಳುತ್ತದೆ. ರುದ್ರರಮನೀಯವಾಗಿರುವ ಜಲಪಾತ ನೋಡಿ ಜನ ಖುಷಿ ಪಟ್ಟಿದ್ದಾರೆ.

ಕಲಬುರಗಿಯಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬರಿಯುತ್ತಿದ್ದಾನೆ. ಮಳೆಯಿಂದಾಗಿ ಸೇಡಂ ಪೊಲೀಸ್ ಠಾಣೆಗೆ ನೀರು ನುಗ್ಗಿದ್ದು, ಸಿಬ್ಬಂದಿ ಹೈರಾಣಾಗಿ ಹೋಗಿದ್ರು. ನೀರು ಹೊರಹಾಕುವಷ್ಟರಲ್ಲಿ ಸಿಬ್ಬಂದಿಗೆ ಸಾಕಾಯ್ತು.

ಉತ್ತರ ಕನ್ನಡ ಜಿಲ್ಲೆಯಲ್ಲೂ ಭಾರಿ ಮಳೆಯಾಗುತ್ತಿದೆ. ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಗೋಕರ್ಣದ ಮಹಾಬಲೇಶ್ವರನಿಗೆ ಜಲದಿಗ್ಬಂಧನ ಬಿದ್ದಿದೆ. ದೇಗುಲದ ಆತ್ಮಲಿಂಗ ಮುಳುಗಿ ಹೋಗಿದ.

ವಿಜಯಪುರ ಜಿಲ್ಲೆಯಲ್ಲಿ ಸುರಿದ ಮಳೆಗೆ ಗೋಲಗೇರಿ ಗ್ರಾಮದಲ್ಲಿ 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿನ ವಸ್ತುಗಳು ನೀರುಪಾಲಾಗಿ ನಿವಾಸಿಗಳು ಪರದಾಟಡುವಂತಾಯ್ತು.

ಬಳ್ಳಾರಿಯಲ್ಲಿ ಮಳೆ ಅಬ್ಬರದಿಂದಾಗಿ ಕೌಲ್‌ಬಜಾರ್, ದೋಬಿಘಾಟ್‌ನ ತಗ್ಗು ಪ್ರದೇಶಗಳು ಜಲಾವೃತವಾಗಿದ್ವು. 50ಕ್ಕೂ ಹೆಚ್ಚು ಮನೆಗಳಿಗೆ ನೀರು ಆವರಿಸಿದ್ದು, ನಿವಾಸಿಗಳಗು ಗೋಳಾಡಿದ್ರು. ಮತ್ತೊಂದು ಕಡೆ ಹಳೇ ತಹಶೀಲ್ದಾರ್ ಕಚೇರಿ ಬಳಿ ಹಲವು ಬೈಕ್‌ಗಳು ಮುಳುಗಿ ಹೋಗಿದ್ವು. ವ್ಯಾಪಾರಕ್ಕೆ ತಂದಿದ್ದ ಹಣ್ಣು ತರಕಾರಿಗಳು ನೀರಿನಲ್ಲಿ ತೇಲಿ ಹೋದ್ವು.

ಯಾದಗಿರಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಮಳೆಯಾಗ್ತಿದ್ದು, ಬಿರುನೂರ್ ಗ್ರಾಮದಲ್ಲಿ ರಸ್ತೆಗಳು ಜಲಾವೃತವಾಗಿದ್ವು. ಹಾವೇರಿಯ ಎಸ್ಪಿ ಕಚೇರಿ, ಐಬಿ ಮುಂಭಾಗದ ರಸ್ತೆಗೆ ಮಳೆ ನೀರಿನ ಜತೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಯ್ತು.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಕಾಲಕಾಲೇಶ್ವರ ಗುಡ್ಡದಲ್ಲಿ ಕಿರು ಜಲಪಾತಗಳು ಪ್ರವಾಸಿಗರನ್ನು ಸಳೆಯುತ್ತಿವೆ.




