ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾರುತಿ ಗಲ್ಲಿಯಲ್ಲಿ ನಡೆಯುವ ಮಾರುತಿ ದೇವರ ಜಾತ್ರೆ ತನ್ನದೇ ಆದ ವಿಶೇಷತೆಗಳಿಂದ ಪ್ರಸಿದ್ಧಿ ಪಡೆದಿದೆ.
ಜಾತ್ರೆ ಎಂದಾಕ್ಷಣ ತೇರು ಎಳೆಯುವುದು, ಮೆರವಣಿಗೆ ಎಲ್ಲಾ ಇರುತ್ತೆ ಆದ್ರೆ ಈ ಜಾತ್ರೆ ರಂಗೋಲಿ ಮೂಲಕವೇ ಪ್ರಸಿದ್ಧಿ ಪಡೆದಿದ್ದು ತರಹೇವಾರು ರಂಗೂಲಿ ಬಣ್ಣಗಳಿಂದ ಜನರನ್ನ ತನ್ನತ್ತ ಸೆಳೆಯುತ್ತಿದೆ.
ಕಾರವಾರದಲ್ಲೊಂದು ಅಪರೂಪದ ರಂಗೋಲಿ ಜಾತ್ರೆ.
ರಂಗೋಲಿ ಮೂಲಕವೇ ವಿಶಿಷ್ಟವಾಗಿ ಆಚರಣೆ ಮಾಡುವ ಮಾರುತಿ ದೇವರ ರಂಗೋಲಿ ಜಾತ್ರೆ ರಂಗೋಲಿ ಮೂಲಕವೇ ಜನರನ್ನ ತನ್ನತ್ತ ಸೆಳೆಯುತಿದ್ದು ನೋಡುಗರನ್ನ ಮಂತ್ರ ಮುಗ್ದರನ್ನಾಗಿಸುತ್ತಿದೆ
ರಂಗೋಲಿ ಎಂದರೇ ಮಹಿಳೆಯರಿಗೆ ಪಂಚಪ್ರಾಣ. ಆದ್ರೆ ಕಾರವಾರದಲ್ಲಿರುವ ಮಾರುತಿ ದೇವರಿಗೆ ರಂಗೋಲಿಯೇ ಪ್ರಿಯ.
ರಂಗೋಲಿಯಲ್ಲಿ ಅರಳಿದ ವಿವಿಧ ಚಿತ್ತಾರಗಳು. ಮತ್ತೊಂದೆಡೆ ರಂಗೋಲಿಯಲ್ಲಿ ಅರಳಿದ ಚಿತ್ತಾರವನ್ನು ತಮ್ಮ ಮೊಬೈಲ್ ಮೂಲಕ ಸೆರೆಹಿಡಿಯುತ್ತಿರುವ ಜನರು.
ಪ್ರತಿ ವರ್ಷ ಡಿಸೆಂಬರ್ ನಲ್ಲಿ ಕಾರವಾರ ನಗರದ ಮಾರುತಿ ದೇವರ ಜಾತ್ರೆ ನಡೆಯುತ್ತದೆ.
ಪುಷ್ಪಾ ಸಿನಿಮಾದ ಅಲ್ಲು ಅರ್ಜುನ್ ರಂಗೋಲಿ
ಎಲ್ಲಾ ಜಾತ್ರೆಗಳು ಬೆಳಗ್ಗೆ ಪ್ರಾರಂಭವಾದ್ರೆ ಈ ಜಾತ್ರೆ ಸೂರ್ಯಾಸ್ತದ ನಂತರ ಪ್ರಾರಂಭವಾಗುತ್ತದೆ.
ರಂಗೋಲಿಯಲ್ಲಿ ಅರಳಿದ ಪುನೀತ್ ರಾಜ್ ಕುಮಾರ್, ಕಾಂತಾರ ಸಿನಿಮಾ ದೃಶ್ಯಗಳು.
ಕೆಜಿಎಫ್ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್
ಈ ಬಾರಿ ಕಾಂತಾರ ಸಿನಿಮಾದ ದೃಶ್ಯಗಳು, ಪುನಿತ್ ರಾಜ್ ಕುಮಾರ್ ಭಾವಚಿತ್ರಗಳು, ರಾಷ್ಟ್ರಪತಿ ದ್ರೌಪದಿ ಮುರ್ಮು ಚಿತ್ರಗಳು ಜನರನ್ನು ನಿಬ್ಬೆರಗುಗೊಳಿಸಿತು.
ಇಡೀ ಗಲ್ಲಿಯೇ ರಂಗೋಲಿಯಿಂದ ಅಲಂಕೃತ.
ದೇವರ ಉತ್ಸವ ಮೂರ್ತಿ ಮೆರವಣಿಗೆ ಹೋಗುವ ಸಂದರ್ಭದಲ್ಲಿ ಸ್ವಾಗತಕ್ಕಾಗಿ ರಂಗೋಲಿ ಹಾಕುವ ಈ ಪರಂಪರೆ 80 ವರ್ಷಕ್ಕೂ ಹೆಚ್ಚು ಹಳೆಯದು.
ರಂಗೋಲಿ ಮೂಲಕವೇ ವಿಶಿಷ್ಟವಾಗಿ ಆಚರಣೆ ಮಾಡುವ ಮಾರುತಿ ದೇವರ ರಂಗೋಲಿ ಜಾತ್ರೆ ರಂಗೋಲಿ ಮೂಲಕವೇ ಜನರನ್ನ ತನ್ನತ್ತ ಸೆಳೆಯುತಿದ್ದು ನೋಡುಗರನ್ನ ಮಂತ್ರ ಮುಗ್ದರನ್ನಾಗಿಸುತ್ತಿದೆ (ವರದಿ: ವಿನಾಯಕ ಬಡಿಗೇರ, ಟಿವಿ 9, ಕಾರವಾರ)
ಇದೀಗ ಕಾಲ ಬದಲಾದಂತೆ ರಂಗೋಲಿಯ ಚಿತ್ತಾರದ ಸೊಬಗೂ ಬದಲಾಗಿದ್ದು ರಂಗೋಲಿ ಮೂಲಕ ತಮಗೆ ಇಷ್ಟವಾದ ನಟರು, ಕಲಾವಿದರು, ರಾಜಕಾರಿಣಿಗಳ ಭಾವಚಿತ್ರಗಳು ರಂಗೋಲಿ ಮೂಲಕ ಜೀವ ಕಳೆ ಕಟ್ಟುತ್ತಿದೆ.
ಮಹಿಳೆಯರು, ಪುರುಷರೆನ್ನದೇ ಈ ರಂಗೋಲಿ ಜಾತ್ರೆಗೆ ಸೆಳೆಯುತ್ತಿದೆ.
ಎರಡು ದಿನ ನಡೆಯುವ ಈ ಜಾತ್ರೆಗೆ ಕೇವಲ ಕಾರವಾರದ ಜನರು ಮಾತ್ರವಲ್ಲದೇ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಸಹ ರಂಗೋಲಿ ಚಿತ್ರ ವೀಕ್ಷಣೆಗೆ ಜನ ಮುಗಿಬಿದ್ದಿದ್ದರು.
ಮಾರುತಿ ದೇವರ ಜಾತ್ರೆ ರಂಗೋಲಿ ಜಾತ್ರೆ ಎಂದೇ ಪ್ರಸಿದ್ಧಿ.
ಈ ಜಾತ್ರೆಯಲ್ಲಿ ಸುಮಾರು 400ಕ್ಕೂ ಹೆಚ್ಚು ವಿವಿಧ ರಂಗೋಲಿ ಚಿತ್ರಗಳು ಮಾರುತಿ ಗಲ್ಲಿಯ ರಸ್ತೆಯನ್ನು ಅಲಂಕರಿಸಿದ್ದವು.
ರಂಗೋಲಿಯಲ್ಲಿ ಅರಳಿದ ಪುನೀತ್ ರಾಜ್ ಕುಮಾರ್, ಕಾಂತಾರ ಸಿನಿಮಾ ದೃಶ್ಯಗಳು.
ರಂಗೋಲಿಯಲ್ಲಿ ಅರಳಿದ ಪುನೀತ್ ರಾಜ್ ಕುಮಾರ್, ಕಾಂತಾರ ಸಿನಿಮಾ ದೃಶ್ಯಗಳು.
ಅಪ್ಪು, ರಿಷಬ್, ದ್ರೌಪದಿ ಮುರ್ಮು ಅವರನ್ನ ನೋಡಲು ಮುಗಿಬಿದ್ದ ಜನರು.
ಅಪ್ಪು, ರಿಷಬ್, ದ್ರೌಪದಿ ಮುರ್ಮು ಅವರನ್ನ ನೋಡಲು ಮುಗಿಬಿದ್ದ ಜನರು.
ಕೇವಲ ರಂಗೋಲಿಯಲ್ಲಲ್ಲದೇ ತರಕಾರಿ, ಹೂವು, ಹಣ್ಣು ಹೀಗೆ ಹಲವು ವಸ್ತುಗಳಿಂದಲೂ ಸಹ ರಂಗೋಲಿ ಮೂಡಿಬಂದಿತ್ತು.
ಸ್ಥಳೀಯರಷ್ಟೇ ಅಲ್ಲ; ಗೋವಾ, ಮಹಾರಾಷ್ಟ್ರದ ರಂಗೋಲಿ ಕಲಾವಿದರು ರಂಗೋಲಿಗೆ ಜೀವ ತುಂಬಿದ್ದಾರೆ.
Published On - 1:48 pm, Fri, 23 December 22