
ನಟಿ ಕವಿತಾ ಗೌಡ ಅವರು ಈಗ ತುಂಬು ಗರ್ಭಿಣಿ. ಅವರ ಸೀಮಂತ ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅವರಿಗೆ ಶುಭಾಶಯ ಕೋರಲಾಗುತ್ತಿದೆ.

ಚಂದನ್ ಗೌಡ ಅವರು ಕವಿತಾ ಗೌಡ ಅವರ ಸೀಮಂತ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ಮಾಡಿ ಮುಗಿಸಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ. ಚಂದನ್ ಕುಮಾರ್ ಅವರು ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕವಿತಾ ಗೌಡ ಅವರು ಕಿರುತೆರೆಯಲ್ಲಿ ಮಿಂಚಿದವರು. ಅವರು ಚಂದನ್ ಜೊತೆ ‘ಲಕ್ಷ್ಮೀಬಾರಮ್ಮ’ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿ ಎಲ್ಲರಿಂದ ಮೆಚ್ಚುಗೆ ಪಡೆಯಿತು. ಆ ಬಳಿಕ ಕವಿತಾ ಸಿನಿಮಾಗಳಲ್ಲೂ ನಟಿಸಿದ್ದರು.

ಕವಿತಾ ಗೌಡ ಹೊಟ್ಟೆಗೆ ಚಂದನ್ ಮುತ್ತು ಕೊಟ್ಟಿದ್ದಾರೆ. ಶೀಘ್ರವೇ ಕವಿತಾ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಕ್ಷಣಕ್ಕಾಗಿ ಅವರ ಕುಟುಂಬ ಹಾಗೂ ಫ್ಯಾನ್ಸ್ ಕಾಯುತ್ತಾ ಇದ್ದಾರೆ.

ಕವಿತಾ ಗೌಡ ಅವರು ಸದ್ಯ ನಟನೆಯಿಂದ ದೂರ ಇದ್ದಾರೆ. ಅವರು ತಮ್ಮದೇ ಹೋಟೆಲ್ ಉದ್ಯಮ ಆರಂಭಿಸಿದ್ದಾರೆ. ಇದರಿಂದ ಅವರು ಹಣ ಗಳಿಕೆ ಮಾಡುತ್ತಾ ಇದ್ದಾರೆ.