ಕ್ಯಾರೆಟ್ ಚಿನ್ನವು 1/24 ಪ್ರತಿಶತ ಚಿನ್ನವಾಗಿರುತ್ತದೆ. ನಿಮ್ಮ ಆಭರಣವು 22 ಕ್ಯಾರೆಟ್ ಆಗಿದ್ದರೆ,
22 ಅನ್ನು 24 ರಿಂದ ಭಾಗಿಸಿ ಮತ್ತು 100 ರಿಂದ ಗುಣಿಸಿ. (22/24)x100= 91.66
ಎಂದರೆ ನಿಮ್ಮ ಆಭರಣದಲ್ಲಿ ಬಳಸಿದ ಚಿನ್ನದ ಶುದ್ಧತೆ 91.66%.
ಉದಾ: ಟಿವಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 27000 ರೂ. ಆಗಿದ್ದರೆ, ನೀವು ಅದನ್ನು
ಮಾರುಕಟ್ಟೆಯಲ್ಲಿ ಖರೀದಿಸಲು ಹೋದರೆ, ಆಗ 22 ಕ್ಯಾರೆಟ್ ಚಿನ್ನದ ಬೆಲೆ
(27000/24)x22=24750 ರೂ. ಒಬ್ಬ ಆಭರಣ ವ್ಯಾಪಾರಿ
ನಿಮಗೆ 22 ಕ್ಯಾರೆಟ್ ಚಿನ್ನವನ್ನು 27000 ರೂ.ಗೆ ನೀಡುತ್ತಾನೆ. ಹಾಗಾದ್ರೆ ನೀವು 24 ಕ್ಯಾರೆಟ್
ಚಿನ್ನದ ಬೆಲೆಯಲ್ಲಿ 22 ಕ್ಯಾರೆಟ್ ಚಿನ್ನವನ್ನು ಖರೀದಿಸುತ್ತಿದ್ದೀರಿ ಎಂದರ್ಥ. ಗ್ರಾಹಕರು ಹೆಚ್ಚಾಗಿ
ಮೋಸ ಹೋಗುವುದು ಕೂಡ ಹೀಗೆ.