
ನಟಿ ಕೀರ್ತಿ ಸುರೇಶ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರ ಬಾಯ್ಫ್ರೆಂಡ್ ಯಾರು ಎಂಬ ಕುತೂಹಲ ಅನೇಕರಿಗೆ ಇತ್ತು. ಇದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಕೀರ್ತಿ ಸುರೇಶ್ ಹೊಸ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ.

ಕೀರ್ತಿ ಹಾಗೂ ಮತ್ತೋರ್ವ ವ್ಯಕ್ತಿ ನಿಂತಿರುವ ಫೋಟೋನ ಹಂಚಿಕೊಳ್ಳಲಾಗಿದೆ. ಈ ಫೋಟೋದಲ್ಲಿ ಇರುವ ವ್ಯಕ್ತಿ ಆ್ಯಂಟನಿ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇವರು ಶೀಘ್ರವೇ ವಿವಾಹ ಆಗುತ್ತಾರೆ ಎನ್ನಲಾಗಿದೆ.

ಸದ್ಯ ಕೀರ್ತಿ ಸುರೇಶ್ ಅವರು ಈ ಫೋಟೋಗೆ, ‘ಹದಿನೈದು ವರ್ಷ ಹಾಗೂ ಇನ್ನೂ ಲೆಕ್ಕ ಹಾಕಲಾಗುತ್ತಿದೆ. AntoNY x Keerthy ಎಂದು ಬರೆಯಲಾಗಿದೆ. ಈ ಮೂಲಕ ಮದುವೆ ಸುದ್ದಿಗೆ ಪುಷ್ಟಿ ನೀಡಲಾಗಿದೆ.

ಕೀರ್ತಿ ಹಾಗೂ ಆ್ಯಂಟೋನಿ ಬಾಲ್ಯದ ಗೆಳೆಯರು. 16ನೇ ವಯಸ್ಸಿನಲ್ಲಿ ಕೀರ್ತಿಗೆ ಆ್ಯಂಟೋನಿ ಪರಿಚಯ ಆಯಿತು. ಆ ಗೆಳೆತನ ನಂತರ ಪ್ರೀತಿಗೆ ತಿರುಗಿದೆ. ಈ ವಿಚಾರವನ್ನು ಕೀರ್ತಿ ಅವರೇ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.

ಆ್ಯಂಟೋನಿ ಅವರು ವೃತ್ತಿಯಲ್ಲಿ ಇಂಜಿನಿಯರ್. ಅವರು ಖತಾರ್ನಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಕೊಚ್ಚಿಯಲ್ಲಿ ಇದ್ದಾರೆ. ಅವರು ತಮ್ಮದೇ ಉದ್ಯಮ ಹೊಂದಿದ್ದಾರೆ. ಅವರು ವೈದ್ಯಕೀಯ ಕ್ಷೇತ್ರದಲ್ಲೂ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.
Published On - 12:35 pm, Wed, 27 November 24