ಮತ್ತೊಮ್ಮೆ ಮದುವೆಯಾದರೆ ಸಿದ್ಧಾರ್ಥ್-ಅದಿತಿ: ಇಲ್ಲಿವೆ ಚಿತ್ರಗಳು
Siddharth and Aditi Rao Hydari: ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ಸೆಪ್ಟೆಂಬರ್ ತಿಂಗಳಲ್ಲಿ ತೆಲಂಗಾಣದ ಪುರಾತನ ದೇವಾಲಯದಲ್ಲಿ ವಿವಾಹವಾದರು. ಇಬ್ಬರು ಇದೀಗ ಫೋಟೊಶೂಟ್ ಮಾಡಿಸಿಕೊಂಡಿದ್ದು ಇಲ್ಲಿವೆ ಚಿತ್ರಗಳು.
Updated on:Nov 27, 2024 | 1:08 PM

ನಟ ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದು ಸೆಪ್ಟೆಂಬರ್ ತಿಂಗಳಲ್ಲಿ ತೆಲಂಗಾಣದ ಪುರಾತನ ದೇವಾಲಯದಲ್ಲಿ ಮದುವೆಯಾಗಿದ್ದಾರೆ.

ಬಳಿಕ ರಾಜಸ್ಥಾನದ ಬಿಷನ್ಘಡದ ಅಲಿಲಾ ಅರಮನೆಯಲ್ಲಿ ಈ ಜೋಡಿ ಮದುವೆಯ ಫೋಟೊಶೂಟ್ ಮಾಡಿಸಿದೆ. ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ತೆಲಂಗಾಣದ ವಾನಪರ್ತಿಯ 400 ವರ್ಷ ಪುರಾತನ ದೇವಾಲಯದಲ್ಲಿ ಅದಿತಿ ಹಾಗೂ ಸಿದ್ಧಾರ್ಥ್ ಕೆಲ ದಿನಗಳ ಹಿಂದೆ ವಿವಾಹವಾಗಿದ್ದರು. ಆ ದೇವಾಲಯವನ್ನು ಅದಿತಿ ರಾವ್ ಹೈದರಿ ಅವರ ಕುಟುಂಬದವರೇ ನಿರ್ಮಿಸಿದ್ದಂತೆ.

ಅದಿತಿ ರಾವ್ ಹೈದರಿ ಹಾಗೂ ನಟ ಸಿದ್ಧಾರ್ಥ್ ಇಬ್ಬರಿಗೂ ಇದು ಎರಡನೇ ಮದುವೆ. ನಟ ಸಿದ್ಧಾರ್ಥ್ ಹೆಸರು ಕೆಲ ಬೇರೆ ನಟಿಯರೊಟ್ಟಿಗೆ ಕೇಳಿ ಬಂದಿತ್ತು. ಸಮಂತಾ ಜೊತೆಗೂ ಸಹ ಕೇಳಿ ಬಂದಿತ್ತು. ಆದರೆ ಕೊನೆಗೆ ಇದೀಗ ಅದಿತಿಯನ್ನು ಸಿದ್ಧಾರ್ಥ್ ವಿವಾಹವಾಗಿದ್ದಾರೆ.

ಅದಿತಿ ರಾವ್ ಹೈದರಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಮುಂಚೆಯೇ ಮದುವೆಯಾಗಿದ್ದರು. ಆದರೆ ಮದುವೆಯನ್ನು ಗೌಪ್ಯವಾಗಿ ಇಟ್ಟಿದ್ದರು. ಆದರೆ ಇಬ್ಬರೂ ಪರಸ್ಪರ ವಿಚ್ಛೇದನ ಪಡೆದುಕೊಂಡರು.

ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಕಳೆದ ಕೆಲ ವರ್ಷಗಳಿಂದಲೂ ಒಟ್ಟಿಗೆ ಇದ್ದರು. ‘ಮಹಾಸಮುದ್ರಂ’ ಸಿನಿಮಾನಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆಗಿನಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು.
Published On - 1:07 pm, Wed, 27 November 24

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More




