- Kannada News Photo gallery Cricket photos IPL 2025: Rishabh pant, Shreyas Iyer won't get full salary
IPL 2025: 27 ಕೋಟಿಗೆ ಹರಾಜಾದರೂ ಸಂಪೂರ್ಣ ಹಣ ಸಿಗಲ್ಲ..!
IPL 2025: ಐಪಿಎಲ್ನಲ್ಲಿ ದುಬಾರಿ ಮೊತ್ತ ಪಡೆದಿರುವ ಆಟಗಾರರಿಗೆ ಫ್ರಾಂಚೈಸಿಗಳು ಸಂಪೂರ್ಣ ಹಣ ನೀಡುವುದಿಲ್ಲ. ಬದಲಾಗಿ ಆದಾಯ ತೆರಿಗೆಯನ್ನು ಕಡಿತಗೊಳಿಸಿ ಉಳಿದ ಮೊತ್ತ ಪಾವತಿಸಲಿದೆ. ಇದರಿಂದ ಕೋಟಿ ಕೋಟಿಗೆ ಬಿಕರಿಯಾದ ಆಟಗಾರರ ಸಂಭಾವನೆಯಲ್ಲಿ ಭಾರೀ ಕಡಿತವಾಗಲಿದೆ.
Updated on: Nov 27, 2024 | 2:20 PM

ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರರೆಂದರೆ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್. ಈ ಬಾರಿಯ ಮೆಗಾ ಹರಾಜಿನ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಫ್ರಾಚೈಸಿ ಪಂತ್ ಅವರನ್ನು ಬರೋಬ್ಬರಿ 27 ಕೋಟಿ ರೂ.ಗೆ ಖರೀದಿಸಿದೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಶ್ರೇಯಸ್ ಅಯ್ಯರ್ಗೆ 26.75 ಕೋಟಿ ರೂ. ನೀಡಿದೆ.

ಹೀಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇಬ್ಬರು ಮಾಜಿ ನಾಯಕರುಗಳು ಒಟ್ಟು 53.75 ಕೋಟಿ ರೂ. ಪಡೆದಿದ್ದಾರೆ. ಆದರೆ ಈ ಮೊತ್ತವು ಸಂಪೂರ್ಣವಾಗಿ ಇಬ್ಬರ ಕೈ ಸೇರಲ್ಲ ಎಂಬುದು ವಿಶೇಷ. ಅಂದರೆ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ಗೆ ಸಿಕ್ಕಿರುವ ಒಟ್ಟು ಮೊತ್ತದಿಂದ ಕನಿಷ್ಠ 8 ಕೋಟಿ ರೂ. ಕಡಿತವಾಗಲಿದೆ.

ಏಕೆಂದರೆ ಹರಾಜು ಮೊತ್ತದಿಂದ ಆದಾಯ ತೆರಿಗೆಯನ್ನು ಕಡಿತ ಮಾಡಲಾಗುತ್ತದೆ. ಪ್ರಸ್ತುತ ಆದಾಯ ತೆರಿಗೆ ಕಾಯಿದೆಯಡಿ ಶೇಕಡಾ 30ರಷ್ಟು ಟ್ಯಾಕ್ಸ್ ನೀಡಬೇಕಾಗುತ್ತದೆ. ಈ ನಿಯಮವು ಐಪಿಎಲ್ನ ಎಲ್ಲಾ ಆಟಗಾರರ ಹರಾಜು ಮೊತ್ತಕ್ಕೂ ಅನ್ವಯವಾಗಲಿದೆ.

ಅದರಂತೆ ಇಲ್ಲಿ ರಿಷಭ್ ಪಂತ್ ಅವರ 27 ಕೋಟಿ ರೂ.ನಿಂದ ಶೇ.30 ರಷ್ಟು ತೆರಿಗೆ ಕಡಿತಗೊಳಿಸಿದರೆ ಅವರಿಗೆ ಸಿಗುವ ಮೊತ್ತ 18.90 ಕೋಟಿ ರೂ. ಮಾತ್ರ. ಹಾಗೆಯೇ ತೆರಿಗೆಯ ಕಡಿತದ ಬಳಿಕ ಶ್ರೇಯಸ್ ಅಯ್ಯರ್ ಪಡೆಯಲಿರುವ ಮೊತ್ತ 18.72 ಕೋಟಿ ರೂ. ಮಾತ್ರ.

ಇನ್ನು ಆರ್ಸಿಬಿ ಫ್ರಾಂಚೈಸಿಯಿಂದ 21 ಕೋಟಿ ರೂ. ಪಡೆದಿರುವ ವಿರಾಟ್ ಕೊಹ್ಲಿಗೆ ಸಿಗಲಿರುವುದು ಕೇವಲ 14.70 ಕೋಟಿ ರೂ. ಅಂದರೆ ಪ್ರತಿ ಆಟಗಾರರು ತಮಗೆ ಸಿಕ್ಕಿರುವ ಒಟ್ಟು ಬಿಡ್ಡಿಂಗ್ ಮೊತ್ತದಿಂದ ಶೇ.30 ರಷ್ಟು ತೆರಿಗೆ ಕಟ್ಟುವುದು ಕಡ್ಡಾಯವಾಗಿದೆ. ಹೀಗಾಗಿ ಕೋಟಿ ಎನಿಸಿಕೊಂಡಿರುವ ಆಟಗಾರರು ಕೋಟಿ ಲೆಕ್ಕದಲ್ಲೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದರಿಂದ ಕೆಲ ಆಟಗಾರರ ಬೃಹತ್ ಮೊತ್ತದ ಸಂಭಾವನೆಗೆ ಕತ್ತರಿ ಬೀಳಲಿದೆ.
