
ಬಹುಭಾಷಾ ನಟಿ ಕೀರ್ತಿ ಸುರೇಶ್ ಬಾಲನಟಿಯಾಗಿ ಮೊದಲು ಗುರುತಿಸಿಕೊಂಡವರು. ಈಗ ಟಾಲಿವುಡ್ನ ಬಹುಬೇಡಿಕೆಯ ನಟಿಯಾಗಿದ್ದಾರೆ.

ಸ್ಟಾರ್ ಚಿತ್ರಗಳಿಗೆ ನಾಯಕಿಯಾಗುವ ಕೀರ್ತಿ, ಮಹಿಳಾ ಪ್ರಧಾನ ಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲೂ ಆಕ್ಟಿವ್ ಆಗಿರುವ ಕೀರ್ತಿ, ಇತ್ತೀಚೆಗೆ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ವಿಶೇಷ ವಿನ್ಯಾಸದ ಸೀರೆಯಲ್ಲಿ ಮಿಂಚುತ್ತಿರುವ ಕೀರ್ತಿ ಸುರೇಶ್ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸದ್ಯ ಕೀರ್ತಿ ಸುರೇಶ್ ಫೋಟೋಗಳು ವೈರಲ್ ಆಗಿದ್ದು, ಫ್ಯಾಶನ್ ಪ್ರಿಯರು ನಟಿಯ ವಸ್ತ್ರ ವಿನ್ಯಾಸವನ್ನು ಹೊಗಳಿದ್ದಾರೆ.

ಚಿತ್ರಗಳ ವಿಷಯಕ್ಕೆ ಬಂದರೆ ಕೀರ್ತಿ ಸುರೇಶ್ ಬತ್ತಳಿಕೆಯಲ್ಲಿ ಬರೋಬ್ಬರಿ 6 ಚಿತ್ರಗಳಿವೆ.

ಈ ಪೈಕಿ‘ಸರ್ಕಾರು ವಾರಿ ಪಾಟ’ ಚಿತ್ರ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿದ್ದು, ಮಹೇಶ್ ಬಾಬುಗೆ ನಾಯಕಿಯಾಗಿ ಕೀರ್ತಿ ಕಾಣಿಸಿಕೊಂಡಿದ್ದಾರೆ. ಇದೇ ವರ್ಷ ಚಿತ್ರ ತೆರೆಕಾಣುವ ನಿರೀಕ್ಷೆ ಇದೆ.