
‘ಕೆಜಿಎಫ್ ಚಾಪ್ಟರ್ 2’ ಮೂಲಕ ಅಪಾರ ಖ್ಯಾತಿ ಗಳಿಸಿದ್ದಾರೆ ಸ್ಯಾಂಡಲ್ವುಡ್ ನಟಿ ಶ್ರೀನಿಧಿ ಶೆಟ್ಟಿ.

ಇದೀಗ ನಟಿಗೆ ಹಲವು ಭಾಷೆಗಳಲ್ಲಿ ಸ್ಟಾರ್ ನಟರೊಂದಿಗೆ ಬಣ್ಣಹಚ್ಚುವ ಆಫರ್ಗಳು ಬರುತ್ತಿವೆ ಎಂದಿವೆ ವರದಿಗಳು.

ಶ್ರೀನಿಧಿ ಶೆಟ್ಟಿ ಮುಂದಿನ ಚಿತ್ರ ‘ಕೋಬ್ರಾ’. ವಿಕ್ರಮ್ ನಟನೆಯ ಈ ಚಿತ್ರಕ್ಕೆ ನಾಯಕಿಯಾಗಿರುವ ಶ್ರೀನಿಧಿ ಕಾಲಿವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲೂ ‘ಕೆಜಿಎಫ್ ಚಾಪ್ಟರ್ 2’ ಬೆಡಗಿ ಸಖತ್ ಆಕ್ಟಿವ್.

ಆಗಾಗ ಹೊಸ ಫೋಟೋಶೂಟ್ ಮಾಡಿಸಿಕೊಳ್ಳುವ ನಟಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.

ಇತ್ತೀಚೆಗೆ ಹೊಸ ಫೋಟೋಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ ಶ್ರೀನಿಧಿ.

ಸಿಂಪಲ್ ಗೆಟಪ್ನಲ್ಲೇ ಅಭಿಮಾನಿಗಳ ಮನಗೆದ್ದ ನಟಿ.

‘ಕೆಜಿಎಫ್’ ಯಶಸ್ಸಿನಿಂದ ಶ್ರೀನಿಧಿ ಶೆಟ್ಟಿ ಅಭಿಮಾನಿಗಳ ಸಂಖ್ಯೆ ಏರಿಕೆಯಾಗುತ್ತಿದೆ.

ಇದೀಗ ನಟಿಯ ಸಿಂಪಲ್ ಲುಕ್ಗೆ ಫಿದಾ ಆದ ಫ್ಯಾನ್ಸ್.

ಶ್ರೀನಿಧಿ ಶೆಟ್ಟಿ ಹೊಸ ಫೋಟೋಗಳು ವೈರಲ್ ಆಗಿವೆ.