
ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ‘ತೂಫಾನ್..’ ಸಾಂಗ್ ಬಿಡುಗಡೆ ಆಗಿದೆ. ಲಿರಿಕಲ್ ಸಾಂಗ್ ನೋಡಿ ಯಶ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಲು ಈ ಸಾಂಗ್ ಸಹಕಾರಿ ಆಗಿದೆ. ಬಹುಭಾಷೆಯಲ್ಲಿ ‘ತೂಫಾನ್’ ಸೌಂಡು ಮಾಡುತ್ತಿದೆ.

ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆಯೇ ‘ಕೆಜಿಎಫ್ 2’ ಚಿತ್ರದಿಂದ ‘ತೂಫಾನ್..’ ಹಾಡು ಮೂಡಿಬಂದಿದೆ. ಈ ಲಿರಿಕಲ್ ವಿಡಿಯೋ ನೋಡಿದ ಅಭಿಮಾನಿಗಳು ಶಹಭಾಷ್ ಎನ್ನುತ್ತಿದ್ದಾರೆ. ರವಿ ಬಸ್ರೂರು ಅವರ ಸಂಗೀತ ನಿರ್ದೇಶನದಲ್ಲಿ ಈ ಸಾಂಗ್ ತಯಾರಾಗಿದೆ. ಸಾಹಿತ್ಯ ಕೂಡ ಅವರೇ ಬರೆದಿದ್ದಾರೆ.

ಈ ಹಾಡಿನಲ್ಲಿ ಯಶ್ ಗೆಟಪ್ ಗಮನ ಸೆಳೆಯುತ್ತಿದೆ. ಎಂದಿನಂತೆ ಅವರು ಆ್ಯಂಗ್ರಿ ಯಂಗ್ ಮ್ಯಾನ್ ಅವತಾರದಲ್ಲಿ ಲುಕ್ ನೀಡಿದ್ದಾರೆ. ಖಳರ ಎದೆಯಲ್ಲಿ ನಡುಕ ಹುಟ್ಟಿಸುವ ಹಾಗೆ ಅಬ್ಬರಿಸಿದ್ದಾರೆ. ಹೊರರಾಜ್ಯಗಳಲ್ಲಿ ಇರುವ ಯಶ್ ಫ್ಯಾನ್ಸ್ ಕೂಡ ಸಾಂಗ್ ನೋಡಿ ಜೈಕಾರ ಹಾಕುತ್ತಿದ್ದಾರೆ.


