
‘ಕೆಜಿಎಫ್ 2’ ಸಿನಿಮಾ ತೆರೆಗೆ ಬರೋಕೆ ರೆಡಿ ಆಗಿದೆ. ಅದ್ದೂರಿಯಾಗಿ ಏಪ್ರಿಲ್ 14ರಂದು ಚಿತ್ರ ರಿಲೀಸ್ ಆಗುತ್ತಿದೆ. ಸಿನಿಮಾ ಬಗ್ಗೆ ಇರೋ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಹೀಗಿರುವಾಗಲೇ ಯಶ್ ಅವರು ಮುಂಬೈಗೆ ತೆರಳಿದ್ದಾರೆ.

ಮುಂಬೈನಲ್ಲಿ ಯಶ್ ಕಾಣಿಸಿಕೊಂಡ ವಿಡಿಯೋ ಹಾಗೂ ಫೋಟೋಗಳು ಸಖತ್ ವೈರಲ್ ಆಗಿದೆ. ಯಶ್ ಅಲ್ಲಿಗೆ ತೆರಳಿದ್ದು ಏಕೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಅಲ್ಲದೆ, ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಹ್ಯಾಶ್ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ.

ಯಶ್ ಅವರು ‘ಕೆಜಿಎಫ್ 2’ ಚಿತ್ರದ ನಿಮಿತ್ತ ಮುಂಬೈಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ವಿಶೇಷ ಹಾಡಿನ ಶೂಟಿಂಗ್ಗೆ ಅವರು ಮುಂಬೈಗೆ ತೆರಳಿರಬಹುದು ಎನ್ನುವ ಅಭಿಪ್ರಾಯವನ್ನು ಕೆಲವರು ಹೊರಹಾಕಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಸ್ಪಷ್ಟನೆ ಬರಬೇಕಿದೆ.

ಏಪ್ರಿಲ್ನಲ್ಲಿ ಸಿನಿಮಾ ತೆರೆಗೆ ತರೋಕೆ ಚಿತ್ರತಂಡ ಭರದ ಸಿದ್ಧತೆ ಮಾಡಿಕೊಂಡಿದೆ. ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡೋಕೆ ಚಿತ್ರತಂಡ ರೆಡಿ ಆಗಿದೆ. ಮುಂಬೈನಲ್ಲೂ ದೊಡ್ಡ ಮಟ್ಟದ ಪ್ರೀ-ರೀಲೀಸ್ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.

‘ಕೆಜಿಎಫ್ 1’ ಹಿಂದಿಯಲ್ಲಿ 44 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ‘ಕೆಜಿಎಫ್ 2’ ಚಿತ್ರದ ಗಳಿಕೆ 100 ಕೋಟಿ ರೂಪಾಯಿ ದಾಟುವ ನಿರೀಕ್ಷೆ ಇದೆ. ಚಿತ್ರದ ಬಗ್ಗೆ ಅಷ್ಟು ದೊಡ್ಡ ಮಟ್ಟದ ಹೈಪ್ ಸೃಷ್ಟಿ ಆಗಿದೆ. ಈ ಸಿನಿಮಾಗೆ ಫೈಟ್ ಕೊಡೋಕೆ ಹಲವು ಸ್ಟಾರ್ ಚಿತ್ರಗಳು ರೆಡಿ ಆಗಿವೆ.

ಮುಂಬೈನಲ್ಲಿ ಯಶ್