
ಬಹುಬೇಡಿಕೆಯ ನಟಿ ಕಿಯಾರಾ ಅಡ್ವಾಣಿ ಅವರು ನಟ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಯಾರಿಂದಲೂ ಪ್ರತಿಕ್ರಿಯೆ ಬಂದಿಲ್ಲ. ಈ ಸುದ್ದಿಯನ್ನು ಅಲ್ಲಗಳೆಯುವ ಗೋಜಿಗೂ ಅವರು ಕೈ ಹಾಕಿಲ್ಲ. ಹಾಗಾಗಿ ಅಭಿಮಾನಿಗಳಿಗೆ ಅನುಮಾನ ಮೂಡಿದೆ.

ಕಿಯಾರಾ ಅಡ್ವಾಣಿ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ದಕ್ಷಿಣ ಭಾರತದ ಸಿನಿಮಾಗಳಲ್ಲೂ ಅವರು ನಟಿಸುತ್ತಿದ್ದಾರೆ. ಹಾಗಾಗಿ ಗಾಸಿಪ್ಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ, ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಆ ಮೂಲಕ ವೃತ್ತಿಜೀವನದ ಬಗ್ಗೆ ಹೆಚ್ಚು ಗಮನ ನೀಡಿದ್ದಾರೆ.

ಬಾಲಿವುಡ್ನಲ್ಲಿ ಕಿಯಾರಾ ಅಡ್ವಾಣಿ ನಟನೆಯ ‘ಭೂಲ್ ಭುಲಯ್ಯ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಏ.26ರಂದು ಇದರ ಟ್ರೇಲರ್ ರಿಲೀಸ್ ಆಗಲಿದೆ. ಜನರ ಪ್ರತಿಕ್ರಿಯೆ ತಿಳಿಯಲು ಕಿಯಾರಾ ಅಡ್ವಾಣಿ ಉತ್ಸುಕರಾಗಿದ್ದಾರೆ.

‘ಭೂಲ್ ಭುಲಯ್ಯ 2’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಅವರು ಜೋಡಿ ಆಗಿದ್ದಾರೆ. ಹಿರಿಯ ನಟಿ ಟಬು ಕೂಡ ಇದರಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಮೇ 20ರಂದು ಈ ಚಿತ್ರ ತೆರೆಕಾಣಲಿದೆ.

ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಪರಸ್ಪರ ಪ್ರೀತಿಸುತ್ತಿದ್ದರು. ‘ಶೇರ್ಷಾ’ ಚಿತ್ರದ ಮೂಲಕ ಇಬ್ಬರಿಗೂ ದೊಡ್ಡ ಗೆಲುವು ಸಿಕ್ಕಿತು. ಆದರೆ ಇತ್ತೀಚಿನ ದಿನಗಳಲ್ಲಿ ಅವರಿಬ್ಬರ ನಡುವೆ ವೈಮನಸ್ಸು ಮೂಡಿದೆ ಎಂಬ ಗಾಸಿಪ್ ಹಬ್ಬಿದೆ.