Shikhar Dhawan: ಕಿಚ್ಚ ಸುದೀಪ್​-ಶಿಖರ್​ ಧವನ್​ ನಡುವಿನ ಆತ್ಮೀಯತೆಗೆ ಈ ಫೋಟೋಗಳೇ ಸಾಕ್ಷಿ; ಇಲ್ಲಿದೆ ಗ್ಯಾಲರಿ

Updated on: Feb 06, 2023 | 5:11 PM

Kichcha Sudeep | Shikhar Dhawan: ಶಿಖರ್​ ಧವನ್​ ಮತ್ತು ಕಿಚ್ಚ ಸುದೀಪ್​ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

1 / 5
ನಟ ಕಿಚ್ಚ ಸುದೀಪ್​ ಅವರಿಗೆ ಸಿನಿಮಾದ ಜೊತೆಗೆ ಕ್ರಿಕೆಟ್​ ಬಗ್ಗೆಯೂ ಅಪಾರ ಆಸಕ್ತಿ ಇದೆ. ಸಮಯ ಸಿಕ್ಕಾಗಲೆಲ್ಲ ಅವರು ಕ್ರಿಕೆಟ್​ ಆಗುತ್ತಾರೆ. ಕ್ರಿಕೆಟ್​ ಲೋಕದ ಅನೇಕರ ಜೊತೆಗೆ ಅವರಿಗೆ ಆತ್ಮೀಯ ಒಡನಾಟ ಇದೆ.

ನಟ ಕಿಚ್ಚ ಸುದೀಪ್​ ಅವರಿಗೆ ಸಿನಿಮಾದ ಜೊತೆಗೆ ಕ್ರಿಕೆಟ್​ ಬಗ್ಗೆಯೂ ಅಪಾರ ಆಸಕ್ತಿ ಇದೆ. ಸಮಯ ಸಿಕ್ಕಾಗಲೆಲ್ಲ ಅವರು ಕ್ರಿಕೆಟ್​ ಆಗುತ್ತಾರೆ. ಕ್ರಿಕೆಟ್​ ಲೋಕದ ಅನೇಕರ ಜೊತೆಗೆ ಅವರಿಗೆ ಆತ್ಮೀಯ ಒಡನಾಟ ಇದೆ.

2 / 5

ಕ್ರಿಕೆಟರ್​ ಶಿಖರ್​ ಧವನ್​ ಅವರನ್ನು ಕಿಚ್ಚ ಸುದೀಪ್​ ಅವರು ಭೇಟಿ ಆಗಿದ್ದಾರೆ. ಈ ಸೆಲೆಬ್ರಿಟಿಗಳ ಸಮಾಗಮದ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರೂ ಕೂಡ ಪರಸ್ಪರ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

3 / 5

ಕಿಚ್ಚ ಸುದೀಪ್​ ಅವರು ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ (ಸಿಸಿಎಲ್​) ಸಲುವಾಗಿ ಪ್ರಾಕ್ಟೀಸ್​ ಮಾಡುತ್ತಿದ್ದಾರೆ. ಫೆಬ್ರವರಿ 18ರಂದು ಈ ಪಂದ್ಯಗಳು ಆರಂಭ ಆಗಲಿವೆ. ಅದಕ್ಕೂ ಮುನ್ನ ಅವರು ಶಿಖರ್​ ಧವನ್​ ಅವರನ್ನು ಭೇಟಿ ಆಗಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

4 / 5

ಶಿಖರ್​ ಧವನ್​ ಮತ್ತು ಕಿಚ್ಚ ಸುದೀಪ್​ ಅವರು ಜೊತೆಯಾಗಿ ಒಂದಷ್ಟು ಸಮಯ ಕಳೆದಿದ್ದಾರೆ. ‘ಎಂಥ ಅತ್ಯುತ್ತಮ ಮತ್ತು ಪರಿಪೂರ್ಣ ರಾತ್ರಿ. ಮುಂಬರುವ ಐಪಿಎಲ್​ ಪಂದ್ಯಕ್ಕೆ ಶಿಖರ್​ ಧವನ್ ಅವರಿಗೆ ನನ್ನ ಶುಭ ಹಾರೈಕೆಗಳು’ ಎಂದು ಸುದೀಪ್​ ಟ್ವೀಟ್​ ಮಾಡಿದ್ದಾರೆ.

5 / 5

ಸುದೀಪ್​ ಹಂಚಿಕೊಂಡಿರುವ ಈ ಫೋಟೋಗಳು ವೈರಲ್​ ಆಗಿವೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಇಬ್ಬರು ಫೇವರೇಟ್​ ಸೆಲೆಬ್ರಿಟಿಗಳನ್ನು ಒಂದೇ ಫ್ರೇಮ್​ನಲ್ಲಿ ನೋಡಿ ಫ್ಯಾನ್ಸ್​ ಖುಷಿಪಟ್ಟಿದ್ದಾರೆ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us