‘ಕಿಚ್ಚ’ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮಧ್ಯದಲ್ಲೇ ಶಾಕಿಂಗ್ ಅಪ್ಡೇಟ್ ಕೊಟ್ಟಿದ್ದಾರೆ. ಅವರು ಈ ಸೀಸನ್ ಬಳಿಕ ಅವರು ಶೋ ತೊರೆಯೋ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಕೂಡ ನೀಡಿದ್ದಾರೆ. ಇದು ಫ್ಯಾನ್ಸ್ಗೆ ಬೇಸರ ಮೂಡಿಸಿದೆ.
ಸುದೀಪ್ ಬಿಗ್ ಬಾಸ್ನ ಅತಿಯಾಗಿ ಪ್ರೀತಿಸುತ್ತಾರೆ. ಸ್ಪರ್ಧಿಗಳನ್ನು ಅವರು ತಮ್ಮ ಮನೆಯವರಂತೆ ಕಾಣುತ್ತಾರೆ. ಈ ಕಾರಣಕ್ಕೆ ಪ್ರತಿ ಸೀಸನ್ನಲ್ಲಿ ಅವರು ಸ್ಪರ್ಧಿಗಳಿಗೆ ತಾವೇ ಅಡುಗೆ ಮಾಡಿ ಮನೆಯಿಂದ ಊಟ ಕಳುಹಿಸುತ್ತಾರೆ. ಇದು ಅವರಿಗೆ ಬಿಗ್ ಬಾಸ್ ಮೇಲಿರೋ ಪ್ರೀತಿಯನ್ನು ತೋರಿಸುತ್ತದೆ.
ಈ ಮೊದಲು ಐದು ಸೀಸನ್ಗಳಿಗೆ ಸುದೀಪ್ ಒಪ್ಪಂದ ಮಾಡಿಕೊಂಡಿದ್ದರು. ಐದು ಸೀಸನ್ಗಳಿಂದ ಅವರು ಪಡೆದುಕೊಂಡಿದ್ದು 20 ಕೋಟಿ ರೂಪಾಯಿ ಎನ್ನಲಾಗಿದೆ. ಅಂದರೆ, ಪ್ರತಿ ಸೀಸನ್ಗೆ ಅವರು ನಾಲ್ಕು ಕೋಟಿ ರೂಪಾಯಿ ಪಡೆದಂತೆ ಆಗುತ್ತದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ಗಾಗಿ ಸುದೀಪ್ ಅವರು 8 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ಸುದೀಪ್ ಕಡೆಯಿಂದಾಗಲೀ, ಕಲರ್ಸ್ ವಾಹಿನಿಯ ಕಡೆಯಿಂದಾಗಲೀ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.
ಸುದೀಪ್ ಅವರ ಖಡಕ್ ನಿರೂಪಣೆ ಇಷ್ಟ ಆಗುತ್ತದೆ. ಅವರಿಂದಲೇ ಶೋನ ಟಿಆರ್ಪಿ ಕೂಡ ಹೆಚ್ಚಿದೆ. ಈಗ ಅವರು ಇಲ್ಲ ಎಂದರೆ, ಶೋನ ವರ್ಚಸ್ಸು ಕಡಿಮೆ ಆಗೋ ಭಯ ಶುರುವಾಗಿದೆ.
Published On - 10:32 am, Mon, 14 October 24