
ಜಾಕ್ವೆಲಿನ್ ಫರ್ನಾಂಡಿಸ್ ತಲೆಯಮೇಲೆ ಇಡಿ ತೂಗುಗತ್ತಿ ತೂಗುತ್ತಿದೆ. ಸುಕೇಶ್ ಚಂದ್ರಶೇಖರ್ ನಡೆಸಿದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಅವರು ಕೂಡ ಸಿಕ್ಕಿ ಬಿದ್ದಿದ್ದಾರೆ. ಈ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಜಾಕ್ವೆಲಿನ್ ಅವರು ಕೆಕೆಆರ್ ಹಾಗೂ ಆರ್ಆರ್ ನಡುವಿನ ಪಂದ್ಯಕ್ಕೆ ತೆರಳಿದ್ದರು. ಕೋಲ್ಕತ್ತ ತಂಡವನ್ನು ಅವರು ಬೆಂಬಲಿಸಿದ್ದಾರೆ. ಆದರೆ, ಈ ಮ್ಯಾಚ್ನಲ್ಲಿ ಕೆಕೆಆರ್ ಸೋತಿದೆ.

ತಾವು ಬೆಂಬಲಿಸಿದ ತಂಡ ಸೋತರೂ ಜಾಕ್ವೆಲಿನ್ ಫರ್ನಾಂಡಿಸ್ಗೆ ಬೇಸರ ಆಗಿಲ್ಲ. ಪಂದ್ಯದುದ್ದಕ್ಕೂ ಅವರು ಸಂಭ್ರಮಿಸುತ್ತಲೇ ಇದ್ದರು.

ವಿಚಿತ್ರ ಎಂದರೆ ಕೋಲ್ಕತ್ತಾ ಸೋಲನ್ನು ಜಾಕ್ವೆಲಿನ್ ತಲೆಗೆ ಕಟ್ಟಲಾಗಿದೆ! ಹೌದು, ಕೋಲ್ಕತ್ತಾ ಸೋತಿದ್ದಕ್ಕೆ ಅನೇಕರು ಜಾಕ್ವೆಲಿನ್ ಅವರನ್ನು ಬೈದಿದ್ದಾರೆ. ಪಂದ್ಯ ಸೋಲಲು ಜಾಕ್ವೆಲಿನ್ ಮೈದಾನಕ್ಕೆ ಬಂದಿದ್ದೇ ಕಾರಣ ಎಂದು ದೂರಿದ್ದಾರೆ.

ಆದರೆ, ಇದಕ್ಕೆಲ್ಲ ಜಾಕ್ವೆಲಿನ್ ತಲೆಕೆಡಿಸಿಕೊಳ್ಳುವವರಲ್ಲ. ಅವರು ಬಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದ ‘ರಕ್ಕಮ್ಮ..’ ಹಾಡಿನ ಮೂಲಕ ಅವರು ಕನ್ನಡಕ್ಕೂ ಕಾಲಿಟ್ಟರು.