
ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ, ತೆಲುಗು, ತಮಿಳಿನಲ್ಲಿ ಗಮನ ಸೆಳೆಯುತ್ತಿದ್ದಾರೆ.

ಇದೀಗ ಮಲಯಾಳಂ ಚಿತ್ರರಂಗಕ್ಕೂ ನಟಿ ಕೃತಿ ಶೆಟ್ಟಿ ಪದಾರ್ಪಣೆ ಮಾಡಿದ್ದಾರೆ.

ಮಲಯಾಳಂನ ಜನಪ್ರಿಯ ನಟ ಟೊವಿನೋ ಥಾಮಸ್ರ ಹೊಸ ಸಿನಿಮಾದಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ.

'ಅಜಯಂತೆ ರಂಧಂ ಮೋಷನಂ' ಹೆಸರಿನ ಮಲಯಾಳಂ ಸಿನಿಮಾದಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ.

'ಅಜಯಂತೆ ರಂಧಂ ಮೋಷನಂ' ಸಿನಿಮಾದಲ್ಲಿ ಲಕ್ಷ್ಮಿ ಹೆಸರಿನ ಪಾತ್ರದಲ್ಲಿ ಕೃತಿ ನಟಿಸುತ್ತಿದ್ದಾರೆ.

ಕೃತಿ ಶೆಟ್ಟಿ ನಟನೆ ಆರಂಭಿಸಿದ್ದು ಹಿಂದಿ ಸಿನಿಮಾ ಮೂಲಕ. ಹೃತಿಕ್ ರೋಷನ್ ನಟನೆಯ 'ಸೂಪರ್ 30' ಸಿನಿಮಾದಲ್ಲಿ ಬಾಲನಟಿಯಾಗಿ ಕೃತಿ ನಟಿಸಿದ್ದರು.

ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದು ತೆಲುಗಿನ 'ಉಪ್ಪೆನ' ಸಿನಿಮಾ ಮೂಲಕ. ಆ ಸಿನಿಮಾ ಸೂಪರ್ ಹಿಟ್ ಆಯ್ತು.

ಮಲಯಾಳಂ ಸಿನಿಮಾ ಜೊತೆಗೆ ತಮಿಳಿನ ಜೀನಿ ಸಿನಿಮಾದಲ್ಲಿಯೂ ಕೃತಿ ನಟಿಸುತ್ತಿದ್ದಾರೆ.
Published On - 8:28 pm, Fri, 13 October 23