
ನಟಿ ಕೃತಿ ಶೆಟ್ಟಿ ಸಣ್ಣ ವಯಸ್ಸಿಗೆ ಹೀರೋಯಿನ್ ಆದರು. ‘ಉಪ್ಪೇನಾ’ ಸಿನಿಮಾ ಮೂಲಕ ಅವರು ಫೇಮಸ್ ಆದರು. ‘ಶ್ಯಾಮ್ ಸಿಂಘ ರಾಯ್’ ಚಿತ್ರ ಸೂಪರ್ ಹಿಟ್ ಆಯಿತು.

ಆದರೆ, ಇತ್ತೀಚೆಗೆ ಕೃತಿ ಶೆಟ್ಟಿ ಗೆದ್ದಿಲ್ಲ. ಅವರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋತಿವೆ. ಈ ಮಧ್ಯೆ ಅವರ ಬಗ್ಗೆ ಹೊಸ ವಿಚಾರ ಒಂದು ಕೇಳಿ ಬಂದಿದೆ.

ಕೃತಿ ಶೆಟ್ಟಿ ಅವರ ಪ್ರತಿ ಸಿನಿಮಾದಲ್ಲಿ 1.5 ಕೋಟಿ ರೂಪಾಯಿ ಕೊಡೋಕೆ ರೆಡಿ ಇದ್ದಾರೆ. ಆದಾಗ್ಯೂ ಕೃತಿ ಶೆಟ್ಟಿ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಇದಕ್ಕೆ ಅವರ ತಾಯಿ ಕಾರಣ ಎನ್ನಲಾಗುತ್ತಿದೆ.

ಕೃತಿ ಜೊತೆ ಅವರ ತಾಯಿಯೂ ಕಥೆ ಕೇಳುತ್ತಿದ್ದಾರಂತೆ. ಹೀಗಾಗಿ, ಅನೇಕ ಸಿನಿಮಾಗಳನ್ನು ಅವರು ರಿಜೆಕ್ಟ್ ಮಾಡಿದ್ದಾರೆ. ಅನೇಕ ಹೀರೋಯಿನ್ಗಳು ಸಿಕ್ಕ ಎಲ್ಲಾ ಆಫರ್ಗಳನ್ನು ಒಪ್ಪಿಕೊಂಡು ಬಿಡುತ್ತಾರೆ. ಆ ರೀತಿ ಆಗಬಾರದು ಅನ್ನೋದು ಅವರ ತಾಯಿಯ ಆಶಯ.

ಕೃತಿ ಶೆಟ್ಟಿ ಅವರ ತಾಯಿಯ ನಿರ್ಧಾರದ ಬಗ್ಗೆ ಅನೇಕರಿಗೆ ಬೇಸರ ಇದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ.