
ಮಂಗಳೂರು ಮೂಲದ ಕೃತಿ ಶೆಟ್ಟಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹುಬೇಗನೇ ಯಶಸ್ಸು ಗಳಿಸಿದ ನಟಿ.

'ಉಪ್ಪೆನ' ಹೆಸರಿನ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಕೃತಿ ಶೆಟ್ಟಿ, ಆ ಬಳಿಕ ಹಲವು ಅವಕಾಶಗಳನ್ನು ಬಾಚಿಕೊಂಡರು.

ನಾನಿ, ನಾಗ ಚೈತನ್ಯ, ರಾಮ್ ಪೋತಿನೇನಿ, ನಿತಿನ್ ಇನ್ನೂ ಕೆಲವು ಸ್ಟಾರ್ ನಟರ ಸಿನಿಮಾಗಳಲ್ಲಿ ಕೃತಿ ನಟಿಸಿದ್ದಾರೆ.

ತೆಲುಗು, ತಮಿಳಿನಲ್ಲಿ ಒಳ್ಳೆಯ ಬೇಡಿಕೆಯೇ ಕೃತಿ ಶೆಟ್ಟಿಗೆ ಇದೆ. ಆದರೂ ಕೃತಿ ಬೇರೆ ಚಿತ್ರರಂಗದ ಕಡೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ಕೃತಿ ಶೆಟ್ಟಿ ಬಾಲಿವುಡ್ ಸಿನಿಮಾಗಳತ್ತ ಗಮನ ಹರಿಸಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್ನಲ್ಲಿ ಅವಕಾಶಗಳನ್ನು ಬಾಚಿಕೊಳ್ಳಲು ಯತ್ನಿಸುತ್ತಿದ್ದು ಇದಕ್ಕಾಗಿ ವಿಶೇಷ ಫೊಟೊಶೂಟ್ ಮಾಡಿಸಿದ್ದಾರೆ.

ಬಾಲಿವುಡ್ನ ಜನಪ್ರಿಯ ನಿರ್ಮಾಣ ಸಂಸ್ಥೆಗಳನ್ನು ಸಂಪರ್ಕಿಸಿ ಕೆಲವು ಸಿನಿಮಾಗಳಿಗೆ ಆಡಿಷನ್ ಸಹ ನೀಡಿದ್ದಾರೆ ಎನ್ನಲಾಗುತ್ತಿದೆ.

ಅಂದಹಾಗೆ ಹಿಂದಿಯ 'ಸೂಪರ್ 30' ಕೃತಿ ಶೆಟ್ಟಿಯ ಮೊತ್ತ ಮೊದಲ ಸಿನಿಮಾ. ಆ ಸಿನಿಮಾದಲ್ಲಿ ಬಾಲನಟಿಯಾಗಿದ್ದರು ಕೃತಿ.