
ಕನ್ನಡದ ಕೆಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿರುವ ಕೃತಿ ಕರಬಂಧ ಇತ್ತೀಚೆಗೆ ಬಾಲಿವುಡ್ನಲ್ಲಿ ಸೆಟಲ್ ಆಗಿಬಿಟ್ಟಿದ್ದಾರೆ.

‘ಚಿರು’, ‘ಗೂಗ್ಲಿ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಕೃತಿ ಕರಬಂಧ ನಟಿಸಿದ್ದಾರೆ.

ನಟಿ ಕೃತಿ ಕರಬಂಧ ಈ ವರೆಗೆ 10 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ಆದರೆ ಕಳೆದ ಆರು ವರ್ಷಗಳಿಂದ ಕೇವಲ ಹಿಂದಿ ಸಿನಿಮಾಗಳಲ್ಲಿ ಮಾತ್ರವೇ ಕೃತಿ ಕರಬಂಧ ನಟಿಸುತ್ತಿದ್ದಾರೆ.

ಕಳೆದ ಆರು ವರ್ಷಗಳಲ್ಲಿ ಹಿಂದಿಯ ಸಿನಿಮಾಗಳ ಹೊರತಾಗಿ ಬೇರೆ ಯಾವುದೇ ಭಾಷೆಯ ಸಿನಿಮಾಗಳಲ್ಲಿ ಕೃತಿ ನಟಿಸಿಲ್ಲ.

2018ರಿಂದಲೂ ಕೃತಿ ಕರಬಂಧ ಕೇವಲ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಇದೀಗ ರಿಸ್ಕಿ ರೋಮಿಯೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕೃತಿ ಕರಬಂಧ ಇನ್ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿದ್ದು, ತಮ್ಮ ಗ್ಲಾಮರಸ್ ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.