ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಇನ್ಸ್ಟಾಗ್ರಾಮ್, ಫೇಸಬುಕ್ ಮೊದಲಾದ ತಾಣಗಳಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ನಟಿ ಕೃತಿ ಕರಬಂದ ಕೂಡ ಇದಕ್ಕೆ ಹೊರತಾಗಿಲ್ಲ.
ಕೃತಿ ಅವರು ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರನ್ನು ಇನ್ಸ್ಟಾಗ್ರಾಮ್ನಲ್ಲಿ 80 ಲಕ್ಷ ಜನರು ಹಿಂಬಾಲಿಸುತ್ತಿದ್ದಾರೆ. 8 ಮಿಲಿಯನ್ ಫಾಲೋವರ್ಸ್ ಆಗಿದ್ದಕ್ಕೆ ಬಿಕಿನಿ ಫೋಟೋ ಹಂಚಿಕೊಂಡಿದ್ದಾರೆ.
ಸಮುದ್ರತೀರದಲ್ಲಿ ಕುಳಿತಿರುವ ಫೋಟೋಗಳನ್ನು ಹಂಚಿಕೊಂಡಿರುವ ಕೃತಿ, ಬಿಕಿನಿ ಧರಿಸಿದ್ದಾರೆ. ‘8 ಮಿಲಿಯನ್ ಫಾಲೋವರ್ಸ್ ಸಿಕ್ಕಿದ್ದಕ್ಕೆ ಧನ್ಯವಾದ’ ಎಂದು ಈ ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ. ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಪುಲ್ಕಿತ್ ಸಾಮ್ರಾಟ್ ಜೊತೆ ಕೃತಿ ಡೇಟಿಂಗ್ ಮಾಡುತ್ತಿದ್ದಾರೆ. ಈ ವಿಚಾರವನ್ನು ಅವರು ಮುಚ್ಚಿಟ್ಟಿಲ್ಲ. ಇದನ್ನು ಓಪನ್ ಆಗಿಯೇ ಅವರು ಹೇಳಿಕೊಂಡಿದ್ದಾರೆ.
ಕೃತಿ ನಟನೆಯ ‘14 ಫೇರೆ’ ಚಿತ್ರ 2021ರಲ್ಲಿ ತೆರೆಗೆ ಬಂತು. ಇದಾದ ಬಳಿಕ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಅವರು ನಟನೆಯಿಂದ ಕೊಂಚ ಬ್ರೇಕ್ ಪಡೆದಿದ್ದಾರೆ.