ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ ತಮ್ಮ ಹೊಸ ಬೋಲ್ಡ್ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಮಂಗಳೂರು ಮೂಲದ ಕೃತಿ ಶೆಟ್ಟಿ ಮಿಂಚುತ್ತಿರುವುದು ಮಾತ್ರ ನೆರೆಯ ತೆಲುಗು ಚಿತ್ರರಂಗದಲ್ಲಿ.
ಮಂಗಳೂರು ಮೂಲದವರಾದರೂ ಬೆಳೆದಿದ್ದು, ಕಲಿತದ್ದು ಎಲ್ಲ ಮಹಾರಾಷ್ಟ್ರದ ಮುಂಬೈನಲ್ಲಿ.
ಎಳವೆಯಿಂದಲೇ ನಟನೆ ಬಗ್ಗೆ ಆಸಕ್ತಿಯುಳ್ಳ ಕೃತಿ ಶೆಟ್ಟಿ, ಹಲವು ಜಾಹೀರಾತು ಕೆಲವು ಹಿಂದಿ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದರು.
'ಉಪ್ಪೆನ' ತೆಲುಗು ಸಿನಿಮಾ ಮೂಲಕ ಕೃತಿ ಶೆಟ್ಟಿ ನಾಯಕಿಯಾಗಿ ಎಂಟ್ರಿ ನೀಡಿದರು.
ಮೊದಲ ಸಿನಿಮಾದಲ್ಲಿ ಹಳ್ಳಿಯ ಸುಂದರ ಹುಡುಗಿಯಾಗಿ ಕೃತಿ ಶೆಟ್ಟಿ ಕಾಣಿಸಿಕೊಂಡರು.
ಬಳಿಕ ಕೃತಿಗೆ ಸಿಕ್ಕಿರುವುದು ಬಹುತೇಕ ಗ್ಲಾಮರಸ್ ಪಾತ್ರಗಳೆ. ಹಾಗಾಗಿ ಅದಕ್ಕೆ ತಕ್ಕಂತೆ ಗ್ಲಾಮರಸ್ ಆಗಿ ಬದಲಾಗಿದ್ದಾರೆ ಕೃತಿ.