Bengaluru To Jog Falls: ಬೆಂಗಳೂರು ಟು ಜೋಗ ಜಲಪಾತಕ್ಕೆ ಕೆಎಸ್ಆರ್ಟಿಸಿ ಬಂಪರ್ ಆಫರ್
ಕರುನಾಡಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಜಲಪಾತಗಳಿಗೆ ಜೀವ ಕಳೆ ಬಂದಿದೆ. ಜಲಪಾತಗಳು ಭೋರ್ಗರೆಯುತ್ತಿವೆ. ಶಿವಮೊಗ್ಗದ ಜೋಗ ಜಲಪಾತ ಮೈತುಂಬಿ ಹರಿಯುತ್ತಿದ್ದು ಜಲಪಾತ ವೀಕ್ಷಿಸಲು ಸಾವಿರಾಋಉ ಸಂಖ್ಯೆಯಲ್ಲಿ ಪ್ರವಾಸಿಗರು ಹರಿದು ಬರುತ್ತಿದ್ದಾರೆ. ಸದ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬೆಂಗಳೂರು ಟು ಜೋಗ ಜಲಪಾತಕ್ಕೆ ವಿಶೇಷ ಪ್ಯಾಕೇಜ್ ಟೂರ್ ಆರಂಭಿಸಿದ್ದು ಪ್ರವಾಸಿಗರು ಮತ್ತಷ್ಟು ಎಂಜಾಯ್ ಮಾಡಬಹುದು. ರಮ್ಯ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.
Updated on: Jul 19, 2022 | 10:47 PM

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 'ಬೆಂಗಳೂರು ಟು ಜೋಗ ಜಲಪಾತ'ಕ್ಕೆ ವಿಶೇಷ ಪ್ಯಾಕೇಜ್ ಟೂರ್ ಆರಂಭಿಸಿದೆ.

ಬೆಂಗಳೂರಿನಿಂದ ರಾತ್ರಿ 10:30ಕ್ಕೆ ಹೊರಡುವ ಬಸ್, ಬೆಳಿಗ್ಗೆ 5:30ಕ್ಕೆ ಸಾಗರ ತಲುಪುತ್ತದೆ. ಸಾಗರದಿಂದ ರಾತ್ರಿ 10:00ಕ್ಕೆ ಹೊರಟು ಬೆಂಗಳೂರಿಗೆ ಬೆಳಿಗ್ಗೆ 5:00ಕ್ಕೆ ಸೇರುತ್ತದೆ.

ಶಿವಮೊಗ್ಗ, ಸಾಗರ ಮಾರ್ಗವಾಗಿ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ನೀಡಲಾಗುತ್ತಿದ್ದು ವಾರಾಂತ್ಯದ ದಿನಗಳಲ್ಲಿ (ಶುಕ್ರವಾರ ಮತ್ತು ಶನಿವಾರ) ಪ್ರಯಾಣ ಹೊರಡಬಹುದಾಗಿದೆ. ಇದೇ ಶುಕ್ರವಾರದಿಂದ (ಜುಲೈ 22) ಈ ಟೂರ್‌ಗೆ ಚಾಲನೆ ಸಿಗಲಿದೆ.

ಶುಕ್ರವಾರ ಹಾಗೂ ಶನಿವಾರ ಬೆಂಗಳೂರು-ಜೋಗ ಜಲಪಾತಕ್ಕೆ ಪ್ರಯಾಣಿಸುವ ವಯಸ್ಕರಿಗೆ 2,300 ರೂಪಾಯಿ ಹಾಗೂ ಮಕ್ಕಳಿಗೆ (6 ರಿಂದ 12 ವರ್ಷ) 2,100 ರೂಪಾಯಿ ದರ ನಿಗದಿಪಡಿಸಲಾಗಿದೆ.

ವಾರಾಂತ್ಯದ ದಿನಗಳಲ್ಲಿ (ಶುಕ್ರವಾರ ಮತ್ತು ಶನಿವಾರ) ಮತ್ತು ರಜಾದಿನಗಳಲ್ಲಿ ಮಾತ್ರ ಈ ಬಸ್ ಸೇವೆ ಇರಲಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಈ ವಿಶೇಷ ಟೂರ್ ಪ್ಯಾಕೇಜ್ನಿಂದಾಗಿ ಪ್ರವಾಸಿಗರು ಹಚ್ಚ ಹಸಿರಿನ ಮಧ್ಯೆ ಬೆಳ್ಳನೆ ಬಳಕುವ ಸುಂದರ ಜಲಪಾತವನ್ನು ಕಣ್ತುಂಬಿಕೊಳ್ಳಬಹುದು.




