Shruthi Dance Arangetram: ಅದ್ಭುತ ರಂಗ ಪ್ರವೇಶ ಮಾಡಿದ ಕುಮಾರಿ ಶೃತಿ ಪ್ರಜ್ಞಾ: ಶ್ರೀರಾಮನಿಗೆ ರಂಗ ವೇದಾರ್ಚನೆ, ನಾಟ್ಯದಾರತಿ

Kumari Shruthi Pragna Oruganti Stage Debut: ನೃತ್ಯಂ ಶ್ರೀ ರಾಮಮಯಂ - ಈ ಶೀರ್ಷಿಕೆಯಡಿ ಕುಮಾರಿ ಶೃತಿ ಪ್ರಜ್ಞಾ ಓರುಗಂಟಿ ಅವರು ಜೂನ್ 8, 2024ರಂದು ರಂಗ ಪ್ರವೇಶ ಮಾಡಿದರು. ಕಾರ್ಯಕ್ರಮದ ಕುರಿತು ಮಾತನಾಡಿದ ಗಣ್ಯರು ಕುಮಾರಿ ಶೃತಿ ಪ್ರಜ್ಞಾ ಮತ್ತು ಗುರು ಡಾ. ಜಯಲಕ್ಷ್ಮೀ ಜಿತೇಂದ್ರ, ಜೊತೆಗೆ ಪೋಷಕರಾದ ನೀರಜಾ ಮುನಿ ಗೋಟಿ ಹಾಗೂ ನರಸಿಂಹ ಪ್ರಸನ್ನ ಓರುಗಂಟಿ ಅವರನ್ನು ಅಭಿನಂದಿಸಿದರು. ವಿದ್ವಾನ್ ಅನೂರ್ ಅನಂತ ಕೃಷ್ಣ ಶರ್ಮ ಅವರು ಮಾತನಾಡಿ ಸಾಮಾನ್ಯ ರಂಗಪ್ರವೇಶಗಳಲ್ಲಿ ಇಲ್ಲದ ಹಾಗೆ, ಪಾತ್ರಗಳೇ ವೇದಿಕೆ ಮೇಲೆ ಬಂದದ್ದು ಒಂದು ಹೊಸ ಪ್ರಯತ್ನ ಎಂದು ಉತ್ತೇಜಿಸಿದರು.

|

Updated on:Jun 15, 2024 | 10:44 AM

Kumari Shruthi Pragna Oruganti Stage Debut: ಕುಮಾರಿ ಶೃತಿ ಪ್ರಜ್ಞಾ ಓರುಗಂಟಿ ಅವರಿಗೆ ಗುರುಗಳಾದ ಡಾ. ಜಯಲಕ್ಷ್ಮೀ ಜಿತೇಂದ್ರ ಅವರಿಂದ ಆಶೀರ್ವಚನ

1 / 13
ರಾಮ ಕಥನ ಅಜರಾಮರ ಎಂಬ ಬ್ರಹ್ಮದೇವನ ಉಕ್ತಿಯನ್ನು ಸ್ಮರಿಸಲು  ಮತ್ತೊಂದು ನಿದರ್ಶನವೆಂಬಂತೆ ನಡೆದ ಕಾರ್ಯಕ್ರಮವೇ "ನೃತ್ಯಂ ಶ್ರೀ ರಾಮಮಯಂ". ಈ ಶೀರ್ಷಿಕೆಯ ಅಡಿಯಲ್ಲಿ ಜೂನ್ 8, 2024ರಂದು ನಡೆದ ಕುಮಾರಿ ಶೃತಿ ಪ್ರಜ್ಞಾ ಓರುಗಂಟಿ ಅವರ (Kumari Shruthi Pragya Oruganti) ರಂಗವೇದಾರ್ಚನೆಯು (ರಂಗ ಪ್ರವೇಶ arangetram) ರಾಮಮಯವೇ ಆಗಿತ್ತು. ಬೆಂಗಳೂರಿನ ಜೆ.ಎಸ್.ಎಸ್ ಸಭಾಂಗಣದಲ್ಲಿ (JSS Auditorium in Bangalore) ಜರುಗಿದ ಈ ಕಾರ್ಯಕ್ರಮವು ಎಲ್ಲರ ಮನಸೂರೆಗೊಂಡಿತು

2 / 13
ನರ್ತಕರು ಏಕವ್ಯಕ್ತಿ ಪ್ರದರ್ಶನದ ಮೂಲಕ ನಾಟ್ಯ ರಂಗಕ್ಕೆ ಪಾದಾರ್ಪಣೆ ಮಾಡುವ ಕಾರ್ಯಕ್ರಮ (Stage Debut) ರಂಗ ವೇದಾರ್ಚನೆ (ರಂಗಪ್ರವೇಶ). ರಂಗವೇದಿಕೆಗೆ ನಾಟ್ಯವೇದದಿಂದ ಭಾವಜ್ಞಾನದ ಪುಷ್ಪಾರ್ಚನೆ  ಈ ರಂಗವೇದಾರ್ಚನೆ. ಭಗವತ್ ಸಾನಿಧ್ಯದಲ್ಲಿ ದೀಪ ಪ್ರಜ್ವಲನನದೊಂದಿಗೆ ಈ ಕಾರ್ಯಕ್ರಮ ನಾಂದಿಯಾಯಿತು. ಹೆಸರೇ ಹೇಳುವಂತೆ  ಈ ರಂಗವೇದಾರ್ಚನೆಯು ಶ್ರೀ ರಾಮನ ಹೆಸರಿನಲ್ಲಿ ದೈವಕ್ಕೆ ಸಲ್ಲಿಸಿದ ನೃತ್ಯ ಸೇವೆಯಾಗಿತ್ತು.

3 / 13
 ಕುಮಾರಿ ಶೃತಿ ಪ್ರಜ್ಞಾ ಅವರು ಗುರು ಡಾ. ಜಯಲಕ್ಷ್ಮೀ ಜಿತೇಂದ್ರ ಭಾಗವತ್ ಅವರ ಸಮ್ಮುಖದಲ್ಲಿ ಬಾಲ್ಯದಿಂದಲೂ ಅಭ್ಯಾಸ ಮಾಡಿದ್ದು, ರಂಗವೇದಾರ್ಚನೆಯ ಮೂಲಕ ಜೂನ್ 8 ರಂದು ನಾಟ್ಯರಂಗಕ್ಕೆ ಪ್ರವೇಶಿಸಿದರು. ಅನೇಕ ವರ್ಷಗಳ ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಫಲವನ್ನು ಪ್ರಪಂಚದ ಮುಂದೆ ಪ್ರದರ್ಶಿಸುವ ದಿನವೂ ಅದಾಗಿತ್ತು. ಗಾಯಕರು, ವಾದಕರ ಸಮ್ಮುಖದಲ್ಲಿ ಅವರ ಸಂಗೀತಕ್ಕೆ ಒಗ್ಗೂಡುವಂತೆ ತಾಳ, ಲಯ, ಭಾವ, ಇತ್ಯಾದಿ ಅನೇಕ ಅಂಶಗಳ ಜ್ಞಾನವನ್ನು ವೇದಿಕೆ ಮೇಲೆ ಪ್ರದರ್ಶಿಸುವ ಜವಾಬ್ದಾರಿಯನ್ನು  ಉತ್ತಮವಾಗಿ ನಿರ್ವಹಿಸಿದರು.

4 / 13
ಶ್ರುತಿ ಅವರು ತಮ್ಮ ನರ್ತನವನ್ನು ಭಗವತ್ ಸನ್ನಿಧಿಗೆ ಪುಷ್ಪಾರ್ಚನೆ ಗೈದು; ಅಷ್ಟದಿಕ್ಪಾಲಕರಿಗೆ, ಆಚಾರ್ಯರಿಗೆ, ಸಂಗೀತ ಕಲಾವಿದರಿಗೆ ಹಾಗೂ ಸಭಿಕರಿಗೆ ಅನುಕ್ರಮವಾಗಿ ಸ್ವಾಗತ ಕೋರಿ ಎಲ್ಲರ ಆಶೀರ್ವಾದ ಪಡೆಯುವುದರ ಮೂಲಕ ಪುಷ್ಪಾಂಜಲಿಯಿಂದ ಪ್ರಾರಂಭಿಸಿದರು. ಪ್ರಥಮ ಪೂಜಿತ ಗಣಪನಿಗೆ ನಮಿಸಲೆಂದು ಭರತಕಲಾಮಣಿ ಗುರು ಶ್ರೀ ಸಿ.ರಾಧಾಕೃಷ್ಣ ಅವರ ಸಂಯೋಜನೆಯ ಗಣೇಶ ಕವಿತ್ವ ನೃತ್ಯ ಬಂಧ ಪ್ರಸ್ತುತ ಪಡಿಸಲಾಯಿತು.

5 / 13
ಮುಂದೆ ಶ್ರೀಮತಿ ವಿದುಷಿ ಭಾರತೀ ವೇಣುಗೋಪಾಲ್ ರವರ ರಚನೆಯ ಅಂಡಾಳ್ ಸ್ತುತಿ. ಇದರಲ್ಲಿ ಗೋದಾ ದೇವಿಯ ಮುಗ್ಧ ಪ್ರೀತಿಯನ್ನು, ಕೃಷ್ಣ ಭಕ್ತಿಯನ್ನು ಚಿತ್ರಿಸಲಾಯಿತು. ನಂತರದಲ್ಲಿ ಭರತನಾಟ್ಯದ ಮಾರ್ಗಾನುಸಾರ ದೇವರನ್ನು, ರಾಜರನ್ನು ಶ್ಲಾಘಿಸುವ, ''ಶಬ್ದ" ಎನ್ನುವ ನೃತ್ಯಬಂಧ. ಕೃಷ್ಣನ ಕುರಿತಾದ ಈ ರಚನೆಯು, ನೃತ್ತ ಹಾಗೂ ಪದಾಭಿನಯ ಮಿಶ್ರಿತವಾಗಿದ್ದು ಪ್ರೇಕ್ಷಕರನ್ನು ರಂಜಿಸಿತು. ಮಾರ್ಗಪದ್ಧತಿಯಲ್ಲಿ ಬರುವ ಸುದೀರ್ಘ ನೃತ್ಯ ಪ್ರದರ್ಶನವಾದ ವರ್ಣವು ನಂತರ ಪ್ರೇಕ್ಷಕರ ಕಣ್ತುಂಬಿಸಿತ್ತು.

6 / 13
ಇದು ಶ್ರೀಕೃಷ್ಣನನ್ನಾಧರಿಸಿದ್ದು, ಮುಗ್ಧಾನಾಯಕಿಯ ಪಾತ್ರವನ್ನು ಶ್ರುತಿಯವರು ಯಶಸ್ವಿಯಾಗಿ ನಿರ್ವಹಿಸಿದರು. ಇದರಲ್ಲಿ ಘನವಾದ ನೃತ್ಯ ಪ್ರಧಾನ ಜತಿಗಳನ್ನು, ಅಭಿನಯದ ಪ್ರೌಢಿಮೆಯನ್ನು ಪ್ರದರ್ಶಿಸಲಾಯಿತು. ಅವರು ಹೇಳುತ್ತಿದ್ದ ಸೊಲ್ಲುಕಟ್ಟು, ಜತಿಗಳು, ನಾಭಿಯಿಂದ ಸ್ಫುರಿಸಿ ಕಂಠದಿಂದ ಹೊರಹೊಮ್ಮುತ್ತಿತ್ತು. ಅದಕ್ಕೆ ಸರಿದೂಗುವಂತೆ ಕೈಯಲ್ಲಿ ನುಡಿಸುತ್ತಿದ್ದ ನಟುವಂಗವೂ ಅವರ ತಾಳಜ್ಞಾನ ಲಯ ಜ್ಞಾನದ ವಿಸ್ತಾರವನ್ನು ಹೇಳುತ್ತಿತ್ತು. ನಟುವಂಗದಲ್ಲಿನ ಸ್ಪಷ್ಟತೆಯು ಪ್ರೇಕ್ಷಕರನ್ನೂ, ಅವರ ಮನಸ್ಸನ್ನೂ ಆಕರ್ಷಿಸಿತು.

7 / 13
ನಂತರ, ಪ್ರಹ್ಲಾದ ಹಿರಣ್ಯ ಕಶ್ಯಪರ ಕಥಾ ಹಂದರವನ್ನೊಳಗೊಂಡ ನರಸಿಂಹ ಸ್ತುತಿ.  ಹಿರಣ್ಯಕಶಿಪುವಿನ ವಧೆಯ ನಂತರ ಉಗ್ರ ನರಸಿಂಹನು ಪ್ರಹ್ಲಾದನ ಮೊರೆಗೆ ಶಾಂತನಾದ ಪ್ರಸಂಗವನ್ನು ಕುಮಾರಿ ಶ್ರುತಿ ಮನಮುಟ್ಟುವಂತೆ ಅಭಿನಯಿಸಿದರು. ಸಭಿಕರೆಲ್ಲರು ನಿರೀಕ್ಷಿಸುತ್ತಿದ್ದ ಅಂತಿಮ ಪ್ರದರ್ಶನವೆಂದರೆ ರಾಮಾಯಣದ ಕಥಾ ನಿರೂಪಣೆ.

8 / 13
ಗುರು ಡಾ. ಜಯಲಕ್ಷ್ಮೀ ಜಿತೇಂದ್ರರವರು ರಾಮಾಯಣದ ಕುರಿತಾಗಿ ಹೃದಯಂಗಮವಾದ ಮಾತುಗಳನ್ನಾಡಿ ಜನರ ಮೆಚ್ಚುಗೆಗೆ ಪಾತ್ರರಾದರು. ನಂತರ ಶ್ರೀಮತಿ ವಿದುಷಿ ಭಾರತೀ ವೇಣುಗೋಪಾಲ್ ರವರು ಹಾಡಿದ ಮಧುರವಾದ ನಾಮ ರಾಮಾಯಣಕ್ಕೆ ಕುಮಾರಿ ಶೃತಿ ಪ್ರಜ್ಞಾ ಪದ - ಅರ್ಥ - ಭಾವಾಭಿನಯಗಳನ್ನು ಮಾಡಿದರು. ರಾಮಾಯಣದಲ್ಲಿ ಬರುವ ಹಲವಾರು ಪಾತ್ರಗಳ ವೈವಿಧ್ಯತೆಯನ್ನು ಜನರಿಗೆ ಸ್ಪಷ್ಟವಾಗಿ ತಿಳಿ ಹೇಳುವಂತೆ ಅಭಿನಯಿಸಿದರು. ಬಾಲಕಾಂಡದಲ್ಲಿ ಬರುವ ಸ್ವಯಂವರ ಪ್ರಸಂಗದಲ್ಲಿ ಪ್ರತಿಯೊಬ್ಬ ರಾಜನ ಗರ್ವ , ಶಿವಧನಸ್ಸನ್ನು ಎತ್ತಲಾರದೆ ಸೋಲನ್ನು ಕಂಡ ಪರಿ ಹಾಸ್ಯಮಯವಾಗಿ ಜನರನ್ನು ಬಹಳ ಆಕರ್ಷಿಸಿತು. ಶೂರ್ಪಣಖಿಯ ಕಥಾ ಭಾಗದಲ್ಲಿ ಆಕೆಯ  ಹಾವ ಭಾವಗಳಲ್ಲಿನ ಕ್ಷಣ ಮಾತ್ರದ ಪಾತ್ರ ಪರಿವರ್ತನೆ , ಆಕೆಯ ರಕ್ಕಸ ಹಾಗೂ ಸೌಮ್ಯ ಭಾವಗಳ ನಟನೆಯನ್ನು  ಜನರು ಸಂತಸದಿಂದ ವೀಕ್ಷಿಸಿದರು.  ಹೀಗೇ ಪ್ರತಿಯೊಂದು ಪ್ರಸಂಗ , ಹಲವಾರು ಪಾತ್ರಗಳು ಅದ್ಭುತವಾಗಿ ಮೂಡಿ ಬಂದವು.

9 / 13
ಈ ಪ್ರಸ್ತುತ ಅಂತ್ಯದಲ್ಲಿ ಅನಿರೀಕ್ಷಿತವಾಗಿ ಹನುಮಂತ ಪಾತ್ರದ ಪ್ರವೇಶ ಸಭಿಕರನ್ನು ದಿಗ್ಭ್ರಮೆಗೊಳಿಸಿತು. ಹನುಮಂತನ ತಲ್ಲೀನ ನೃತ್ಯದ ನಡುವೆ ಸೀತಾ ದೇವಿಯ ಪ್ರವೇಶ ಮತ್ತೊಂದು ಬೆರಗು ಮೂಡಿಸಿತು. ಮುಂದುವರೆಯುತ್ತಾ ಲಕ್ಷ್ಮಣ ಆಗಮನ... ಹನುಮನೊಡನೆ ಆಲಿಂಗನ ಪ್ರೇಕ್ಷಕರನ್ನು ಭಾವುಕರನ್ನಾಗಿಸಿತು. ವೇದಿಕೆಯ ಮೇಲೆ ರಾಮನ ಘೋಷವು ಕೇಳುತ್ತಿರುವಾಗ ಎಲ್ಲರೂ ರಾಮನಾಮದಲ್ಲಿ ತಲ್ಲೀನರಾಗಿದ್ದಾಗ, ಶ್ರೀರಾಮನ ಪ್ರೇಕ್ಷಕರ ನಡುವಣ ಆಗಮನ ಭಾವಸತ್ವಕ್ಕೆ ಪುಷ್ಟಿ ನೀಡಿತು. ಈ ರಾಮ ಪರಿವಾರಕ್ಕೆ ಆರತಿಯನ್ನು ಬೆಳಗಿದ ಕು. ಶೃತಿ ಪ್ರಜ್ಞಾ ಅವರು ತಮ್ಮ ನಾಟ್ಯ ಪ್ರದರ್ಶನವನ್ನು ವೇದಿಕೆಯಲ್ಲಿ ಸಮರ್ಪಿಸಿದರು.

10 / 13
ಕಾರ್ಯಕ್ರಮದ ಕುರಿತು ಮಾತನಾಡಿದ ಗಣ್ಯರು ಕುಮಾರಿ ಶೃತಿ ಪ್ರಜ್ಞಾ ಅವರನ್ನು ಮತ್ತು ಗುರು ಡಾ. ಜಯಲಕ್ಷ್ಮೀ ಜಿತೇಂದ್ರ ಅವರನ್ನು ಜೊತೆಗೆ ಅವರ ಪೋಷಕರಾದ ಶ್ರೀಮತಿ ನೀರಜಾ ಮುನಿ ಗೋಟಿ ಹಾಗೂ ಶ್ರೀ ನರಸಿಂಹ ಪ್ರಸನ್ನ ಓರುಗಂಟಿ ಅವರುಗಳನ್ನು ಅಭಿನಂದಿಸಿದರು. ವಿದ್ವಾನ್ ಅನೂರ್ ಅನಂತ ಕೃಷ್ಣ ಶರ್ಮ ಅವರು ಮಾತನಾಡಿ ಸಾಮಾನ್ಯ ರಂಗಪ್ರವೇಶಗಳಲ್ಲಿ ಇಲ್ಲದ ಹಾಗೆ, ಪಾತ್ರಗಳೇ ವೇದಿಕೆ ಮೇಲೆ ಬಂದದ್ದು ಒಂದು ಹೊಸ ಪ್ರಯತ್ನ ಎಂದು ಉತ್ತೇಜಿಸಿದರು.

11 / 13
ಸುಖ್ಯಾತ ವೇಣು ವಾದಕರಾದ  ವಿದ್ವಾನ್ ವೇಣುಗೋಪಾಲ್  ಅವರು ಮಾತನಾಡಿ, ಶೃತಿ ಪ್ರಜ್ಞಾ ಅವರ ಅಭಿನಯ ಚತುರತೆಯನ್ನು ಕೊಂಡಾಡಿದರು. ಮತ್ತೋರ್ವ ಅತಿಥಿಗಳಾದ ಬ್ರಹ್ಮಶ್ರೀ ಜೋಸ್ಯೂಲ ಸದಾನಂದ ಶಾಸ್ತ್ರಿ ಅವರು ಸೂಕ್ಷ್ಮ ವಿಷಯಗಳನ್ನು ಸಹ ಗಮನಿಸಿ ಆನಂದ ವ್ಯಕ್ತ ಪಡಿಸಿದರು. ತಾಟಕಿ ಹೋಮವನ್ನು ಭಂಗ ಗೊಳಿಸುವಾಗ ಬಲ ಭಾಗಕ್ಕೆ  ಅಶುದ್ಧತೆಗಳಿಂದ ಅಪವಿತ್ರ ಮಾಡಿದ ಕಾರಣ ಅಲ್ಲಿ ಬ್ರಹ್ಮ ಸ್ಥಾನ ಎಂದು, ಹೀಗೆ ಹಲವಾರು ಸೂಕ್ಷ್ಮಾಂಶಗಳು  ನೃತ್ಯ ಸಂಯೋಜನೆಯಲ್ಲಿ ಬಹಳ ಚೆನ್ನಾಗಿ ಮೂಡಿ ಬಂದಿದೆ ಎಂದು ಗುರು ಜಯಲಕ್ಷ್ಮೀ ಜಿತೇಂದ್ರ ಅವರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಗಣ್ಯರಾದ  ಶ್ರೀ ರಾಮಕೃಷ್ಣ ಶ್ರೌತಿ, ಶ್ರೀಮತಿ ಡಾ. ಗೀತಾ ಬಿ ವಿ, ಶ್ರೀಮತಿ ಆರ್ ಶಾಂತಿ ಸರ್ವೋತ್ತಮನ್  ಅವರುಗಳು ಉಪಸ್ಥಿತರಿದ್ದರು.

12 / 13
ರಂಗ ಪ್ರವೇಶ ಹಿನ್ನೆಲೆಯಲ್ಲಿ ಕುಮಾರಿ ಶೃತಿ ಪ್ರಜ್ಞಾ ಓರುಗಂಟಿ ಮತ್ತು ಗುರು ಡಾ. ಜಯಲಕ್ಷ್ಮೀ ಜಿತೇಂದ್ರ

13 / 13

Published On - 5:06 pm, Thu, 13 June 24

Follow us
ಪವಿತ್ರಾ ಗೌಡ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?

ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?

ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!

ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್

ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ

ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್

ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ

ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ

ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ

ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು