
ನಟಿ ಖುಷ್ಬೂ ಸುಂದರ್ ಅವರು ಸಿನಿಮಾ ಮತ್ತು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಈಗ ಅವರು ಕಾನ್ ಚಿತ್ರೋತ್ಸವದಲ್ಲಿ ಭಾಗಿ ಆಗಿದ್ದಾರೆ. ಆ ಸಂದರ್ಭದ ಫೋಟೊಗಳನ್ನು ಅವರು ಹಂಚಿಕೊಂಡಿದ್ದಾರೆ.

ಸೆಲೆಬ್ರಿಟಿಗಳು ಬಗೆಬಗೆಯ ವಿನ್ಯಾಸದ ಡ್ರೆಸ್ ಧರಿಸಿ ಕಾನ್ ಚಿತ್ರೋತ್ಸವಕ್ಕೆ ಬರುತ್ತಾರೆ. ಆದರೆ ಖುಷ್ಬೂ ಸುಂದರ್ ಅವರು ಸೀರೆ ಧರಿಸಿ ಅಲ್ಲಿಗೆ ತೆರಳಿದ್ದಾರೆ. ರೆಡ್ ಕಾರ್ಪೆಟ್ನಲ್ಲಿ ಅವರು ಪೋಸ್ ನೀಡಿದ್ದಾರೆ.

ಕಾಂಜೀವರಂ ಸೀರೆ ಧರಿಸಿದ ಖುಷ್ಬೂ ಸುಂದರ್ ಅವರು ಹೆಮ್ಮೆಯಿಂದ ನಮ್ಮ ಸಂಸ್ಕೃತಿ ಬಗ್ಗೆ ಪೋಸ್ಟ್ ಮಾಡಿದ್ದಾರೆ. ನೇಕಾರರಿಗೆ ಉತ್ತೇಜನ ನೀಡುವ ಸಲುವಾಗಿ ಖುಷ್ಬೂ ಅವರು ಈ ಸೀರೆ ಧರಿಸಿ ಕಾನ್ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ಖುಷ್ಬೂ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫ್ರಾನ್ಸ್ನಲ್ಲಿ ಭಾರತದ ಉಡುಗೆ ಧರಿಸಿ ಮಿಂಚಿದ ಅವರನ್ನು ಕಂಡು ಅಭಿಮಾನಿಗಳು ಖುಷಿಯಿಂದ ಕಮೆಂಟ್ ಮಾಡಿದ್ದಾರೆ.

ಮೇ 16ರಿಂದ 27ರ ತನಕ ಕಾನ್ ಚಿತ್ರೋತ್ಸವ ನಡೆಯುತ್ತಿದೆ. ಇದರಲ್ಲಿ ವಿವಿಧ ದೇಶಗಳ ಸೆಲೆಬ್ರಿಟಿಗಳು ಭಾಗವಹಿಸುತ್ತಿದ್ದಾರೆ. ಭಾರತದಿಂದ ಅನೇಕ ನಟಿಯರು ಪಾಲ್ಗೊಂಡಿದ್ದಾರೆ. ಅವರಿಗೆ ಖುಷ್ಬೂ ಸಾಥ್ ನೀಡಿದ್ದಾರೆ.