EPFO Portal: ಇಪಿಎಫ್ಒ ಪೋರ್ಟಲ್ನಲ್ಲಿ ಕೆವೈಸಿ ಅಪ್ಡೇಟ್ ಮಾಡುವ ವಿಧಾನ ಇಲ್ಲಿದೆ ನೋಡಿ
ಇಪಿಎಫ್ ಪೋರ್ಟಲ್ನಲ್ಲಿ ಸೇವೆಗಳನ್ನು ಪಡೆಯಬೇಕಿದ್ದರೆ ನೋ ಯುವರ್ ಕಸ್ಟಮರ್ ಅಥವಾ ಕೆವೈಸಿ (KYC) ಅಪ್ಡೇಟ್ ಮಾಡಿರಬೇಕಾಗುತ್ತದೆ. ಬ್ಯಾಂಕ್ ಖಾತೆ ವಿವರವನ್ನೂ ಅಪ್ಡೇಟ್ ಮಾಡಿರಬೇಕಾಗುತ್ತದೆ. ವಂಚನೆಗಳನ್ನು ತಡೆಗಟ್ಟುವುದಕ್ಕೂ ಕೆವೈಸಿ ಅಪ್ಡೇಟ್ ಉತ್ತಮ ಮಾರ್ಗವಾಗಿದೆ. ಎಪಿಎಫ್ಒ ಪೋರ್ಟಲ್ನಲ್ಲಿ ಕೆವೈಸಿ ಅಪ್ಡೇಟ್ ಮಾಡುವುದು ಹೇಗೆಂಬ ಮಾಹಿತಿ ಇಲ್ಲಿದೆ.
Updated on:Feb 09, 2023 | 1:01 PM

ಇಪಿಎಫ್ ವ್ಯಾಪ್ತಿಯಡಿ ಬರುವ ಎಲ್ಲ ಉದ್ಯೋಗಿಗಳಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ಯೂನಿವರ್ಸಲ್ ಅಕೌಂಟ್ ನಂಬರ್ (UAN) ನೀಡಿರುತ್ತದೆ. ಉದ್ಯೋಗಿಗಳು ಕಂಪನಿ ಬದಲಾಯಿಸಿದರೂ ಯುಎಎನ್ ಬದಲಾಗುವುದಿಲ್ಲ. ಯುಎಎನ್ ಸಂಖ್ಯೆ ಬಳಸಿಕೊಂಡು ಉದ್ಯೋಗಿಗಳು ಇಪಿಎಫ್ ಪೋರ್ಟಲ್ನಲ್ಲಿ ಬ್ಯಾಲೆನ್ಸ್ ಪರಿಶೀಲಿಸುವುದೂ ಸೇರಿದಂತೆ ಹಲವು ಸೇವೆಗಳನ್ನು ಪಡೆಯಬಹುದಾಗಿದೆ.

ಮೊದಲಿಗೆ ಯುಎನ್, ಪಾಸ್ವರ್ಡ್ ಹಾಗೂ ಕ್ಯಾಪ್ಚಾ ಕೋಡ್ ನಮೂದಿಸಿ ಇಪಿಎಫ್ ಪೋರ್ಟಲ್ಗೆ (https://unifiedportal-mem.epfindia.gov.in/memberinterface/) ಲಾಗಿನ್ ಆಗಬೇಕು.

‘ಮ್ಯಾನೇಜ್’ ಸೆಕ್ಷನ್ನಲ್ಲಿ ಕೆವೈಸಿ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ಅರ್ಜಿ ನಮೂನೆಯು ಸ್ಕ್ರೀನ್ನಲ್ಲಿ ಕಾಣಿಸುತ್ತದೆ. ಅದರಲ್ಲಿ ಪ್ಯಾನ್, ಆಧಾರ್, ಪಾಸ್ಪೋರ್ಟ್ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಬೇಕು.

ಯಾವ ದಾಖಲೆಯನ್ನು ಅಪ್ಡೇಟ್ ಮಾಡಬೇಕೆಂದು ಬಯಸಿದ್ದೀರೋ ಆ ದಾಖಲೆಗೆ ಸಂಬಂಧಿಸಿದ ಹೆಸರಿನ ಎದುರು ಇರುವ ಬಾಕ್ಸ್ನಲ್ಲಿ ಟಿಕ್ ಮಾರ್ಕ್ ಮಾಡಿ. ನಂತರ ದಾಖಲೆ ಸಂಖ್ಯೆ, ಹೆಸರು, ಹೆಚ್ಚುವರಿ ಮಾಹಿತಿಯನ್ನು ನಮೂದಿಸಿ.

‘ಪೆಂಡಿಂಗ್ ಕೆವೈಸಿ’ ಸೆಕ್ಷನ್ನಲ್ಲಿ ‘ಸೇವ್’ ಬಟನ್ ಮೇಲೆ ಕ್ಲಿಕ್ ಮಾಡಿ. ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಯ ದತ್ತಾಂಶಗಳ ಜತೆ ಇಪಿಎಫ್ಒ ಪರಿಶೀಲಿಸುತ್ತದೆ.

ವಿವರಗಳು ಸಂಬಂಧಪಟ್ಟ ಇಲಾಖೆಯ ದತ್ತಾಂಶಗಳ ಜತೆ ತಾಳೆಯಾದರೆ ದೃಢೀಕರಿಸಿದ ಬಗ್ಗೆ ಸಂದೇಶ ಕಾಣಿಸುತ್ತದೆ.

ಇಪಿಎಫ್ಒ ವೆಬ್ಸೈಟ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಪರಿಶೀಲನೆ, ಇಪಿಎಫ್ ಭಾಗಶಃ ವಿತ್ಡ್ರಾ, ವಿತ್ಡ್ರಾ, ಇಪಿಎಫ್ ಬ್ಯಾಲೆನ್ಸ್ ವರ್ಗಾವಣೆ ಸೇರಿದಂತೆ ಅನೇಕ ಸೇವೆಗಳನ್ನು ಉದ್ಯೋಗಿಗಳು ಪಡೆಯಬಹುದಾಗಿದೆ.
Published On - 1:00 pm, Thu, 9 February 23



















