AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kylian Mbappe: ರಿಯಲ್ ಮ್ಯಾಡ್ರಿಡ್​ಗೆ ಕಿಲಿಯನ್ ಎಂಬಾಪ್ಪೆ ಎಂಟ್ರಿ

Kylian Mbappe: ಕಿಲಿಯನ್ ಎಂಬಾಪ್ಪೆ 2017 ರಲ್ಲಿ ಫ್ರಾನ್ಸ್​ನ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದವು ಇದೀಗ ಮುಗಿದಿದ್ದು, ಇದರ ಬೆನ್ನಲ್ಲೇ ಕಿಲಿಯನ್ ಎಂಬಾಪ್ಪೆ ಸ್ಪೇನ್ ಲೀಗ್​ನತ್ತ ಮುಖ ಮಾಡಿದ್ದಾರೆ. ಅದರಂತೆ ಇನ್ನು ಮುಂದೆ ಫ್ರಾನ್ಸ್ ತಾರೆ ರಿಯಲ್ ಮ್ಯಾಡ್ರಿಡ್ ಕ್ಲಬ್​ ಪರ ಲಾ ಲೀಗಾದಲ್ಲಿ ಕಣಕ್ಕಿಳಿಯಲಿದ್ದಾರೆ.

ಝಾಹಿರ್ ಯೂಸುಫ್
|

Updated on:Jul 17, 2024 | 8:39 AM

Share
ಫ್ರಾನ್ಸ್​ನ ಖ್ಯಾತ ಕಾಲ್ಚೆಂಡು ಚತುರ ಕಿಲಿಯನ್ ಎಂಬಾಪ್ಪೆ (Kylian Mbappe) ರಿಯಲ್ ಮ್ಯಾಡ್ರಿಡ್ ಕ್ಲಬ್ ಪರ ಕಣಕ್ಕಿಳಿಯುವುದು ಖಚಿತವಾಗಿದೆ. ರಿಯಲ್ ಮ್ಯಾಡ್ರಿಡ್ ಜೊತೆಗಿನ ಒಪ್ಪಂದಕ್ಕೆ ಎಂಬಾಪ್ಪೆ ಸಹಿ ಹಾಕಿದ್ದು, ಅದರಂತೆ ಮುಂದಿನ 5 ವರ್ಷಗಳ ಕಾಲ ಸ್ಪೇನ್​ನ ಖ್ಯಾತ ಕ್ಲಬ್ ಆಡಲು ಫ್ರಾನ್ಸ್ ತಾರೆ ಆಡಲಿದ್ದಾರೆ.

1 / 5
ಮಂಗಳವಾರ (ಜು.16) ಸ್ಯಾಂಟಿಯಾಗೊ ಬರ್ನಾಬ್ಯೂನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಎಂಬಾಪ್ಪೆಯ ಅವರ ರಿಯಲ್ ಮ್ಯಾಡ್ರಿಡ್ ಜೆರ್ಸಿಯನ್ನು ಸಹ ಅನಾವರಣಗೊಳಿಸಲಾಗಿದೆ. ಅದರಂತೆ ಮುಂಬರುವ ಲಾ ಲೀಗಾ ಫುಟ್​ಬಾಲ್ ಲೀಗ್​ನಲ್ಲಿ ಕಿಲಿಯನ್ ಎಂಬಾಪ್ಪೆ 9 ನಂಬರ್​ ಜೆರ್ಸಿಯಲ್ಲಿ ರಿಯಲ್ ಮ್ಯಾಡ್ರಿಡ್ ಪರ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಸ್ಪೇನ್ ಲೀಗ್​ನಲ್ಲಿ ಹೊಸ ಸೀಸನ್ ಆರಂಭಿಸಲು 25 ವರ್ಷದ ಯುವ ತಾರೆ ಸಜ್ಜಾಗಿದ್ದಾರೆ.

2 / 5
ಇದಕ್ಕೂ ಮುನ್ನ ಕಿಲಿಯನ್ ಎಂಬಾಪ್ಪೆ ಫ್ರಾನ್ಸ್​ನ ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಕ್ಲಬ್ ಪರ ಆಡುತ್ತಿದ್ದರು. ಈ ಒಪ್ಪಂದವು ಜೂನ್ ತಿಂಗಳಲ್ಲಿ ಕೊನೆಗೊಂಡಿದ್ದು, ಇದರ ಬೆನ್ನಲ್ಲೇ ಎಂಬಾಪ್ಪೆ ರಿಯಲ್ ಮ್ಯಾಡ್ರಿಡ್​ನತ್ತ ಮುಖ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದೀಗ ಎಂಬಾಪ್ಪೆ ರಿಯಲ್ ಮ್ಯಾಡ್ರಿಡ್​ಗೆ ಎಂಟ್ರಿ ಕೊಡುವುದರೊಂದಿಗೆ ಈ ಸುದ್ದಿ ನಿಜವಾಗಿದೆ.

3 / 5
ಏಳು ವರ್ಷಗಳ ಹಿಂದೆ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ ಸೇರಿಕೊಂಡಿದ್ದ ಕಿಲಿಯನ್ ಎಂಬಾಪ್ಪೆ ಪಿಎಸ್​ಜಿ ಪರ ಒಟ್ಟು 308 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಬರೋಬ್ಬರಿ 256 ಗೋಲುಗಳಿಸಿದ್ದಾರೆ. ಅದರಲ್ಲೂ ಕಳೆದ ಸೀಸನ್​ನಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಎಂಬಾಪ್ಪೆ 45 ಗೋಲು ಬಾರಿಸಿ ಮಿಂಚಿದ್ದರು.

4 / 5
ಇದಾಗ್ಯೂ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ ಪರ ತಮ್ಮ ಒಪ್ಪಂದವನ್ನು ಮುಂದುವರೆಸಲು ಮುಂದಾಗಲಿಲ್ಲ. ಅಲ್ಲದೆ ಲೀಗ್ 1 (ಫ್ರಾನ್ಸ್ ಲೀಗ್) ತೊರೆಯುವ ಮೂಲಕ ಇದೀಗ ಕಿಲಿಯನ್ ಎಂಬಾಪ್ಪೆ ಲಾ ಲೀಗಾ (ಸ್ಪೇನ್ ಲೀಗ್) ಅಂಗಳದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅದರಂತೆ ಆಗಸ್ಟ್ 1 ರಂದು ನಡೆಯಲಿರುವ ಮಿಲಾನ್ ವಿರುದ್ಧ ಅಥವಾ ಆಗಸ್ಟ್ 4 ರಂದು ನಡೆಯಲಿರುವ ಬಾರ್ಸಿಲೋನಾ ವಿರುದ್ಧದ ಪಂದ್ಯದ ಮೂಲಕ ಕಿಲಿಯನ್ ಎಂಬಾಪ್ಪೆ ರಿಯಲ್ ಮ್ಯಾಡ್ರಿಡ್ ಪರ ಕಣಕ್ಕಿಳಿಯಲಿದ್ದಾರೆ.

5 / 5

Published On - 8:38 am, Wed, 17 July 24