ಸ್ವದೇಶಿ ಸ್ಮಾರ್ಟ್‌ಫೋನ್ ಲಾವಾ ಸ್ಟೋರ್ಮ್ 5G ಮಾರಾಟ ಆರಂಭ: ಇಂದೇ ಖರೀದಿಸಿ

Updated on: Dec 29, 2023 | 6:55 AM

Lava Storm 5G First Sale: ಹೊಸ ಲಾವಾ ಸ್ಟೋರ್ಮ್ 5G ಅನ್ನು ಆಯ್ದ ಬ್ಯಾಂಕ್ ಕೊಡುಗೆಗಳೊಂದಿಗೆ 11,999 ರೂ. ಗಳಿಗೆ ಖರೀದಿಸಬಹುದು. ಇದರ ಮೂಲ ಬೆಲೆ 13,499 ರೂ. ಆಗಿದೆ. ಲಾವಾದ ಅಧಿಕೃತ ಸ್ಟೋರ್ ಮತ್ತು ಇ ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಮಾರಾಟ ಕಾಣುತ್ತಿದೆ.

1 / 6
ದೇಶೀಯ ಪ್ರಸಿದ್ಧ ಸ್ಮಾರ್ಟ್​ಫೋನ್ ಸಂಸ್ಥೆ ಲಾವಾ ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಫೋನ್​ಗಳನ್ನು ಅನಾವರಣ ಮಾಡುತ್ತಿದೆ. ಮೊನ್ನೆಯಷ್ಟೆ ಸ್ವದೇಶಿ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಭಾರತದಲ್ಲಿ ಹೊಸ ಲಾವಾ ಸ್ಟೋರ್ಮ್ 5G (Lava Storm 5G) ಅನ್ನು ರಿಲೀಸ್ ಮಾಡಿತ್ತು. ಈ ಫೋನ್ ಇದೀಗ ಖರೀದಿಗೆ ಸಿಗುತ್ತಿದೆ.

ದೇಶೀಯ ಪ್ರಸಿದ್ಧ ಸ್ಮಾರ್ಟ್​ಫೋನ್ ಸಂಸ್ಥೆ ಲಾವಾ ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಫೋನ್​ಗಳನ್ನು ಅನಾವರಣ ಮಾಡುತ್ತಿದೆ. ಮೊನ್ನೆಯಷ್ಟೆ ಸ್ವದೇಶಿ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಭಾರತದಲ್ಲಿ ಹೊಸ ಲಾವಾ ಸ್ಟೋರ್ಮ್ 5G (Lava Storm 5G) ಅನ್ನು ರಿಲೀಸ್ ಮಾಡಿತ್ತು. ಈ ಫೋನ್ ಇದೀಗ ಖರೀದಿಗೆ ಸಿಗುತ್ತಿದೆ.

2 / 6

ಹೊಸ ಲಾವಾ ಸ್ಟೋರ್ಮ್ 5G ಅನ್ನು ಆಯ್ದ ಬ್ಯಾಂಕ್ ಕೊಡುಗೆಗಳೊಂದಿಗೆ 11,999 ರೂ. ಗಳಿಗೆ ಖರೀದಿಸಬಹುದು. ಇದರ ಮೂಲ ಬೆಲೆ 13,499 ರೂ. ಆಗಿದೆ. ಲಾವಾದ ಅಧಿಕೃತ ಸ್ಟೋರ್ ಮತ್ತು ಇ ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಮಾರಾಟ ಕಾಣುತ್ತಿದೆ.

3 / 6

ಭಾರತದಲ್ಲಿ ಲಾವಾ ಸ್ಟೋರ್ಮ್ 5G ಸ್ಮಾರ್ಟ್‌ಫೋನ್ ಅನ್ನು ಗೇಲ್ ಗ್ರೀನ್ ಮತ್ತು ಥಂಡರ್ ಬ್ಲ್ಯಾಕ್ ಎಂಬ ಎರಡು ಆಕರ್ಷಕ ಬಣ್ಣ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್​ಫೋನ್ ಇತ್ತೀಚೆಗೆ ಬಿಡುಗಡೆ ಆದ ರಿಯಲ್ ಮಿ C67 5G ಮತ್ತು ರೆಡ್ಮಿ 13C 5G ಫೋನಿಗೆ ಕಠಿಣ ಪೈಪೋಟಿ ನೀಡುತ್ತದೆ.

4 / 6

ಲಾವಾ ಸ್ಟಾರ್ಮ್ 5G 120Hz ರಿಫ್ರೆಶ್ ರೇಟ್‌ನೊಂದಿಗೆ 6.78-ಇಂಚಿನ FHD+ IPS ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. 50MP ಪ್ರಾಥಮಿಕ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಸಂವೇದಕವನ್ನು ನೀಡಲಾಗಿದೆ.

5 / 6

ಲಾವಾ ಸ್ಟಾರ್ಮ್ 5G ಯಲ್ಲಿ 16MP ಮುಂಭಾಗದ ಕ್ಯಾಮೆರಾ ಇದೆ. 8GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. ಹೆಚ್ಚುವರಿಯಾಗಿ, ಇದು 8GB ವರ್ಚುವಲ್ RAM ಅನ್ನು ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ.

6 / 6

ಲಾವಾ ಸ್ಟಾರ್ಮ್ 5ಜಿ 33W ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಸೈಡ್-ಮೌಂಟೆಡ್ ಅಲ್ಟ್ರಾ-ಫಾಸ್ಟ್ ಫಿಂಗರ್‌ಪ್ರಿಂಟ್ ಗುರುತಿಸುವಿಕೆ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಹೊಂದಿದೆ.

Loading...
Unable to load recommendations.
Follow Us